ಎಷ್ಟೇ ಅಧಿಕಾರ ಸಿಕ್ಕರೂ, ಜನಸೇವೆಯೇ ನಮ್ಮ ಧ್ಯೇಯವಾಗಿರಲಿ: ಪ್ರಧಾನಿ ಮೋದಿ; Videoತಮ್ಮ ಸಾರ್ವಜನಿಕ ಜೀವನದುದ್ದಕ್ಕೂ ‘ಜನಸೇವೆ’ಯಿಂದ ‘ದೇಶಸೇವೆ’ಯತ್ತ ಸಾಗುವ ಪಯಣಕ್ಕೆ ಬದ್ಧರಾಗಿದ್ದು, ಜನರು ಮತ್ತು ದೇಶದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದಾಗಿ ಮೋದಿ ಹೇಳಿದರು.
ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಗ್ರಾಮೀಣಾಭಿವೃದ್ಧಿ ಸಚಿವರ ಪುತ್ರಿ ಸೇರಿ ನಾಲ್ವರ ದುರ್ಮರಣ; ಡಿಕ್ಕಿಯ ತೀವ್ರತೆಗೆ ನಜ್ಜುಗುಜ್ಜಾದ ಕಾರು!ಈ ಘಟನೆಯು ಮಧ್ಯರಾತ್ರಿಯ ನಂತರ ನಡೆದಿದೆ. ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!ದಾಳಿಯ ಕುರಿತು ನಿಕಟವಾಗಿ ಗಮನಹರಿಸಲಾಗುತ್ತಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯ ಸುರಕ್ಷತೆ, ಅದರಲ್ಲೂ 19 ಭಾರತೀಯ ನಾವಿಕರ ಸುರಕ್ಷತೆ ಕುರಿತು ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.
ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್ಗೆ ಬೆಂಕಿ: 9 ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನಘಟನೆ ವೇಳೆ ಸ್ಲೀಪರ್ ಬಸ್ನಲ್ಲಿಸುಮಾರು 40 ರಿಂದ 50 ಮಂದಿ ಪ್ರಯಾಣಿಕರು ಇದ್ದರು. ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಬೆಂಕಿ ವೇಗವಾಗಿ ಇಡೀ ಬಸ್ಗೆ ಆವರಿಸಿಕೊಂಡಿದೆ.
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮರು ಚುನಾವಣೆಗೆ ಆರ್ಜೆಡಿ ಒತ್ತಾಯ!ಪಾಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, "ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರಣದಿಂದಾಗಿ ಬಿಜೆಪಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಗೆದ್ದಿದೆ ಎಂದು ಹೇಳಿದರು.
CEC ಆಗಲು ಅನ್ ಫಿಟ್, ಜ್ಞಾನೇಶ್ ಕುಮಾರ್ರನ್ನು ತಕ್ಷಣ ಬಂಧಿಸಿ; ಮತ್ತೆ ಚುನಾವಣೆ ನಡೆಸಿ: ಮಮತಾ ಬ್ಯಾನರ್ಜಿಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು. ಅವರು ಸಿಇಸಿ ಆಗಲು ಅನ್ ಫಿಟ್ ಎಂದು ತೃಣಮೂಲ ಕಾಂಗ್ರೆಸ್(AITC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರದಲ್ಲಿ ಭೀಕರ ದುರಂತ: ಹಳಿ ಮೇಲೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ರೈಲು ಢಿಕ್ಕಿ; 4 ಸಾವು, ಓರ್ವ ಗಂಭೀರ! Videoತೆಕ್ಕಲಿ ಮಂಡಲದ ರವಿವಲಸಾ ಬಳಿ ಇಂದು ಈ ದುರ್ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ರೈಲು ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಜ್ಯ ರಾಣಿ ಎಕ್ಸ್ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ..
ಪ್ರತೀಕಾರಕ್ಕೆ 24 ಕೋಟಿ ರೂ ಭಸ್ಮ: 10 ಸಾವಿರ ಸಂಬಳ ಕೊಡದಕ್ಕೆ ಆಕ್ರೋಶ; 150 ರೂ ಪೆಟ್ರೋಲ್, 2 ಬೆಂಕಿಕಡ್ಡಿಯಿಂದ ಗೋಡೌನ್ಗೆ ಬೆಂಕಿ; Videoಗುಜರಾತ್ನ ಸೂರತ್ನಲ್ಲಿ ಜವಳಿ ಮಾರುಕಟ್ಟೆಯನ್ನು ಕಾಣಿಸಿಕೊಂಡಿದ್ದ ಬೃಹತ್ ಅಗ್ನಿ ಅವಘಡ ಆಕಸ್ಮಿಕವಲ್ಲ, ಬದಲಾಗಿ ಕೇವಲ 10,000 ರೂಪಾಯಿ ಸಂಬಳ ಕೊಡಲಿಲ್ಲ ಎಂದು ಪೂರ್ವನಿಯೋಜಿತ ಸೇಡು.
'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು-ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!ಭಾರತದ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸಲು OICಗೆ ಯಾವುದೇ ಅಧಿಕಾರ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ: ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್ ದಾಸ್ಗೆ ಕೊಕ್!ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದ್ದು, ರಾಧಮೋಹನ್ ದಾಸ್ ಅವರಿಗೆ ಕೊಕ್ ನೀಡಿ, ಹರೀಶ್ ದ್ವಿವೇದಿ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಮತಗಳ ಕಳ್ಳತನ ನಡೆದಿದ್ದರೆ, ನಾವು ಹೇಗೆ ಸೋತೆವು? ಬಂಗಾಳದ ಕ್ಷೇತ್ರಗಳ ಉಲ್ಲೇಖ; ವಿಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ನ ಮೊಹಮ್ಮದ್ ನೂರ್ ಆಲಂ ಅವರು 61,918 ಮತಗಳನ್ನು ಪಡೆದು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು ಮತ್ತು ಕಾಂಗ್ರೆಸ್ನ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು ಸೋಲಿಸಿದರು; ಆದರೆ ಈ ಸ್ಪರ್ಧೆಯಲ್ಲಿ ಬಿಜೆಪಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ.
ಬಿಎಸ್ಪಿಯಲ್ಲಿ ಮಹತ್ವದ ಬದಲಾವಣೆ: ಸೋದರಳಿಯ ಇಶಾನ್ ಆನಂದ್ ಗೆ ಪ್ರಮುಖ ಜವಾಬ್ದಾರಿ ನೀಡಿದ ಮಾಯಾವತಿ!ಮುಂಬರುವ ವಿಧಾನಸಭಾ ಚುನಾವಣೆಗಾಗಿ ಬಿಎಸ್ಪಿ ಸಿದ್ಧತೆಗಳನ್ನು ಚುರುಕುಗೊಳಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
'POKನ ಸ್ಮಶಾನ ಮಾಡಿಟ್ಟಿದ್ದಾರೆ, ನಾಗರಿಕರಿಗೆ ರಕ್ಷಣೆ ಇಲ್ಲ, ಪ್ರತಿ ಹತ್ಯೆಯೂ ಸ್ವತಂತ್ರ ತನಿಖೆಗೆ ಒಳಪಡಲಿ': ವಿಶ್ವಸಂಸ್ಥೆಯಲ್ಲಿ ಪಾಕ್ ಮುಖವಾಡ ಕಳಚಿದ ಕಾಶ್ಮೀರಿ ಮಹಿಳೆ!ಕಾಶ್ಮೀರದಲ್ಲಿನ ಭಯೋತ್ಪಾದನೆ ಸಂತ್ರಸ್ತರ ಸಂಘಟನೆ ‘ಅಸೋಸಿಯೇಷನ್ ಆಫ್ ಟೆರರ್ ವಿಕ್ಟಿಮ್ಸ್ ಇನ್ ಕಾಶ್ಮೀರ್’ (ಎಟಿವಿಕೆ) ಜತೆ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ರಾಜಕೀಯ ಕಾರ್ಯಕರ್ತೆ ತಸ್ಲೀಮಾ ಅಖ್ತರ್..
ಎಲ್ಲಾ ಆದೇಶಗಳೂ ಕಾನೂನುಬದ್ಧ: ವಿವಾದದ ಬಗ್ಗೆ ಚುನಾವಣಾ ಆಯೋಗದ ಹೇಳಿಕೆಭಾರತೀಯ ಪ್ರಜಾಪ್ರಭುತ್ವವನ್ನು ಮುನ್ನಡೆಸುವಲ್ಲಿ ತನ್ನ ಪ್ರಮುಖ ಪಾತ್ರವನ್ನು ಗುರುತಿಸಿ, ಸಾಂವಿಧಾನಿಕ ಕರ್ತವ್ಯಗಳನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ನಿರ್ವಹಿಸಲು ಬದ್ಧವಾಗಿರುವುದಾಗಿ ಆಯೋಗ ಹೇಳಿದೆ.
'ಆಜ್ಞೆ ಮಾಡುವಂತಿಲ್ಲ': ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಮಗಳನ್ನು ಗೃಹ ಬಂಧನದಲ್ಲಿರಿಸಿದ್ದ ತಂದೆಗೆ ಹೈಕೋರ್ಟ್ ತರಾಟೆ; ಪತಿಯೊಂದಿಗೆ ವಾಸಿಸಲು ಅನುಮತಿಸೋನಿಕಾ ಚೌಹಾಣ್ ಎಂಬ ಯುವತಿ, ಅಕ್ಬರ್ ಖಾನ್ ಅವರೊಂದಿಗಿನ ತನ್ನ ವಿವಾಹವನ್ನು ತಂದೆ ವಿರೋಧಿಸುತ್ತಿದ್ದು, ತನ್ನನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ್ದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!