LPG, ಟೊಮ್ಯಾಟೊ ಬೆಲೆ ಏರಿಕೆ ಎಫೆಕ್ಟ್: ಏಪ್ರಿಲ್‌ನಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಥಾಲಿ ಊಟದ ಬೆಲೆ ಗಣನೀಯ ಹೆಚ್ಚಳ: Crisil

ಊಟಗಳ ತಯಾರಿಕಾ ಸರಾಸರಿ ವೆಚ್ಚವನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದ ಮಾರುಕಟ್ಟೆ ದರಗಳ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ಕ್ರಿಸಿಲ್ ಹೇಳಿದೆ.
vegetarian and non-vegetarian thali costs in April
ಸಸ್ಯಾಹಾರಿ, ಮಾಂಸಾಹಾರಿ ಥಾಲಿ ಊಟದ ಬೆಲೆ ಗಣನೀಯ ಹೆಚ್ಚಳ
Updated on

ನವದೆಹಲಿ: ಟೊಮ್ಯಾಟೊ, ಅಡುಗೆ ಎಣ್ಣೆ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳ ಬೆಲೆ ಏರಿಕೆಯಿಂದ 2026ರ ಏಪ್ರಿಲ್‌ನಲ್ಲಿ ಮನೆಗಳಲ್ಲಿ ತಯಾರಿಸುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟಗಳ ವೆಚ್ಚ ವರ್ಷದಿಂದ ವರ್ಷಕ್ಕೆ ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದು ಕ್ರಿಸಿಲ್ (Crisil) ಇಂಟೆಲಿಜೆನ್ಸ್‌ ತಿಳಿಸಿದೆ.

ಕ್ರಿಸಿಲ್ ತನ್ನ ಇತ್ತೀಚಿನ ‘ರೋಟಿ ರೈಸ್ ರೇಟ್’ ವರದಿಯಲ್ಲಿ, 'ಏಪ್ರಿಲ್‌ನಲ್ಲಿ ಮನೆಗಳಲ್ಲಿ ತಯಾರಿಸುವ ಸಸ್ಯಾಹಾರಿ (ವೆಜ್) ಮತ್ತು ಮಾಂಸಾಹಾರಿ (ನಾನ್-ವೆಜ್) ಥಾಲಿ ಊಟಗಳ ವೆಚ್ಚ ವರ್ಷದಿಂದ ವರ್ಷಕ್ಕೆ 2% ಏರಿಕೆಯಾಗಿದೆ. ಈ ಊಟಗಳ ತಯಾರಿಕಾ ಸರಾಸರಿ ವೆಚ್ಚವನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದ ಮಾರುಕಟ್ಟೆ ದರಗಳ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ಹೇಳಿದೆ.

ಅಂತೆಯೇ ಈ ಮಾಸಿಕ ಸೂಚ್ಯಂಕವು ಆಹಾರ ಪದಾರ್ಥಗಳ ಬೆಲೆಯ ಬದಲಾವಣೆಗಳು ಸಾಮಾನ್ಯ ಜನರ ಖರ್ಚಿನ ಮೇಲೆ ಬೀರುವ ಪರಿಣಾಮವನ್ನು ಪ್ರತಿಬಿಂಬಿಸಿದ್ದು, ಧಾನ್ಯಗಳು, ಬೇಳೆಕಾಳುಗಳು, ಬ್ರಾಯ್ಲರ್ ಕೋಳಿ ಮಾಂಸ, ತರಕಾರಿಗಳು, ಮಸಾಲೆಗಳು, ಅಡುಗೆ ಎಣ್ಣೆ ಮತ್ತು ಅಡುಗೆ ಅನಿಲಗಳ ಬೆಲೆ ಏರಿಕೆಯು ಥಾಲಿ ಊಟದ ಬೆಲೆ ಬದಲಾವಣೆಯ ಪ್ರಮುಖ ಕಾರಣಗಳೆಂದು ಗುರುತಿಸಿದೆ.

vegetarian and non-vegetarian thali costs in April
ಭಾರತ ದೇಶ 'ದೇವತೆ'ಯಲ್ಲ.. ವಂದೇ ಮಾತರಂ ಜನಗಣಮನಕ್ಕೆ ಸಮಾನವಲ್ಲ..: AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ

ಥಾಲಿ ಬೆಲೆ ಏರಿಕೆಗೆ ಟೊಮ್ಯಾಟೋ ಕಾರಣ

ಥಾಲಿಗಳ ವೆಚ್ಚ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಟೊಮ್ಯಾಟೊ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ವರದಿ ಪ್ರಕಾರ, ದಕ್ಷಿಣ ರಾಜ್ಯಗಳಲ್ಲಿ ಬೆಳೆ ಪ್ರದೇಶ 3-4 ಶೇಕಡಾ ಕುಸಿದ ಪರಿಣಾಮ ಉತ್ಪಾದನೆ ಕಡಿಮೆಯಾಗಿ, 2025ರ ಏಪ್ರಿಲ್‌ನಲ್ಲಿ ಕಿಲೋಗೆ ₹21 ಇದ್ದ ಟೊಮ್ಯಾಟೊ ಬೆಲೆ, 2026ರ ಏಪ್ರಿಲ್‌ನಲ್ಲಿ ಶೇಕಡಾ 38ರಷ್ಟು ಏರಿಕೆಯಾಗಿ ಕಿಲೋಗೆ ₹29ಕ್ಕೆ ತಲುಪಿದೆ.

ತೈಲ-ಅಡುಗೆ ಎಣ್ಣೆ ಬೆಲೆಯೂ ಏರಿಕೆ

ಜಾಗತಿಕ ಪೂರೈಕೆ ವ್ಯತ್ಯಯಗಳಿಂದ ಅಡುಗೆ ಎಣ್ಣೆ ಮತ್ತು LPG ಸಿಲಿಂಡರ್‌ಗಳ ಬೆಲೆಯೂ ವರ್ಷದಿಂದ ವರ್ಷಕ್ಕೆ ತಲಾ 7 ಶೇಕಡಾ ಏರಿಕೆಯಾಗಿದ್ದು, ಗೃಹ ಅಡುಗೆ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರವೃತ್ತಿ ಕುರಿತು ಪ್ರತಿಕ್ರಿಯಿಸಿದ ಕ್ರಿಸಿಲ್ ಇಂಟೆಲಿಜೆನ್ಸ್ ನಿರ್ದೇಶಕ ಪುಷಣ್ ಶರ್ಮಾ, “ಟೊಮ್ಯಾಟೊ ಬೆಲೆ ಮುಂದಿನ ದಿನಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದ್ದು, ಕಡಿಮೆ ಬೇಸಿಗೆ ಬಿತ್ತನೆ, ದುರ್ಬಲ ಬೆಲೆ ನಿರೀಕ್ಷೆ ಹಾಗೂ ಉತ್ತರ ಭಾರತದ ಪ್ರಮುಖ ಬೆಳೆ ಪ್ರದೇಶಗಳಲ್ಲಿ ಬಿಸಿಗಾಳಿಯ ಆತಂಕದಿಂದ ಜುಲೈ-ಆಗಸ್ಟ್ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ” ಎಂದು ಹೇಳಿದರು.

ಬೆಳೆ ಇಳಿಕೆ

ಆದರೆ, ಈ ಥಾಲಿ ವೆಚ್ಚ ಏರಿಕೆಯನ್ನು ಈರುಳ್ಳಿ, ಆಲೂಗಡ್ಡೆ ಮತ್ತು ಬೇಳೆಕಾಳುಗಳ ಕಡಿಮೆ ಬೆಲೆ ಭಾಗಶಃ ಸಮತೋಲನಗೊಳಿಸಿದೆ. ತಡವಾದ ಖಾರೀಫ್ ಬೆಳೆ ಮತ್ತು ರಬಿ ಕೊಯ್ಲಿನ ಒಟ್ಟುಗೂಡಿದ ಹೆಚ್ಚಿನ ಪೂರೈಕೆ ಹಾಗೂ ದುರ್ಬಲ ರಫ್ತಿನಿಂದ ಈರುಳ್ಳಿ ಬೆಲೆ ವರ್ಷದಿಂದ ವರ್ಷಕ್ಕೆ 16% ಇಳಿಕೆಯಾಗಿದೆ. ರಬಿ ಉತ್ಪಾದನೆ 2-3 ಶೇಕಡಾ ಹೆಚ್ಚಳವಾಗಿದ್ದು, ಶೀತಗೃಹ ಸಂಗ್ರಹಿತ ಸ್ಟಾಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಆಲೂಗಡ್ಡೆ ಬೆಲೆ ವರ್ಷದಿಂದ ವರ್ಷಕ್ಕೆ 14 ಶೇಕಡಾ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

vegetarian and non-vegetarian thali costs in April
ಸಂಕಷ್ಟದಲ್ಲಿ 'ಕೈ' ಬಿಡಲ್ಲ.. : DMK ವಿರೋಧದ ನಡುವೆ ವಿಜಯ್ ಗೆ ಬೆಂಬಲ, ಕಾಂಗ್ರೆಸ್ ವಿರುದ್ಧ Akhilesh Yadav ಪರೋಕ್ಷ ಕಿಡಿ!

ಇನ್ನೊಂದೆಡೆ, ಟೂರ್ ದಾಳಿನ ಸುಂಕ ರಹಿತ ಆಮದುಗಳಿಂದ ದೇಶೀಯ ಉತ್ಪಾದನಾ ಕೊರತೆ ಸಮತೋಲನಗೊಂಡು ಮಾರುಕಟ್ಟೆಯಲ್ಲಿ ಸಮರ್ಪಕ ಪೂರೈಕೆ ಲಭ್ಯವಾದ ಕಾರಣ ಬೇಳೆಕಾಳುಗಳ ಬೆಲೆ ವರ್ಷದಿಂದ ವರ್ಷಕ್ಕೆ 4 ಶೇಕಡಾ ಕುಸಿದಿದೆ. ಮಾಂಸಾಹಾರಿ ಥಾಲಿಯ ವೆಚ್ಚ ಏರಿಕೆಗೆ ಬ್ರಾಯ್ಲರ್ ಕೋಳಿ ಬೆಲೆ ಸುಮಾರು 2 ಶೇಕಡಾ ಹೆಚ್ಚಳವಾಗಿರುವುದು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಬ್ರಾಯ್ಲರ್ ಕೋಳಿ ಮಾಂಸಾಹಾರಿ ಥಾಲಿಯ ಒಟ್ಟು ವೆಚ್ಚದ ಸುಮಾರು ಅರ್ಧ ಭಾಗವನ್ನು ಹೊಂದಿದೆ. ಮಾಂಸಾಹಾರಿ ಥಾಲಿಯ ವೆಚ್ಚ ವರ್ಷದಿಂದ ವರ್ಷಕ್ಕೆ ಅಂದಾಜು 2% ಏರಿಕೆಯಾಗಿದೆ. ಇದಕ್ಕೆ ಬ್ರಾಯ್ಲರ್ ಕೋಳಿ ಬೆಲೆ ಏರಿಕೆಯೇ ಕಾರಣ” ಎಂದು ವರದಿ ಹೇಳಿದ್ದು, ತೀವ್ರ ಬೇಸಿಗೆಯಿಂದ ಕೋಳಿಗಳ ಸಾವು ಹೆಚ್ಚಾಗಿ ಪೂರೈಕೆ ಕಡಿಮೆಯಾದುದು ಇದಕ್ಕೆ ಕಾರಣ ಎಂದು ವಿವರಿಸಿದೆ.

ತಿಂಗಳ ಆಧಾರದ ಮೇಲೆ ನೋಡಿದರೆ, ಏಪ್ರಿಲ್‌ನಲ್ಲಿ ಸಸ್ಯಾಹಾರಿ ಥಾಲಿಯ ವೆಚ್ಚ ಸ್ಥಿರವಾಗಿದ್ದರೆ, ಮಾಂಸಾಹಾರಿ ತಾಳಿಯ ವೆಚ್ಚ 1 ಶೇಕಡಾ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com