'ಭಾರತ ಮಧ್ಯಮ ಶಕ್ತಿಯಲ್ಲ, ಮಧ್ಯದಲ್ಲಿರುವ ಶಕ್ತಿ, ಜಗತ್ತು ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಯತ್ತ ಸಾಗುತ್ತಿದೆ': ವಿದೇಶಾಂಗ ಸಚಿವ ಜೈಶಂಕರ್

ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಈಗಿನ ವ್ಯವಸ್ಥೆಯಿಂದ ಅರಾಜಕತೆಯತ್ತ ಸಾಗುವ ಪ್ರಕ್ರಿಯೆ ಎಂದು ಪರಿಗಣಿಸಬಾರದು. ಬದಲಾಗಿ, ವಿಭಿನ್ನ ಸ್ವರೂಪದ ಹೊಸ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿರುವ ಬೆಳವಣಿಗೆಯಾಗಿ..
India External Affairs Minister S. Jaishankar
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್
Updated on: 

ನವದೆಹಲಿ: ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚಿನ ದೇಶಗಳು ಮಹತ್ವದ ಪಾತ್ರ ವಹಿಸುವ ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಯತ್ತ ಜಗತ್ತು ಸಾಗುತ್ತಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ್ ಹೇಳಿದ್ದಾರೆ.

ದೆಹಲಿಯಲ್ಲಿ ಬುಧವಾರ ನಡೆದ ಬ್ಲೂಮ್‌ಬರ್ಗ್‌ ನ್ಯೂ ಎಕಾನಮಿ ಫೋರಂನಲ್ಲಿ ಪಾಲ್ಗೊಂಡು ಮಾತನಾಡಿದ ಜೈಶಂಕರ್‌, 'ದೇಶಗಳ ನಡುವಿನ ಒಮ್ಮತ, ಪರಸ್ಪರ ತಿಳಿವಳಿಕೆ ಮತ್ತು ಸ್ವಹಿತಾಸಕ್ತಿಗಳು ಮಧ್ಯಮ ಶಕ್ತಿಯ ರಾಷ್ಟ್ರಗಳು ಒಪ್ಪಿಕೊಂಡ ನಿಯಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಬೆದರಿಕೆ ಹಾಕುವ ಮೂಲಕ ಇತರ ದೇಶಗಳಿಗೆ ಷರತ್ತುಗಳನ್ನು ವಿಧಿಸುವ ಕಾಲ ಮುಗಿದಿದೆ ಎಂದು ಹೇಳಿದರು.

ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಈಗಿನ ವ್ಯವಸ್ಥೆಯಿಂದ ಅರಾಜಕತೆಯತ್ತ ಸಾಗುವ ಪ್ರಕ್ರಿಯೆ ಎಂದು ಪರಿಗಣಿಸಬಾರದು. ಬದಲಾಗಿ, ವಿಭಿನ್ನ ಸ್ವರೂಪದ ಹೊಸ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿರುವ ಬೆಳವಣಿಗೆಯಾಗಿ ನೋಡಬೇಕು ಎಂದು ಅವರು ತಿಳಿಸಿದರು.

India External Affairs Minister S. Jaishankar
'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

‘ಭಾರತ ಮಧ್ಯಮ ಶಕ್ತಿಯಲ್ಲ, ಮಧ್ಯದಲ್ಲಿರುವ ಶಕ್ತಿ’

ಭಾರತವನ್ನು ತಾನು ‘ಮಧ್ಯಮ ಶಕ್ತಿ’ (Middle Power) ಎಂದು ಗುರುತಿಸಿಕೊಳ್ಳುವುದಿಲ್ಲ. ಬದಲಾಗಿ, ‘ಮಧ್ಯದಲ್ಲಿರುವ ಶಕ್ತಿ’ (Power in the Middle) ಎಂದು ಪರಿಗಣಿಸುತ್ತದೆ ಎಂದು ಜೈಶಂಕರ್‌ ಹೇಳಿದರು.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ಸುಮಾರು ನಾಲ್ಕು ಟ್ರಿಲಿಯನ್‌ ಡಾಲರ್‌ ಜಿಡಿಪಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಬೆಳವಣಿಗೆ ಸಾಧಿಸಲು ಅಪಾರ ಸಾಮರ್ಥ್ಯ ಹೊಂದಿದೆ ಎಂದು ಅವರು ವಿವರಿಸಿದರು.

ಹೀಗಾಗಿ, ‘ಮಧ್ಯಮ ಶಕ್ತಿ’ ಎಂಬ ಪದವು ಭಾರತದ ಸ್ಥಾನಮಾನ ಮತ್ತು ಮಹತ್ವಾಕಾಂಕ್ಷೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.

ಸ್ವತಂತ್ರ ನೀತಿಗಳಿಗೆ ಆದ್ಯತೆ

ಮಧ್ಯಮ ಶಕ್ತಿಯ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ತಮ್ಮದೇ ಆದ ಹಿತಾಸಕ್ತಿಗಳನ್ನು ನಿರ್ಧರಿಸುವುದು, ಸ್ವತಂತ್ರ ನೀತಿಗಳನ್ನು ರೂಪಿಸಿಕೊಳ್ಳುವುದು ಮತ್ತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿವೆ.

ಇಂತಹ ಬೆಳವಣಿಗೆಗಳಿಂದ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಈ ರಾಷ್ಟ್ರಗಳು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕೆಲವೇ ದೇಶಗಳ ಪ್ರಭಾವಕ್ಕೆ ಸೀಮಿತವಾಗದೆ, ವ್ಯಾಪಕ ಶ್ರೇಣಿಯ ರಾಷ್ಟ್ರಗಳಿಗೆ ಹೆಚ್ಚಿನ ಪಾತ್ರ ದೊರೆಯುವ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com