'ಮಂಡಿಯೂರಿ ಕುಳಿತಿದೆ BJP, ಅನ್ ಫಾಲೋ ಮಾಡಿ' ಎಂದ ಕಾಕ್ರೋಚ್ ಪಾರ್ಟಿ ಮುಖ್ಯಸ್ಥ, ಆದ್ರೆ ಆಗಿದ್ದೇ ಬೇರೆ..!

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ, ಜನರು ಭಾರತೀಯ ಜನತಾ ಪಕ್ಷವನ್ನು (BJP) ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಅನ್‌ಫಾಲೋ’ ಮಾಡಬೇಕು ಎಂದು ಕರೆ ನೀಡಿದ್ದು...
CJP founder Abhijeet Dipke ask people to unfollow BJP
ಕಾಕ್ರೋಚ್ ಜನತಾಪಾರ್ಟಿ
Updated on

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಇನ್ ಸ್ಟಾಗ್ರಾಂ ಫಾಲೋವರ್ಸ್ ಗಳಲ್ಲಿ ಭಾರತೀಯ ಜನತಾ ಪಾರ್ಟಿಯನ್ನೇ ಹಿಂದಿಕ್ಕಿದ್ದು, ಭಾರತದ ಅತ್ಯಂತ ದೊಡ್ಡ ಪಕ್ಷ ಇದೀಗ ಮಂಡಿಯೂರಿ ಕುಳಿತಿದೆ.. ಕೂಡಲೇ ಬಿಜೆಪಿಯನ್ನು ಅನ್ ಫಾಲೋ ಮಾಡಿ ಎಂದು ಕಾಕ್ರೋಚ್ ಜನತಾ ಪಕ್ಷ ಎಂಬ ಮೀಮ್ ಪೇಜ್ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕರೆ ನೀಡಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ವ್ಯಂಗ್ಯಾತ್ಮಕ ಚಳವಳಿಯಾದ ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ, ಜನರು ಭಾರತೀಯ ಜನತಾ ಪಕ್ಷವನ್ನು (BJP) ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಅನ್‌ಫಾಲೋ’ ಮಾಡಬೇಕು ಎಂದು ಕರೆ ನೀಡಿದ ವಿಡಿಯೋ ಬಿಡುಗಡೆ ಮಾಡಿದ ನಂತರ ಹೊಸ ರಾಜಕೀಯ ವಿವಾದ ಭುಗಿಲೆದ್ದಿದೆ. CJP ಆರಂಭವಾದ ಕೆಲವೇ ದಿನಗಳಲ್ಲಿ ಬಿಜೆಪಿ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ ಸಂಖ್ಯೆಯನ್ನು ಮೀರಿದ ಹಿನ್ನೆಲೆ ಈ ವಿಡಿಯೋ ವಿಶೇಷ ಗಮನ ಸೆಳೆದಿದೆ.

ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಯೂಟ್ಯೂಬ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ದೀಪ್ಕೆ ಮುಖ್ಯ ರಾಜಕೀಯ ಪಕ್ಷಗಳ ಡಿಜಿಟಲ್ ಪ್ರಚಾರ ಶೈಲಿಯನ್ನು ಟೀಕಿಸಿ, “ಪ್ರಚಾರಕ್ಕೆ ಎಂಗೇಜ್‌ಮೆಂಟ್ ಮೂಲಕ ಬಹುಮಾನ ನೀಡುವುದನ್ನು ನಿಲ್ಲಿಸಿ” ಎಂದು ಯುವಕರಿಗೆ ಮನವಿ ಮಾಡಿದರು. ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ವಿಷಯಗಳ ಬದಲಿಗೆ ವಿಭಜನಾ ರಾಜಕಾರಣವನ್ನು ಉತ್ತೇಜಿಸುವ ರಾಜಕೀಯ ಖಾತೆಗಳನ್ನು ಜನರು ಅನ್‌ಸಬ್‌ಸ್ಕ್ರೈಬ್ ಮತ್ತು ಅನ್‌ಫಾಲೋ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ಬೆಳವಣಿಗೆ ಕಾಕ್‌ರೋಚ್ ಜನತಾ ಪಾರ್ಟಿ ಸುತ್ತ ಈಗಾಗಲೇ ತೀವ್ರಗೊಂಡಿದ್ದ ರಾಜಕೀಯ ಚರ್ಚೆಯನ್ನು ಮತ್ತಷ್ಟು ಬಿಸಿ ಮಾಡಿದೆ. ಈ ಡಿಜಿಟಲ್ ವ್ಯಂಗ್ಯ ಚಳವಳಿ ಇತ್ತೀಚಿನ ವಾರಗಳಲ್ಲಿ ದೇಶದ ಅತ್ಯಂತ ಚರ್ಚಿತ ಆನ್‌ಲೈನ್ ಘಟನೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

CJP founder Abhijeet Dipke ask people to unfollow BJP
CJP ಪಾಕಿಸ್ತಾನ ಜನತಾ ಪಾರ್ಟಿ, ಅಭಿಜೀತ್ ದಿಪ್ಕೆ ISI ಏಜೆಂಟ್! ಏನಿದು BJP ಆರೋಪ?

ದೀಪ್ಕೆ ಹೇಳಿದ್ದೇನು?

ವಿಡಿಯೋ ಸಂದೇಶದಲ್ಲಿ ಅಭಿಜಿತ್ ದೀಪ್ಕೆ ನೇರವಾಗಿ ಯುವ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಉದ್ದೇಶಿಸಿ ಮಾತನಾಡಿ, 'ಡಿಜಿಟಲ್ ಗಮನವೇ ಈಗ ರಾಜಕೀಯ ಶಕ್ತಿಯಾಗಿದೆ. ರಾಜಕೀಯ ಪಕ್ಷಗಳು ತಮ್ಮ ದೊಡ್ಡ ಆನ್‌ಲೈನ್ ಫಾಲೋವಿಂಗ್ ಮೂಲಕ ಪ್ರಭಾವ ಮತ್ತು ಮಾನ್ಯತೆ ಗಳಿಸುತ್ತವೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳಿಂದ ಬೆಂಬಲ ಹಿಂಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವ್ಯಾಪಕ ಪ್ರತಿಕ್ರಿಯೆ, ಆದ್ರೆ ಆಗಿದ್ದೇ ಬೇರೆ?

ಈ ವಿಡಿಯೋದಲ್ಲಿ ದೀಪ್ಕೆ ಯಾವುದೇ ಕಾನೂನುಬಾಹಿರ ಕ್ರಮಕ್ಕೆ ಕರೆ ನೀಡದಿದ್ದರೂ, ಬಿಜೆಪಿ ಅನ್ನು ಅನ್‌ಫಾಲೋ ಮಾಡಲು ನೀಡಿದ ನೇರ ಮನವಿ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಚಳವಳಿಯ ಬೆಂಬಲಿಗರು ಇದನ್ನು ಡಿಜಿಟಲ್ ಪ್ರತಿಭಟನೆಯ ಸಂಕೇತ ಎಂದು ಪ್ರಶಂಸಿಸಿದರೆ, ವಿರೋಧಿಗಳು ವ್ಯಂಗ್ಯದ ಹೆಸರಿನಲ್ಲಿ ರಾಜಕೀಯ ಪ್ರೇರಿತ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಬಿಜೆಪಿಗೆ ಮತ್ತೆ 3 ಲಕ್ಷ ಫಾಲೋವರ್ ಗಳ ಸೇರ್ಪಡೆ

ಇನ್ನು ದೀಪ್ಕೆ ಅನ್ ಫಾಲೋ ಕರೆ ಬೆನ್ನಲ್ಲೇ ಬಿಜೆಪಿ ಫಾಲೋವರ್ ಗಳ ಸಂಖ್ಯೆ ಮತ್ತೆ 3 ಲಕ್ಷ ದಷ್ಟು ಏರಿಕೆಯಾಗಿದೆ. CJP ಅಭಿಯಾನಕ್ಕೂ ಮೊದಲು 8.8 ಮಿಲಿಯನ್ ಇದ್ದ ಫಾಲೋವರ್ ಗಳ ಸಂಖ್ಯೆ ಇದೀಗ 9.1ಕ್ಕೆ ಏರಿಕೆಯಾಗಿದೆ.

ರಾಜಕೀಯ ಸಂಪರ್ಕಗಳ ಬಗ್ಗೆ ಪ್ರಶ್ನೆಗಳು

CJP ಚಳವಳಿಯ ವೇಗದ ಬೆಳವಣಿಗೆ ದೀಪ್ಕೆ ಅವರ ರಾಜಕೀಯ ಸಂಪರ್ಕಗಳ ಬಗ್ಗೆ ಊಹಾಪೋಹಕ್ಕೂ ಕಾರಣವಾಗಿದ್ದು, ರಾಜಕೀಯ ವಲಯದಲ್ಲಿ ಅವರ ಹಿಂದಿನ ಸಂಪರ್ಕಗಳು ಹಾಗೂ ಆಮ್ ಆದ್ಮಿ ಪಕ್ಷ (AAP)ದ ಕೆಲ ವ್ಯಕ್ತಿಗಳೊಂದಿಗೆ ಅವರ ಸಂಬಂಧಗಳ ಬಗ್ಗೆ ವರದಿಗಳು ಹೊರಬಿದ್ದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com