

ಬೆಂಗಳೂರು: ಕಾಂಗ್ರೆಸ್ ಎಂದಿಗೂ ಬಿಬಿಎಂಪಿ ಚುನಾವಣೆಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ವಿಧಾನಮಂಡಲದಲ್ಲಿ ನಡೆದ ಏಕದಿನ ವಿಶೇಷ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆಯ ಕರ್ನಾಟಕ ನಗರಪಾಲಿಕೆ ವಿಧೇಯಕ(ತಿದ್ದುಪಡಿ) 2015ರ ವಿಧೇಯಕ ಮಸೂದೆ ಅಂಗೀಕಾರವಾದ ನಂತರ ಮಾತನಾಡಿದ ಮುಖ್ಯಮಂತ್ರಿ ಪ್ರತಿಪಕ್ಷಗಳಿಗೆ ಈ ರೀತಿ ತಿರುಗೇಟು ನೀಡಿದ್ದಾರೆ. ಗುಣಮಟ್ಟದ ಜೀವನ ನೀಡಲು ಬಿಬಿಎಂಪಿ ವಿಭಜನೆ ಸಹಾಯವಾಗಲಿದೆ. ನೌಕರರಿಗೆ ಸಂಬಳ ಕೊಡದ ಸ್ಥಿತಿಗೆ ಬಿಬಿಎಂಪಿ ತಲುಪಿದೆ. ಹಾಗಾಗಿ ಚುನಾವಣೆಗೆ ನಾವು ಸಿದ್ದ. ಆದರೆ ಬಿಬಿಎಂಪಿ ವಿಭಜನೆ ಅನಿವಾರ್ಯವಾಗಿದ್ದರಿಂದ, ಚುನಾವಣೆ ಮುಂದೂಡಿಕೆ ಅಗತ್ಯವಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು