ನೀವು ಅಸಹ್ಯಕರ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ: Body-shaming ಮಾಡಿದ ಪಾಪರಾಜಿಗಳಿಗೆ ಸಾರಾ ತೆಂಡೂಲ್ಕರ್ ಕ್ಲಾಸ್..!

ಆ ವಿಡಿಯೋಗೆ "ಮೋಟಿ ವಾಲಿ ಸಾರಾ ಹೈ, ಬಗಲ್ ವಾಲಿ ಭಾಭಿ ಹೈ" (ದಪ್ಪಗಿರುವವಳು ಸಾರಾ, ಪಕ್ಕದಲ್ಲಿರುವವಳು ಅತ್ತಿಗೆ) ಎಂದು ಹಿಂದಿಯಲ್ಲಿ ಆಕ್ಷೇಪಾರ್ಹ ಶೀರ್ಷಿಕೆ ನೀಡಲಾಗಿತ್ತು.
Sara Tendulkar
ಸಾರಾ ತೆಂಡೂಲ್ಕರ್
Updated on

ಬಾಡಿ ಶೇಮಿಂಗ್ ಮಾಡಿದ ಪಾಪರಾಜಿಗಳ (ಛಾಯಾಗ್ರಾಹಕರು) ವಿರುದ್ಧ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ತೀವ್ರವಾಗಿ ಕಿಡಿಕಾರಿದ್ದಾರೆ.

ಸಾರಾ ತೆಂಡೂಲ್ಕರ್ ಅವರು ತಮ್ಮ ಅತ್ತಿಗೆ ಸಾ ನಿಯಾ ಚಾಂದೋಕ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಡಿಯೋವನ್ನು 'ತಾಹಿರ್ ಜಾಸೂಸ್' ಎಂಬ ಪಾಪರಾಜಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.

ಆ ವಿಡಿಯೋಗೆ "ಮೋಟಿ ವಾಲಿ ಸಾರಾ ಹೈ, ಬಗಲ್ ವಾಲಿ ಭಾಭಿ ಹೈ" (ದಪ್ಪಗಿರುವವಳು ಸಾರಾ, ಪಕ್ಕದಲ್ಲಿರುವವಳು ಅತ್ತಿಗೆ) ಎಂದು ಹಿಂದಿಯಲ್ಲಿ ಆಕ್ಷೇಪಾರ್ಹ ಶೀರ್ಷಿಕೆ ನೀಡಲಾಗಿತ್ತು.

ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಸಾರಾ, ಆ ಪಾಪರಾಜಿ ಖಾತೆಯನ್ನು ಟ್ಯಾಗ್ ಮಾಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ನೀವು ಅಸಹ್ಯಕರ, ಇದು ಪತ್ರಿಕೋದ್ಯಮವಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ" ಎಂದು ಸಾರಾ ಬರೆದುಕೊಂಡಿದ್ದಾರೆ.

Sara Tendulkar
ಬಹಿರಂಗ ಕ್ಷಮೆಯಾಚಿಸಿದ ಪಾಪರಾಜಿಗಳು: ಮುಗುಳ್ನಗುತ್ತಲೇ ಕ್ಷಮಿಸಿದ ಸಲ್ಮಾನ್ ಖಾನ್; ಅಭಿಮಾನಿಗಳ ಮೆಚ್ಚುಗೆ..!

ಸಾರಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಂತೆ ಆ ಪಾಪರಾಜಿ ಪುಟವು ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಆದರೆ, ಪೋಸ್ಟ್ ಡಿಲೀಟ್ ಮಾಡಿದ ತಕ್ಷಣ ನಿಮ್ಮ ಅಸಹ್ಯ ನಡವಳಿಕೆ ಕಡಿಮೆಯಾಗುವುದಿಲ್ಲ ಎಂದು ಸಾರಾ ಮತ್ತೆ ಕಿಡಿಕಾರಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪಾಪರಾಜಿ ಸಂಸ್ಕೃತಿ ಮತ್ತು ಸೆಲೆಬ್ರಿಟಿಗಳ ವೈಯಕ್ತಿಕ ಗೌರವದ ಕುರಿತು ಚರ್ಚೆಗಳು ಶುರುವಾಗುವಂತೆ ಮಾಡಿದೆ.

ಹೆಚ್ಚು ವೀಕ್ಷಣೆ, ಲೈಕ್ಸ್ ಮತ್ತು ವೈರಲ್ ಕಂಟೆಂಟ್‌ಗಾಗಿ ಕೆಲವು ಖಾತೆಗಳು ಅಸಭ್ಯ ಶೀರ್ಷಿಕೆಗಳು, ಬಾಡಿ ಶೇಮಿಂಗ್ ಮತ್ತು ವೈಯಕ್ತಿಕ ಟೀಕೆಗಳನ್ನು ಬಳಸುತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ.

ಸಾರಾ ತೆಂಡೂಲ್ಕರ್ ಅವರ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸೆಲೆಬ್ರಿಟಿಗಳೂ ಮನುಷ್ಯರೇ ಆಗಿದ್ದು, ಅವರ ಗೌರವ ಮತ್ತು ಖಾಸಗಿತನವನ್ನು ಕಾಪಾಡಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com