

ಸೋಷಿಯಲ್ ಮೀಡಿಯಾದಲ್ಲಿ ಒಂದು ಹೃದಯಸ್ಪರ್ಶಿ ಪ್ರಪೋಸಲ್ ವಿಡಿಯೋ ವೈರಲ್ ಆಗಿದ್ದು, ತನ್ನ ಪ್ರಿಯತಮೆಗೆ ದೊಡ್ಡ ಸರ್ಪ್ರೈಸ್ ನೀಡಲು ಒಬ್ಬ ಯುವಕ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಒಳ್ಳೆ ಐಡಿಯಾ ಮಾಡಿಕೊಂಡಿದ್ದ. ಯುವಕ ತನ್ನ ಲವರ್ ಮನೆ ಮುಂದೆ ತನ್ನ ಸಂಬಂಧಿಕರು ಮತ್ತು ಆತ್ಮೀಯರನ್ನು ಸೇರಿಸಿ, ಬಾಲಿವುಡ್ ಹಾಡು ಟೇನು ಲೇಕೆ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಾ ಪ್ರಪೋಸ್ ಮಾಡಿದ್ದಾನೆ.
ವೈರಲ್ ವಿಡಿಯೋದಲ್ಲಿ, ಯುವಕ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೆಳಗೆ ರಸ್ತೆಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾನೆ. ಆತನ ಪ್ರೇಯಸಿ ಮನೆಯ ಬಾಲ್ಕನಿಯಲ್ಲಿ ನಗುತ್ತಾ ನಿಂತು ನೋಡುತ್ತಿರುತ್ತಾಳೆ. ಅವನ ಕುಟುಂಬದವರು ಮತ್ತು ಸ್ನೇಹಿತರು ಕೂಡ ಸೇರಿ ಉತ್ಸಾಹಭರಿತ ನೃತ್ಯ ಪ್ರದರ್ಶನ ಮಾಡುತ್ತಾರೆ. ಹಿನ್ನಲೆಯಲ್ಲಿ “ತೆನು ಲೇಕೆ ಮೈನ್ ಜಾವಾಂಗಾ” ಹಾಡು ಕೇಳಿಸುತ್ತಿರುವಾಗ, ಎಲ್ಲರೂ ಡ್ಯಾನ್ಸ್ ಸ್ಟೆಪ್ಸ್ ಮಾಡಿ ಪ್ರಪೋಸಲ್ ಮಾಡುತ್ತಿರುವ ರೀತಿ ಚೇತೋಹಾರಿಯಾಗಿದೆ.
ಈ ದೃಶ್ಯವನ್ನು ಬಾಲ್ಕನಿಯಿಂದ ನೋಡುತ್ತಿರುವ ಯುವತಿ, ಈ ಭರ್ಜರಿ ಸರ್ಪ್ರೈಸ್ ನೋಡಿ ಆಶ್ಚರ್ಯಗೊಂಡಂತೆ ಕಾಣಿಸುತ್ತಾಳೆ. ಸಂಗೀತ ಮತ್ತು ನೃತ್ಯ ಮುಂದುವರಿದ ನಂತರ, ಯುವಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಿ, ಜನರ ಹರ್ಷೋದ್ಗಾರದ ನಡುವೆ ಅವಳಿಗೆ ಪ್ರಪೋಸಲ್ ಮಾಡುತ್ತಾನೆ. ಕ್ಷಣದಲ್ಲೇ ಆ ಸ್ಥಳ ಸಂಭ್ರಮದ ವಾತಾವರಣದಿಂದ ತುಂಬಿ ಹೋಗುತ್ತದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆದಿದ್ದು, ಹಲವರು ಹುಡುಗ ಪ್ರೊಪೋಸ್ ಮಾಡಿದ ರೀತಿ “ಅತ್ಯಂತ ಸೊಗಸಾದದು”, “ಹೃದಯಸ್ಪರ್ಶಿ” ಮತ್ತು “ನೇರವಾಗಿ ಬಾಲಿವುಡ್ ಸಿನಿಮಾದ ದೃಶ್ಯದಂತೆ” ಎಂದು ಕೊಂಡಾಡಿದ್ದಾರೆ. ಯುವಕ ತನ್ನ ಕುಟುಂಬ ಮತ್ತು ಸ್ನೇಹಿತರನ್ನೂ ಈ ವಿಶೇಷ ಕ್ಷಣದಲ್ಲಿ ಭಾಗಿಯಾಗಲು ಮಾಡಿರುವ ಪ್ರಯತ್ನವನ್ನು ಅನೇಕರು ಮೆಚ್ಚಿದ್ದಾರೆ.
ಕೆಲವರು ಆ ಯುವತಿ ಬಹಳ ವಿಶೇಷವಾಗಿರಬೇಕು, ಏಕೆಂದರೆ ಅವಳಿಗಾಗಿ ಇಷ್ಟು ದೊಡ್ಡ ಸರ್ಪ್ರೈಸ್ ಪ್ರೊಪೋಸ್ ಯೋಜಿಸಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಬ್ಬರ ಕುಟುಂಬಗಳ ಸಹಕಾರವನ್ನು ಪ್ರಶಂಸಿಸಿ, ಇದು ಕೇವಲ ಜೋಡಿಯ ಪ್ರೀತಿಯಷ್ಟೇ ಅಲ್ಲ, ಅವರ ಕುಟುಂಬಗಳ ಆತ್ಮೀಯತೆಯನ್ನೂ ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಜನರು ಖುಷಿಯಿಂದ ನೋಡುತ್ತಿದ್ದಾರೆ.
Advertisement