AI ಸಮ್ಮೇಳನ ಪ್ರತಿಭಟನೆ ಪ್ರಕರಣದಲ್ಲಿ ಬಂಧನ: ಉದಯ್ ಬಾನು ಚಿಬ್ ಜಾಮೀನು ಮೇಲೆ ಬಿಡುಗಡೆ

ದೆಹಲಿ ಹೈಕೋರ್ಟ್ ಒಂದು ದಿನ ಮೊದಲು ಸೆಷನ್ಸ್ ನ್ಯಾಯಾಲಯ ಚಿಬ್ ಅವರ ಜಾಮೀನನ್ನು ಸ್ಥಗಿತಗೊಳಿಸಿದ್ದ ಆದೇಶಕ್ಕೆ ತಡೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
Uday Bhanu Chib
ಉದಯ್ ಬಾನು ಚಿಬ್
Updated on

ನವದೆಹಲಿ: “ಶರ್ಟ್‌ಲೆಸ್ ಪ್ರತಿಭಟನೆ” ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಚಿಬ್ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ದೆಹಲಿ ಹೈಕೋರ್ಟ್ ಒಂದು ದಿನ ಮೊದಲು ಸೆಷನ್ಸ್ ನ್ಯಾಯಾಲಯ ಚಿಬ್ ಅವರ ಜಾಮೀನನ್ನು ಸ್ಥಗಿತಗೊಳಿಸಿದ್ದ ಆದೇಶಕ್ಕೆ ತಡೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಜೈಲಿನಿಂದ ಹೊರಬಂದ ತಕ್ಷಣ ಚಿಬ್, ಪಕ್ಷವು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ವಿರುದ್ಧ ದೃಢವಾಗಿ ನಿಂತಿದೆ ಎಂಬುದೇ ತನ್ನ ಮೊದಲ ಸಂದೇಶ ಎಂದು ಹೇಳಿದರು.

ಈ ಒಪ್ಪಂದವನ್ನು ತಡೆಯಲು ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇದರ ಪರಿಣಾಮಗಳು ತಿಳಿದಿದ್ದರೂ ಪ್ರಧಾನಮಂತ್ರಿ ಒಪ್ಪಂದಕ್ಕೆ ಮುಂದುವರಿಯುತ್ತಿದ್ದಾರೆ. ಇದು ಅವರು ಪಾಶ್ಚಾತ್ಯರ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ಭಾನುವಾರ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು, ಮ್ಯಾಜಿಸ್ಟ್ರೇಟ್ ನೀಡಿದ್ದ ಜಾಮೀನು ಆದೇಶವನ್ನು ಸೆಷನ್ಸ್ ನ್ಯಾಯಾಲಯ ಸ್ಥಗಿತಗೊಳಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಚಿಬ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದರು.

Uday Bhanu Chib
AI ಶೃಂಗಸಭೆ: ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಲಿನಿಂದ ಒದ್ದು ಓಡಿಸಿದ ಸಾರ್ವಜನಿಕರು, Video!

ಫೆಬ್ರವರಿ 28ರಂದು ಮ್ಯಾಜಿಸ್ಟ್ರೇಟ್ ಚಿಬ್ ಅವರಿಗೆ ಜಾಮೀನು ನೀಡಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಸೆಷನ್ಸ್ ನ್ಯಾಯಾಲಯ ಅದನ್ನು ತಡೆಹಿಡಿಯಿತು. ಫೆಬ್ರವರಿ 24ರಂದು ವಿಚಾರಣಾ ನ್ಯಾಯಾಲಯವು ಚಿಬ್ ಅವರನ್ನು ನಾಲ್ಕು ದಿನಗಳ ಪೊಲೀಸ್ ವಶಕ್ಕೆ ಕಳುಹಿಸಿತ್ತು.

ತಿಹಾರ್ ಜೈಲಿನ ಹೊರಗೆ ದಾಖಲಾದ ದೃಶ್ಯಗಳಲ್ಲಿ, ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತ, ಚಿಬ್ ಅವರನ್ನು ಭುಜಗಳ ಮೇಲೆತ್ತಿಕೊಂಡು ಕಾರಿನವರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂತು. ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಚಿಬ್ ಅವರನ್ನು ಫೆಬ್ರವರಿ 20ರಂದು ದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ನಡೆದ “ಶರ್ಟ್‌ಲೆಸ್ ಪ್ರತಿಭಟನೆ” ಪ್ರಕರಣದಲ್ಲಿ ಬಂಧಿಸಲಾಗಿತ್ತು.

Uday Bhanu Chib
AI Summitನಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ: ಬಂಧಿತ ಕಾಂಗ್ರೆಸ್ ಕಾರ್ಯಕರ್ತರು 5 ದಿನ ಪೊಲೀಸ್ ವಶಕ್ಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com