ಕೆಟ್ಟದ್ದನ್ನು ಸುಡಬೇಕೆಂದರೇ ರಾವಣನೇ ಏಕೆ? ಘನಘೋರ ಪಾಪ ಮಾಡಿದ ದುರ್ಯೋದನನನ್ನು ದಹಿಸಬೇಕಲ್ಲವೇ? ಮಾನವ ಹಕ್ಕುಗಳ ಆಯೋಗಕ್ಕೆ ವಿಚಿತ್ರ ದೂರು!

ರಾವಣನ ಪ್ರತಿಕೃತಿಯನ್ನು "ವರ್ಷದಿಂದ ವರ್ಷಕ್ಕೆ" ಸುಡುವುದು ಮೂಲಭೂತವಾಗಿ ತಾರತಮ್ಯದಿಂದ ಕೂಡಿದೆ ಮತ್ತು ಅದು ತನ್ನ ಹಕ್ಕುಗಳ ಉಲ್ಲಂಘನೆಗೆ ಸಮಾನವಾಗಿದೆ ಎಂದು ದೂರುದಾರರು ವಾದಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on: 

ರಾಯಪುರ: ಸಾಮಾನ್ಯವಾಗಿ ಪೊಲೀಸ್ ವಶದಲ್ಲಿನ ಚಿತ್ರಹಿಂಸೆ, ಪೊಲೀಸರ ದೌರ್ಜನ್ಯ ಮತ್ತು ಸಾಮಾಜಿಕ ಅನ್ಯಾಯದಂತಹ ಗಂಭೀರ ಪ್ರಕರಣಗಳನ್ನು ಮಾನವ ಹಕ್ಕುಗಳ ಆಯೋಗಗಳು ನಿರ್ವಹಿಸುತ್ತವೆ.

ಆದರೆ, ಛತ್ತೀಸ್‌ಗಢ ರಾಜ್ಯ ಮಾನವ ಹಕ್ಕುಗಳ ಆಯೋಗವು (CGSHRC) ಇತ್ತೀಚೆಗೆ ಒಂದು ಅಸಾಮಾನ್ಯ ತಾತ್ವಿಕ ಮತ್ತು ಕಾನೂನುಬದ್ಧ ಸಂದಿಗ್ಧತೆ ಎದುರಿಸುವ ಸಂದರ್ಭ ಒದಗಿ ಬಂದಿದೆ. ರಾಕ್ಷಸ ರಾಜ ರಾವಣನ ಪ್ರತಿಕೃತಿಯನ್ನು ಸುಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದೇ? ಎಂಬ ಪ್ರಶ್ನೆ ಎದುರಾಗಿದೆ

ಹಬ್ಬದ ಋತುವಿನ ಮುನ್ನಾ ದಿನಗಳಲ್ಲಿ ಅಧಿಕಾರಿಗಳನ್ನು ಅಚ್ಚರಿಗೊಳಿಸಿದ ಒಂದು ವಿಚಿತ್ರ ದೂರಿನಲ್ಲಿ, ನಾಗರಿಕರೊಬ್ಬರು ದಸರಾ ಹಬ್ಬದ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಪ್ರಶ್ನಿಸಿ ಆಯೋಗಕ್ಕೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ರಾವಣನ ಪ್ರತಿಕೃತಿಯನ್ನು "ವರ್ಷದಿಂದ ವರ್ಷಕ್ಕೆ" ಸುಡುವುದು ಮೂಲಭೂತವಾಗಿ ತಾರತಮ್ಯದಿಂದ ಕೂಡಿದೆ ಮತ್ತು ಅದು ತನ್ನ ಹಕ್ಕುಗಳ ಉಲ್ಲಂಘನೆಗೆ ಸಮಾನವಾಗಿದೆ ಎಂದು ದೂರುದಾರರು ವಾದಿಸಿದ್ದಾರೆ. ಮಹಾಭಾರತದ ಕೌರವ ರಾಜಕುಮಾರ ದುರ್ಯೋಧನನು ರಾವಣನಿಗಿಂತ ಹೆಚ್ಚು ಗಂಭೀರ ಮತ್ತು ಘೋರ ಪಾಪಗಳನ್ನು ಎಸಗಿದ್ದನು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

Representational image
ವಿಶ್ವದಾದ್ಯಂತ ಏಕಕಾಲಕ್ಕೆ 'ರಾಮಾಯಣ ಭಾಗ 1' ಬಿಡುಗಡೆ: ದಸರಾ ಹಬ್ಬದಿಂದಲೇ ಮುಂಗಡ ಬುಕಿಂಗ್‌ ಆರಂಭ!

ದೂರುದಾರರು ಒಂದು ಆಳವಾದ ನೈತಿಕ ಪ್ರಶ್ನೆಯನ್ನು ಎತ್ತಿದ್ದು, ಒಂದು ವೇಳೆ ಕೆಟ್ಟದ್ದನ್ನು ಸಾಂಕೇತಿಕವಾಗಿ ಸುಡಬೇಕೆಂದಿದ್ದರೆ, ಪ್ರತಿ ದಸರಾದಲ್ಲಿ ರಾವಣನನ್ನು ಮಾತ್ರ ಏಕೆ ಗುರಿಪಡಿಸಲಾಗುತ್ತದೆ ಮತ್ತು ದುರ್ಯೋಧನನನ್ನು ಏಕೆ ಬೆಂಕಿಯಿಂದ ರಕ್ಷಿಸಲಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಪೌರಾಣಿಕ ವಿಷಯಕ್ಕೆ ಸಂಬಂಧಿಸಿದ ಈ ದೂರಿಗೆ ಪ್ರತಿಕ್ರಿಯಿಸುವಾಗ, ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆಯು ಕಾನೂನು ವ್ಯಾಪ್ತಿಯ ಮಿತಿಗಳನ್ನು ದೂರುದಾರರಿಗೆ ವಿವರಿಸಬೇಕಾಯಿತು. ಈ ವಿಷಯವಾಗಿ ನಾವು ಗೊಂದಲಕ್ಕೀಡಾದೆವು. CGSHRC ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದೆಯೇ ಹೊರತು ಪೌರಾಣಿಕ ಸಂದಿಗ್ಧತೆಗಳನ್ನಲ್ಲ ಎಂದು ನಾನು ದೂರುದಾರರಿಗೆ ಮನವರಿಕೆ ಮಾಡಿದೆ ಎಂದು ಅರ್ಜಿಯ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಗಿರ್ಧಾರಿ ನಾಯಕ್ TNIE ಗೆ ತಿಳಿಸಿದರು.

ಆಯೋಗವು ಮತ್ತೊಂದು ಮೂಲಭೂತ ತಾಂತ್ರಿಕ ಅಂಶವನ್ನು ಉಲ್ಲೇಖಿಸಿ ಈ ಅರ್ಜಿಯನ್ನು ಸೌಜನ್ಯದಿಂದ ತಿರಸ್ಕರಿಸಿತು. ರಾವಣನು ಮನುಷ್ಯನ (ಮಾನವ) ವರ್ಗಕ್ಕೆ ಸೇರುವುದಿಲ್ಲ. ಪರಿಣಾಮವಾಗಿ, ಅವನ ಪ್ರತಿಕೃತಿಯನ್ನು ಸುಡುವುದಕ್ಕೆ ಸಂಬಂಧಿಸಿದ ವಿಷಯಗಳು ಮಾನವ ಹಕ್ಕುಗಳ ಆಯೋಗದ ಕಾನೂನು ವ್ಯಾಪ್ತಿಯ ಸಂಪೂರ್ಣ ಹೊರಗೆ ಬರುತ್ತವೆ ಎಂದು ತಿಳಿಸಿದೆ.

ದೂರುದಾರರು ತಮ್ಮ ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ಕ್ರಮ ಕೈಗೊಳ್ಳಲು ಬಯಸಿದರೆ ಸೂಕ್ತ ವೇದಿಕೆಯನ್ನು ಸಂಪರ್ಕಿಸುವಂತೆ ಅವರಿಗೆ ಸಲಹೆ ನೀಡಲಾಯಿತು. 2000 ಮತ್ತು 2026 ರ ನಡುವೆ ಆಯೋಗದ ಮುಂದೆ ಬಂದ ಸುಮಾರು 74,000 ಪ್ರಕರಣಗಳಲ್ಲಿ ಈ ವಿಚಿತ್ರ ಅರ್ಜಿಯೂ ಒಂದಾಗಿದೆ ಎಂದು ಆಯೋಗದ ಅಧ್ಯಕ್ಷರು ಬಹಿರಂಗಪಡಿಸಿದರು.

ನಾಯಕ್ ಅವರ ಪ್ರಕಾರ, ವರ್ಷಗಳಲ್ಲಿ ಸ್ವೀಕರಿಸಲಾದ ಸುಮಾರು 3,000 ರಿಂದ 4,000 ದೂರುಗಳು ಆಧಾರರಹಿತ, ಕ್ಷುಲ್ಲಕ ಅಥವಾ ಸಂಪೂರ್ಣವಾಗಿ ವಿಚಿತ್ರವಾಗಿದ್ದು, ಇವು ಆಯೋಗದ ಕಾರ್ಯಭಾರದ ಮೇಲೆ ಅಸಾಮಾನ್ಯ ಹೊರೆ ಹೇರಿವೆ. ಇಂತಹ ಅಡಚಣೆಗಳ ಹೊರತಾಗಿಯೂ, ಸಮಿತಿಯು ತನ್ನ ಬಹುಪಾಲು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಬಾಕಿ ಉಳಿದಿರುವುದು ಕೇವಲ 900 ರಷ್ಟು ಪ್ರಕರಣಗಳು ಮಾತ್ರ, ಮತ್ತು ಅವುಗಳಲ್ಲಿ ಹೆಚ್ಚಿನವು ಕೇವಲ ಒಂದು ಅಥವಾ ಎರಡು ವರ್ಷಗಳಷ್ಟು ಹಳೆಯದಾಗಿವೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com