ಸಿಎಂ ವಿಜಯ್ ಗೆ ವಿಶೇಷ ಗಿಫ್ಟ್ ನೀಡಿದ GOAT ನಿರ್ದೇಶಕ ವೆಂಕಟ್ ಪ್ರಭು: 2024 ರಲ್ಲಿಯೇ ಭವಿಷ್ಯ!

ಇತ್ತೀಚಿಗೆ ವಿಜಯ್ ಅವರನ್ನು ಭೇಟಿಯಾದ ವೆಂಕಟ್ ಪ್ರಭು, ಈ ನಂಬರ್ ಪ್ಲೇಟ್ ನ್ನು ಗಿಫ್ಟ್ ಆಗಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಿಎಂ ವಿಜಯ್ ಗೆ ವಿಶೇಷ ಗಿಫ್ಟ್ ನೀಡಿದ GOAT ನಿರ್ದೇಶಕ ವೆಂಕಟ್ ಪ್ರಭು: 2024 ರಲ್ಲಿಯೇ ಭವಿಷ್ಯ!
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರಗಳಲ್ಲಿ GOAT ಒಂದಾಗಿದೆ. ಈ ಸಿನಿಮಾದ ನಿರ್ದೇಶಕ ವೆಂಕಟ್ ಪ್ರಭು ಇದೀಗ ಚಿತ್ರದಲ್ಲಿ ವಿಜಯ್ ಚಲಾಯಿಸಿದ ಕಾರಿನ 'TN07 CM 2026' ನಂಬರ್ ಪ್ಲೇಟ್ ಅನ್ನು ಗಿಫ್ಟ್ ಆಗಿ ನೀಡುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ.

2024 ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್‌ ಚಿತ್ರದಲ್ಲಿ ವಿಜಯ್ ಓಡಿಸಿದ ಕಾರಿನ ಮೇಲೆ ಈ ವಿಶೇಷ 'TN07 CM 2026' ನಂಬರ್ ಕಾಣಿಸಿಕೊಂಡಿತ್ತು. ಈಗ ನಿಜ ಜೀವನದಲ್ಲಿಯೂ ವಿಜಯ್ ಸಿಎಂ ಆಗಿದ್ದು, ಅವರ ರಾಜಕೀಯ ಪಯಣದ ಮುನ್ಸೂಚನೆಯನ್ನು ಆಗಲೇ ನೀಡಲಾಗಿತ್ತೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ವಿಜಯ್ ಅವರನ್ನು ಭೇಟಿಯಾದ ವೆಂಕಟ್ ಪ್ರಭು, ಈ ನಂಬರ್ ಪ್ಲೇಟ್ ನ್ನು ಗಿಫ್ಟ್ ಆಗಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ ಒಂದು ಇತಿಹಾಸ ನಿರ್ಮಾಣವಾಗಿದೆ. ಒಂದು ಆಲೋಚನೆಯಿಂದ ಈಗ ನೋಡ್ತಾ ಇರುವುದು ತುಂಬಾ ಅಚ್ಚರಿಯಾಗಿದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ, GOAT ನ ಮೊದಲ ರಾಜಕೀಯ ಸಂಕೇತದ ನಂಬರ್ ಪ್ಲೇಟ್ ನ್ನು ಗಿಫ್ಟ್ ಆಗಿ ನೀಡಿರುವುದಾಗಿ ಬರೆದುಕೊಂಡಿದ್ದಾರೆ.

GOAT ಚಿತ್ರದಲ್ಲಿ ವಿಜಯ್ TN07 CM 2026 ನೋಂದಣಿ ಹೊಂದಿರುವ ವಾಹನವನ್ನು ಚಲಾಯಿಸುತ್ತಾರೆ. ಇದು ಚಿತ್ರ ಬಿಡುಗಡೆಯ ಸಮಯದಲ್ಲಿ ಅಭಿಮಾನಿಗಳ ಗಮನ ಸೆಳೆದಿತ್ತು. ಆದರೆ ವಿಜಯ್ ಅವರ ಇತ್ತೀಚಿನ ರಾಜಕೀಯ ಬೆಳವಣಿಗೆ ನಂತರ, ದೃಶ್ಯವು ಸಂಪೂರ್ಣ ಹೊಸ ಅರ್ಥವನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವರು ವೆಂಕಟ್ ಪ್ರಭು ಭವಿಷ್ಯ ನುಡಿದಿರಬಹುದು ಎಂದು ತಮಾಷೆ ಮಾಡ್ತಾ ಇದ್ದಾರೆ.

ಸಿಎಂ ವಿಜಯ್ ಗೆ ವಿಶೇಷ ಗಿಫ್ಟ್ ನೀಡಿದ GOAT ನಿರ್ದೇಶಕ ವೆಂಕಟ್ ಪ್ರಭು: 2024 ರಲ್ಲಿಯೇ ಭವಿಷ್ಯ!
'ಅಮ್ಮ ಕ್ಯಾಂಟೀನ್‌' ಆಧುನೀಕರಿಸಲು ತಮಿಳುನಾಡು ಸಿಎಂ ವಿಜಯ್ ಆದೇಶ; ಅಚ್ಚರಿ ಮೂಡಿಸಿದ ದಳಪತಿ ನಡೆ

GOAT ಚಿತ್ರದಲ್ಲಿ ವಿಜಯ್ ಜೊತೆಗೆ ಪ್ರಭುದೇವ, ಮೀನಾಕ್ಷಿ ಚೌಧರಿ, ಪ್ರಶಾಂತ್, ಅಜ್ಮಲ್ ಅಮೀರ್ ಮತ್ತು ಜಯರಾಮ್ ಕೂಡ ಇದ್ದಾರೆ. ಯುವನ್ ಶಂಕರ್ ರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com