'ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ಲು..' 'ವಿಡಿಯೋ ಕೋರ್ಟ್ ಗೆ ಕೊಟ್ಟಿದ್ದೆ'; ಐಶ್ವರ್ಯಾ ರೈ ಬಗ್ಗೆ ಲಾಲು ಪುತ್ರ ಸ್ಫೋಟಕ ಹೇಳಿಕೆ-Video

ರೈಸ್ ಆ್ಯಂಡ್ ಫಾಲ್ ಸೀಸನ್ 2 ಕಾರ್ಯಕ್ರಮದಲ್ಲಿ ಇತರೆ ಸ್ಪರ್ಧಿಗಳೊಂದಿಗೆ ಮಾತನಾಡಿದ ಅವರು, ಮದುವೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದವು ಎಂದು ಹೇಳಿದ್ದಾರೆ.
Tej Pratap Yadav claims he caught former wife Aishwarya Rai
ತೇಜ್ ಪ್ರತಾಪ್ ಯಾದವ್
Updated on: 

ಮುಂಬೈ: ಬಿಹಾರದ ರಾಜಕಾರಣಿ ತೇಜ್ ಪ್ರತಾಪ್ ಯಾದವ್ ಮತ್ತೆ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಐಶ್ವರ್ಯಾ ರೈ ಕುರಿತು ಅವರು ನೀಡಿರುವ ಹೇಳಿಕೆಗಳು ಇದೀಗ ವ್ಯಾಪಕ ವೈರಲ್ ಆಗುತ್ತಿವೆ.

ಹೌದು.. ತೇಜ್ ಪ್ರತಾಪ್ ಯಾದವ್ ತಮ್ಮ ವಿಚ್ಛೇದಿತ ಪತ್ನಿ ಐಶ್ವರ್ಯಾ ರೈ ಜೊತೆಗಿನ ವೈವಾಹಿಕ ಜೀವನದ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ರೈಸ್ ಆ್ಯಂಡ್ ಫಾಲ್ ಸೀಸನ್ 2 ಕಾರ್ಯಕ್ರಮದಲ್ಲಿ ಇತರೆ ಸ್ಪರ್ಧಿಗಳೊಂದಿಗೆ ಮಾತನಾಡಿದ ಅವರು, ಮದುವೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದವು ಎಂದು ಹೇಳಿದ್ದಾರೆ.

ಅಲ್ಲದೆ, ಐಶ್ವರ್ಯಾ ತಮ್ಮ ಮಾಜಿ ಪ್ರಿಯಕರನೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಿದ್ದಾಗಿ ಆರೋಪಿಸಿದ್ದಾರೆ.

ದಾಂಪತ್ಯ ಜೀವನದಲ್ಲಿ ಆಗುತ್ತಿದ್ದ ಜಗಳಗಳು ತಮ್ಮ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರಿದ್ದವು ಎಂದು ಹೇಳಿರುವ ತೇಜ್ ಪ್ರತಾಪ್, ಜಗಳಗಳ ವೇಳೆ ವಿಡಿಯೋಗಳನ್ನು ಚಿತ್ರೀಕರಿಸಿ ವಿಚ್ಛೇದನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

Tej Pratap Yadav claims he caught former wife Aishwarya Rai
'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್

'ಮದುವೆಯಾದ ಮೂರು ತಿಂಗಳಲ್ಲಿ ಜಗಳ ಶುರು'

ರೈಸ್ ಆ್ಯಂಡ್ ಫಾಲ್ ಸೀಸನ್ 2 ಕಾರ್ಯಕ್ರಮದಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿದ ತೇಜ್ ಪ್ರತಾಪ್, ಮದುವೆಯಾದ ಮೂರು ತಿಂಗಳಲ್ಲೇ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಿದ್ದಾರೆ. ತಮ್ಮಿಬ್ಬರ ವ್ಯಕ್ತಿತ್ವಗಳು ವಿಭಿನ್ನವಾಗಿದ್ದವು ಮತ್ತು ಒತ್ತಡದ ಕಾರಣದಿಂದ ಮದುವೆಯಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

“ನಮ್ಮ ನಡುವೆ ಜಗಳವಾಯಿತು. ಅದು ಹೊಸ ಮದುವೆಯಾಗಿತ್ತು. ಮೂರು ತಿಂಗಳ ಕಾಲ ಸಂಸಾರ ಜಗಳ ನಡೆಯಿತು. ನಮ್ಮಿಬ್ಬರ ಸ್ವಭಾವಗಳು ಬೇರೆಬೇರೆಯಾಗಿದ್ದವು. ಒತ್ತಡದಿಂದ ಮದುವೆಯಾಗಿದ್ದೆವು. ಆಗ ನಾನು ಬಿಹಾರದ ಆರೋಗ್ಯ ಸಚಿವನಾಗಿದ್ದೆ. ಜಗಳಗಳಿಂದಾಗಿ ಮನೆಗೆ ಮರಳಲು ಕೂಡ ಮನಸ್ಸಾಗುತ್ತಿರಲಿಲ್ಲ. ಕೆಲವೊಮ್ಮೆ ಸ್ನೇಹಿತರ ಮನೆಯಲ್ಲಿ ಉಳಿಯುತ್ತಿದ್ದೆ, ಇಲ್ಲವೇ ಬೇರೆಡೆಗೆ ಹೋಗುತ್ತಿದ್ದೆ ಎಂದು ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬೆಳಗಿನ ಪ್ರಾರ್ಥನೆ ವಿಚಾರದಲ್ಲೂ ಭಿನ್ನಾಭಿಪ್ರಾಯ

ತಮ್ಮ ದೈನಂದಿನ ಜೀವನಶೈಲಿಯ ವಿಚಾರದಲ್ಲಿಯೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ತಾವು ಬೆಳಗ್ಗೆ 6ರಿಂದ 7 ಗಂಟೆಯವರೆಗೆ ಪ್ರಾರ್ಥನೆ ಮಾಡುತ್ತಿದ್ದೆವು. ಆದರೆ, ಐಶ್ವರ್ಯಾ ಇದನ್ನು ಒಪ್ಪುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಐಶ್ವರ್ಯಾ ಬೆಳಗಿನ ಜಾವ 4 ಅಥವಾ 5 ಗಂಟೆಯವರೆಗೂ ಪಾರ್ಟಿ ಮಾಡುತ್ತಿದ್ದರು ಎಂದೂ ತೇಜ್ ಪ್ರತಾಪ್ ಹೇಳಿಕೊಂಡಿದ್ದಾರೆ.

'ಮಾಜಿ ಪ್ರಿಯಕರನ ಜೊತೆ ಚಾಟ್ ಮಾಡುತ್ತಿದ್ದುದನ್ನು ನೋಡಿದ್ದೆ'

ತಮ್ಮಿಬ್ಬರ ನಡುವಿನ ಕಲಹದ ಬಗ್ಗೆ ಮಾತನಾಡುವಾಗ, ಐಶ್ವರ್ಯಾ ತಮ್ಮ ಮಾಜಿ ಪ್ರಿಯಕರನೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಿದ್ದಾಗಿ ತೇಜ್ ಪ್ರತಾಪ್ ಆರೋಪಿಸಿದ್ದಾರೆ.

“ಒಂದು ಸಂಜೆ ನಾನು ಬಿಹಾರ ವಿಧಾನಸಭೆಯಿಂದ ಮನೆಗೆ ಮರಳಿದ್ದೆ. ಮಲಗುವ ಕೋಣೆಗೆ ಪ್ರವೇಶಿಸುತ್ತಿದ್ದಾಗ ಆಕೆ ಒಬ್ಬ ಹುಡುಗನೊಂದಿಗೆ ಚಾಟ್ ಮಾಡುತ್ತಿದ್ದಳು. ಆತ ಆಕೆಯ ಮಾಜಿ ಪ್ರಿಯಕರನಾಗಿದ್ದ. ಆತನಿಗೆ ಹಾರ್ಟ್‌ ಮೆಸೇಜ್ ಕಳುಹಿಸುತ್ತಿದ್ದಳು. ಆಕೆ ಕಳುಹಿಸುತ್ತಿದ್ದ ಸಂದೇಶಗಳನ್ನು ದೂರದಿಂದಲೇ ನೋಡಿದ್ದೆ” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

'ಜಗಳದ ವಿಡಿಯೋಗಳನ್ನು ಕೋರ್ಟ್‌ಗೆ ನೀಡಿದ್ದೆ'

ವೈವಾಹಿಕ ಕಲಹದ ಸಂದರ್ಭದಲ್ಲಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದೆ. ಆ ವಿಡಿಯೋಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸಲ್ಲಿಸಿದ್ದಾಗಿ ಅವರು ತೇಜ್ ಪ್ರತಾಪ್ ತಿಳಿಸಿದ್ದಾರೆ.

“ನನ್ನಲ್ಲಿದ್ದ ಒಂದು ಒಳ್ಳೆಯ ಗುಣವೆಂದರೆ, ಆಕೆ ಜಗಳವಾಡಿದಾಗಲೆಲ್ಲ ನಾನು ವಿಡಿಯೋ ಮಾಡುತ್ತಿದ್ದೆ. ಅವು ನಮ್ಮ ಸಾಕ್ಷ್ಯಗಳಾದವು. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ” ಎಂದು ಅವರು ಹೇಳಿದ್ದಾರೆ.

ಪುರುಷರನ್ನೇ ಟಾರ್ಗೆಟ್ ಮಾಡಬೇಡಿ

ಇದೇ ವೇಳೆ, ಮದುವೆ ಮುರಿದುಬಿದ್ದಾಗ ಪುರುಷರನ್ನೇ ಯಾವಾಗಲೂ ತಪ್ಪಿತಸ್ಥರೆಂದು ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. “ಗಂಡಸರೇ ಯಾವಾಗಲೂ ತಪ್ಪು ಮಾಡುವುದಿಲ್ಲ. ಮಹಿಳೆಯರೂ ತಪ್ಪು ಮಾಡಬಹುದು” ಎಂದು ಹೇಳಿದ್ದಾರೆ.

Tej Pratap Yadav claims he caught former wife Aishwarya Rai
'BJPಯವನಾದ ಮಾತ್ರಕ್ಕೆ ಬಾಡಿಗೆ ಇಲ್ಲದೆ ಮನೆ ಸಿಗುತ್ತಾ?'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

2018ರಲ್ಲಿ ನಡೆದಿತ್ತು ಮದುವೆ

ತೇಜ್ ಪ್ರತಾಪ್ ಯಾದವ್ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳು ಹಾಗೂ ರಾಜಕಾರಣಿ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು 2018ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು.

ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದೇ ವರ್ಷದ ಕೊನೆಯಲ್ಲಿ ತೇಜ್ ಪ್ರತಾಪ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧದ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com