ಪರವಾನಗಿ ಇಲ್ಲದ ವಾಹನಗಳಿಂದ ರೂ.2 .34 ಕೋಟಿ ದಂಡ ಸಂಗ್ರಹ

ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪರವಾನಗಿ ಇಲ್ಲದ ವಾಹನಗಳನ್ನು ಸಾರಿಗೆ ಇಲಾಖೆಯು ಪರಿಶೀಲಿಸಿ ಕ್ರಮ ಕೈಗೊಂಡಿದ್ದು ರೂ.2, 34, 36, 985 ವಸೂಲಿ ಮಾಡಿದೆ.
ಪರವಾನಗಿ ಇಲ್ಲದ ವಾಹನಗಳಿಂದ ರೂ.2 .34 ಕೋಟಿ ದಂಡ ಸಂಗ್ರಹ
Updated on: 

ಬೆಂಗಳೂರು: ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪರವಾನಗಿ ಇಲ್ಲದ ಖಾಸಗಿ ಬಸ್ಸು ಗಳು, ಮ್ಯಾಕ್ಸಿ, ಕ್ಯಾಬ್, ಓವರ್ ಲೋಡ್ ಸರಕು ಸಾಗಣೆ ವಾಹನಗಳನ್ನು ಸಾರಿಗೆ ಇಲಾಖೆಯು ಪರಿಶೀಲಿಸಿ ಕ್ರಮ ಕೈಗೊಂಡಿದ್ದು ರೂ.2, 34, 36, 985  ವಸೂಲಿ ಮಾಡಿದೆ.

ಇದು ಸದಸ್ಯರಾದ ತಾರಾ ಅನುರಾಧ ಅವರು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರ. ಆದರೆ ಈ ಉತ್ತರದಿಂದ ತೃಪ್ತರಾಗದ ತಾರಾ, ನೀವು ನೀಡಿರುವ ಅಂಕಿಅಂಶಗಳನ್ನು ಗಮನಿಸಿದರೆ ಒಂದೇ ದಿನದಲ್ಲಿ ಅಷ್ಟು ನಿಯಮ ಉಲ್ಲಂಘಿಸಿದ ವಾಹನ ಸಿಗುತ್ತವೆ. ಉತ್ತರ ನೋಡಿದರೆ ಆಶ್ಚರ್ಯವಾಗುತ್ತಿದೆ ಎಂದು ಟೀಕಿಸಿದರು. ಸಚಿವರು ಮಾತ್ರ, ಸಾರಿಗೆ ಇಲಾಖೆಯಿಂದ ದಾಳಿ ಮಾಡುತ್ತಲೇ ಇದ್ದೇವೆ ಕಠಿಣ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡು ಅಂಕಿ ಅಂಶಗಳನ್ನು ನೀಡಿದರು.

ಎರಡು ವರ್ಷಗಳಲ್ಲಿ ಖಾಸಗಿ ಬಸ್ ಗಳು ಮ್ಯಾಕ್ಸಿ ಕ್ಯಾಬ್ ಓವರ್ ಲೋಡ್ ಸರಕು ಸಾಗಣೆ ವಾಹನಗಳ ಪೈಕಿ 419 ರಹದಾರಿ ಇಲ್ಲದ ಪ್ರಕರಣ 632 ಅರ್ಹತಾ ಪತ್ರ ಇಲ್ಲದ ಪ್ರಕರಣ, 2 ,296 ಅಧಿಕ ಭಾರ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ದಂಡ ರೂಪದಲ್ಲಿ 1 ,67 ,47 ,747 , ತೆರಿಗೆ ರೂಪದಲ್ಲಿ ರೂ.66 .89 ,238  ವಸೂಲಿ ಮಾಡಲಾಗಿದೆ ಎಂದರು.

ಬೆಂಗಳೂರು ನಗರದ ರಸ್ತೆಗಳಲ್ಲಿ ಭಾರಿ ಸರಕು ಸಾಗಣೆ ವಾಹನಗಳಿಂದ ಸಂಚಾರ ಸಮಸ್ಯೆಗಳು ಕಂಡುಬಂದಿದ್ದ ಕಾರಣ ನಗರ ಪೊಲೀಸ್ ಆಯುಕ್ತರ ಸರಹದ್ದಿಗೆ ಒಳಪಡುವ ಎಲ್ಲಾ ರಸ್ತೆಗಳಲ್ಲಿಯೂ ಸರಕು ಸಾಗಣೆ ವಾಹನಗಳು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 7 ಗಂಟೆ ವರೆಗೆ ಸಂಚರಿಸುವಂತೆ ಉಳಿದ ಅವಧಿಯಲ್ಲಿ ಸಂಚಾರ ನಿಷೇಧ ಹೇರಲಾಗಿದೆ. ವಿಧಾನಸೌಧ 2 .ಕಿ.ಮೀ ವೃತ್ತದಲ್ಲಿ ಎಲ್ಲಾ ರೀತಿಯ ಹೆಚ್ಚು ಭಾರ ಹೊರುವ ಸರಕು ಸಾಗಣೆ ವಾಹನಗಳ ಸಂಚಾರವನ್ನು 24 ಗಂಟೆ ಕಾಲ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಸಂಚಾರ ನಿಯಮ ಇಲ್ಲಂಘನೆ ಮಾಡುತ್ತಿರುವ ಮ್ಯಾಕ್ಸಿ ಕ್ಯಾಬ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು, 2014 ರಲ್ಲಿ 79 ,281  ಪ್ರಕರಣ 2015 ರಲ್ಲಿ ಜೂನ್ 30 ವರೆಗೆ 47 , 721 ಪ್ರಕರಣ ದಾಖಲಿಸಲಾಗಿದೆ. ವಾಯುಮಾಲ್ಲಿನ್ಯ ನಿಯಂತ್ರಣಕ್ಕಾಗಿ 17 ,53 ,551 ವಾಹನಗಳನ್ನು ತಪಾಸಣೆ  ನಡೆಸಲಾಗಿದೆ. ಈ ಪೈಕಿ 20 ,554 ಪ್ರಕರಣ ದಾಖಲಿಸಿ 84 , 10 , 650 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ 7 ,335 ಪ್ರಕರಣ ದಾಖಲಿಸಿ 32 , 24 ,747  ರೂಪಾಯಿ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com