

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‍ನ ಒಂದಿಷ್ಟು ಪುಡಿ ಹಾಗೆಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಅದನ್ನೂ ಸಹ ನುಚ್ಚುನೂರು ಮಾಡಲಾಗುವುದು. ಅದು ಬಿಜೆಪಿಯ ಗುರಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
`ಕಾಂಗ್ರೆಸ್ ಮುಕ್ತ ದೇಶ ಮಾಡುವುದು ಬಿಜೆಪಿಯ ಗುರಿ'. ಅದನ್ನು ಈಗಾಗಲೇ ಬಿಜೆಪಿ ಸಾಧಿಸಿದೆ. ದೇಶದ ಅಲ್ಲಿ, ಇಲ್ಲಿ ಯಾವುದೊ ಒಂದಿಷ್ಟು ಮೂಲೆಯಲ್ಲಿ ಕಾಂಗ್ರೆಸ್ ಇನ್ನೂ ಆಡಳಿತ ನಡೆಸುತ್ತಿದೆ. ಆ ಪುಡಿ ಕಾಂಗ್ರೆಸ್‍ನ್ನು ಸಹ ನಿರ್ನಾಮಗೊಳಿಸಲಾಗುವುದು ಎಂದು ಹೇಳಿದರು
ಶಿಕ್ಷಕರ ಸದನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಬಿಜೆಪಿ ಮುಕ್ತವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏಟಿಗೆ ತಿರುಗೇಟು ನೀಡಿದರು.
ಈ ಹಿಂದಿನ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಿಂದಲ್ಲೂ ಇದನ್ನೇ ಹೇಳಿಕೊಂಡು ಬರಲಾಗುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ ಅವರು ಅದನ್ನೇ ಮತ್ತೆ ಹೇಳುತ್ತಿದ್ದಾರೆ. ಆದರೆ, ಅದು ಅಸಾಧ್ಯದ ಮಾತು ಎಂದರು.