

ವಿಧಾನಸಭೆ: `ನಾನು ಸತ್ತು ಹೋಗಿದ್ದರೆ ಚೆನ್ನಾರ್ಗಿತಿತ್ತು... ಈ ಟಿವಿ-ಪೇಪರ್‍ನಲ್ಲಿ ಬರುತ್ತಿರುವ ಅತ್ಯಾಚಾರ ಸುದ್ದಿಗಳನ್ನು ನೋಡಲು ಆಗುತ್ತಿಲ್ಲ; ಸತ್ತು ಹೋಗಿರುವ ಸರ್ಕಾರದ ಬಗ್ಗೆ ಮಾತನಾಡಲು ಆಗುತ್ತಿಲ್ಲ.. ಪೂಜಾರಿ ಹೇಳಿದ್ದು ನಿಜ, ನಾನು ಸತ್ತು ಹೋಗಬೇಕಾಗಿತ್ತು..!'
-ಹೀಗೆ ಒಂದೇ ಸಮನೆ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮಾತನಾಡತೊಡಗಿದರು. ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡುವಾಗ ಈಶ್ವರಪ್ಪ ಹೇಳಿದಂತೆ ಈ ಸರ್ಕಾರ ಸತ್ತಿದೆ ಎನ್ನುವ ಬದಲು, ಈ ಈಶ್ವರಪ್ಪ ಸತ್ತಿದ್ದಾರೆ ಎಂದರು. ಇದೇ ಮಾತನ್ನು ಧಾಳ ಮಾಡಿಕೊಂಡ ಕಾಂಗ್ರೆಸ್ ಶಾಸಕ ವೀರಣ್ಣ ಮತ್ತಿಕಟ್ಟಿ `ನೋಡ್ರಿ ಈಶ್ವರಪ್ಪ ಅವರೇ ನಿಮ್ಮನ್ನು ಪೂಜಾರಿಗಳು ಸಾಯಿಸುತ್ತಿದ್ದಾರೆ' ಎಂದು ತಿವಿದರು.
ಕೂಡಲೇ ಎದ್ದು ನಿಂತ ಈಶ್ವರಪ್ಪ, ಹೌದು ಕಂಡ್ರಿ ನಾನು ಸತ್ತು ಹೋಗಿದ್ದರೆ ಚೆನ್ನಾರ್ಗಿತಿತ್ತು. ಸತ್ತು ಹೋಗಿರುವ ನಿಮ್ಮ ಸರ್ಕಾರವನ್ನು ನೋಡಲು ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ತಿರುಗೇಟು ನೀಡಿದರು. ಅಲ್ಲದೆ ಏನ್ರೀ ಮತ್ತಿಕಟ್ಟಿ ಅವರೇ ನಿಮಗೆ ಸುಮ್ಮನೆ ಕೂರಲು ಆಗುವುದಿಲ್ಲವೇ, ಪದೇ ಪದೆ ಎದ್ದೇಳುತ್ತೀರಲ್ಲಾ ನೀವು ಯುವಕರಾ ಅಥವಾ ಯಾವುದಾದರು ಇಂಜೆಕ್ಷನ್ ತಗೊಂಡು ಬರುತ್ತಿರಾ? ಎಂದು ವ್ಯಂಗ್ಯವಾಡಿದರು.