ಸೋಮಶೇಖರ್ ಗೆ ಬೈಗುಳ, ಶಿವಮೂರ್ತಿ ಕೆನ್ನೆಗೆ ಏಟು!

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರೊಬ್ಬರಿಗೆ ಮಾತಿನ ಚಾಟಿ ಏಟು ಕೊಟ್ಟು, ಇನ್ನೊಬ್ಬ ಶಾಸಕರ ಕೆನ್ನೆಗೆ ಪಟೀರ್ ಎಂದು ಬಾರಿಸಿದರು...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on: 

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರೊಬ್ಬರಿಗೆ ಮಾತಿನ ಚಾಟಿ ಏಟು ಕೊಟ್ಟು, ಇನ್ನೊಬ್ಬ ಶಾಸಕರ ಕೆನ್ನೆಗೆ ಪಟೀರ್ ಎಂದು ಬಾರಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಈ ಘಟನೆ ನಡೆದಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಜಿಲ್ಲೆಯ ಹಾಗೂ ಆಪ್ತವಲಯದ ಶಾಸಕ ಎಂ.ಕೆ.ಸೋಮಶೇಖರ್ ಅವರ ವರ್ತನೆ ಬಗ್ಗೆ ಬೇಸತ್ತು ಬೈಯ್ದರು. ಶುಕ್ರವಾರ ಸಾಯಂಕಾಲ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲವಂತೆ ಎಂದು ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ಅಳುತ್ತಾ ಇದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರು ಸಿದ್ಧರಾಮಯ್ಯನವರಿಗೆ ಹೇಳಿದರು.

ಇದು ಸಿದ್ದರಾಮಯ್ಯಗೆ ಕೋಪ ತರಿಸಿತು. ಹೌದಾ? ಯಾರಂದರು ನಿಮ್ಗೆ? ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರು ಬರುತ್ತಾರೆ. ಅಕಾಡೆಮಿ ಕಾರ್ಯಕ್ರಮಕ್ಕೆ
ಬರುವುದಿಲ್ಲ ಎಂದು ಸೋಮಶೇಖರ್ ಅವರು ರೇವಣ್ಣ ಕಿವಿಯಲ್ಲಿ ಸಣ್ಣಗೆ ಗುನುಗಿದ್ದು ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಕೆರಳಿಸಿತು. ನಾನು ನಿಮಗೆ ಈ ವಿಚಾರ ತಿಳಿಸಿದ್ದೇನಾ? ನಿಮಗೆ ವಿಷಯ ಗೊತ್ತಾ? ಗೊತ್ತಿಲ್ಲದೇ ಏನೇನೋ ಮಾತನಾಡಬಾರದು. ನಿಮಗೆಲ್ಲ... ಅಷ್ಟೆ' ಎಂದು ರೇಗಿದರು. ಬೇಸರಗೊಂಡ ಸೋಮಶೇಖರ್ ಅಲ್ಲಿಂದ ಜಾಗ ಖಾಲಿ ಮಾಡಿದರು. ಜಾತಿ

ಗಣತಿಗೆ ಉತ್ತರ ನೀಡುವ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಬಂದು ನಮಸ್ಕಾರ ಸಾರ್ ಎಂದರು. ಒಮ್ಮೆ ಮುಖ ಎತ್ತಿದ ಸಿದ್ದರಾಮಯ್ಯ ಏನ್ಲಾ ಬಂದೆ? ಎಂದರು. ಬೆಳಗ್ಗೆ ಬೆಳಗ್ಗೆ ಬಯಸ್ಕೋಬೇಕು ಎಂಬುದು ಮೊದಲೇ ಗೊತ್ತಿತ್ತು ಎಂದು ಶಿವಮೂರ್ತಿ ಗೊಣಗಿದರು.

ಏನ್ಲಾ ಬಂದೆ ಅಂದರೆ ಬಯ್ದ ಹಾಗಾ? ಎಂದು ಅವರ ಕೆನ್ನೆಗೆ ಸಿದ್ದರಾಮಯ್ಯ ಮೃದುವಾಗಿ ತಟ್ಟಿದರು. ಆಗಲೂ ಸುಮ್ಮನಿರದ ಶಿವಮೂರ್ತಿ ನಾಯಕ್, ಇನ್ನೊಂದು ಕೆನ್ನೆ ತೋರಿ ಹೊಡೆಯಿರಿ' ಎಂಬಂತೆ ನೋಡಿದಾಗ ಸಿದ್ದರಾಮಯ್ಯ ಜೋರಾಗಿಯೇ ಛಟೀರ್ ಎಂದು ಬಿಗಿದು ನಗಾಡುತ್ತಾ ತಬ್ಬಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com