ರಮ್ಯಾ ಮತ್ತೆ ವಿದೇಶಕ್ಕೆ!

ಮಾಜಿ ಸಂಸದೆ, ಹಾಲಿ ಚಿತ್ರನಟಿ ರಮ್ಯಾ ಬಿಬಿಎಂಪಿ ಚುನಾವಣೆ ಮುಗಿಯುವುದಕ್ಕೆ ಮುನ್ನವೇ ವಿದೇಶಕ್ಕೆ ಹಾರ್ತಾರಾ...
ರಮ್ಯಾ
ರಮ್ಯಾ
Updated on: 

ಬೆಂಗಳೂರು: ಮಾಜಿ ಸಂಸದೆ, ಹಾಲಿ ಚಿತ್ರನಟಿ ರಮ್ಯಾ ಬಿಬಿಎಂಪಿ ಚುನಾವಣೆ ಮುಗಿಯುವುದಕ್ಕೆ ಮುನ್ನವೇ ವಿದೇಶಕ್ಕೆ ಹಾರ್ತಾರಾ..? ಇಂಥದೊಂದು ಸುದ್ದಿ ಈಗ ಕಾಂಗ್ರೆಸ್ ವಲಯದಲ್ಲಿ ಒಳಗೊಳಗೆ ಸುಳಿದಾಡುತ್ತಿದೆ.

ಏಕೆಂದರೆ ತಮ್ಮ ಆತ್ಮೀಯರೊಬ್ಬರ ಬಳಿ ತಾವು ಮತ್ತೆ ವಿದೇಶಕ್ಕೆ ಹೋಗುತ್ತೇನೆ ಎಂಬ ವಿಚಾರವನ್ನು ರಮ್ಯಾ ಹಂಚಿಕೊಂಡಿದ್ದಾರಂತೆ. ಗುರುವಾರ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಬರ್ಪೂರ್ ಸೆಲ್ಫಿ ತೆಗಿಸಿಕೊಂಡು, ಶುಕ್ರವಾರ ಬೆಂಗಳೂರಿನ ಕೆಲ ಭಾಗದಲ್ಲಿ ಪ್ರಚಾರ ನಡೆಸಿದಂತೆ ಮಾಡಿದ ರಮ್ಯಾ, ಶನಿವಾರ ವಿದೇಶಕ್ಕೆ ಹಾರಿದ್ದಾರೆ ಎಂಬುದೇ ಈಗ ಕಾಂಗ್ರೆಸ್‍ನಲ್ಲಿ ದೊಡ್ಡ ಸುದ್ದಿ.

ಕೆಲವು ತಿಂಗಳಿಂದ ವಿದೇಶದಲ್ಲಿ ನೆಲೆಸಿದ್ದ ರಮ್ಯಾ ಇತ್ತೀಚೆಗೆ ಮಂಡ್ಯಕ್ಕೆ ದಿಢೀರನೇ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತರ ನಿವಾಸಕ್ಕೆ ಹೋಗಿ ಸಾಂತ್ವನ ಹೇಳಿದ್ದರು. ಜತೆಗೆ ಅಲ್ಲಿಂದ ವಾಪಸ್ ಬಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸ ಹಾಗೂ ಸಚಿವ ಅಂಬರೀಶ್ ಮನೆಗೂ ಭೇಟಿ ನೀಡಿ ಸಾಕಷ್ಟು ಸುದ್ದಿ ಜೊತೆಗೆ ಕುತೂಹವವನ್ನೂ ಮೂಡಿಸಿದ್ದರು.

ಆದರೆ ಈಗ ಮತ್ತೆ ವಿದೇಶಕ್ಕೆ ಹಾರುವ ಮೂಲಕ ತೆರೆಯ ಹಿಂದಕ್ಕೆ ಸರಿಯುತ್ತಿದ್ದಾರೆ. ವಿದೇಶದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com