

ನವದೆಹಲಿ: ಜಪಾನ್, ಚೀನಾ, ಜರ್ಮನಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಬುಲೆಟ್ ರೈಲು ಇದೀಗಾ ಭಾರತಕ್ಕೆ ಬರುತ್ತಿದ್ದು, ದೇಶದ ಮೊದಲ ಪ್ರಸ್ತಾವಿತ ಬುಲೆಟ್ ರೈಲಿನ ಚಿತ್ರವನ್ನು ರೈಲ್ವೆ ಸಚಿವರು ಸೋಮವಾರ ಅನಾವರಣಗೊಳಿಸಿದ್ದಾರೆ.
ಇಂದು ದೆಹಲಿಯ ರೈಲ್ವೆ ಸಚಿವಾಲಯದ ಕಚೇರಿಯಲ್ಲಿ ದೇಶದ ಪ್ರತಿಷ್ಠಿತ ಮೊದಲ ಬುಲೆಟ್ ರೈಲಿನ ಪ್ರಸ್ತಾಪಿತ ಮಾದರಿಯ ಚಿತ್ರವನ್ನು ಪ್ರದರ್ಶಿಸಲಾಗಿದೆ.
"ದೇಶದ ಮೊದಲ ಪ್ರಸ್ತಾಪಿತ ಬುಲೆಟ್ ರೈಲಿನ ಆಕರ್ಷಕ ಚಿತ್ರವನ್ನು ರೈಲ್ವೆ ಸಚಿವಾಲಯದ ಗೇಟ್ ಸಂಖ್ಯೆ 4 ರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಅಳವಡಿಸಲಾಗಿದೆ" ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಭಾರತದ ಮೊದಲ ಬುಲೆಟ್ ರೈಲು ಆಗಸ್ಟ್ 15, 2027 ರಂದು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವರ್ಷ ಜನವರಿಯಲ್ಲಿ ಹೇಳಿದ್ದರು.
Advertisement