ಒಳ್ಳೆಯ ದಿನ ಬಿಡಿ; ಹಳೆಯ ದಿನಗಳಾದರು ಮರುಕಳಿಸಲಿ: ಮೋದಿಗೆ ನಿತೀಶ್ ಸಲಹೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಳ್ಳೆ ದಿನಗಳನ್ನು ಬಿಡಿ, ಕನಿಷ್ಠ ಹಳೆಯ ದಿನಗಳನ್ನಾದರೂ ನೀಡಿ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ-ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ನರೇಂದ್ರ ಮೋದಿ-ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
Updated on: 

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಳ್ಳೆ ದಿನಗಳನ್ನು ಬಿಡಿ, ಕನಿಷ್ಠ ಹಳೆಯ ದಿನಗಳನ್ನಾದರೂ ನೀಡಿ ಎಂದು ಹೇಳಿದ್ದಾರೆ.
ಕಳೆದ 10 ತಿಂಗಳಿನಿಂದ ಭಾರತದ ರಫ್ತು ದರ ಇಳಿಕೆಯಾಗುತ್ತಿದೆ, ಅಚ್ಚೆ ದಿನಗಳನ್ನು ನೀಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ದಿನಗಳನ್ನು ನೀಡದೇ ಇದ್ದರೂ ಹಳೆಯ ದಿನಗಳನ್ನು ನೀಡಿದರೆ ಶ್ಲಾಘನೀಯ ಎಂದು ಹೇಳಿದ್ದಾರೆ.
ರಫ್ತು ಕಡಿಮೆಯಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ನಿತೀಶ್ ಕುಮಾರ್ ಸೆಪ್ಟೆಂಬರ್ ವರೆಗೂ ಭಾರತದ ವಾಣಿಜ್ಯ ರಫ್ತು 21 .84 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದ್ದು ಭಾರತದ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿರುವುದನ್ನು ಸೂಚಿಸುತ್ತಿದೆ, ಒಳ್ಳೆಯ ದಿನಗಳ ಬದಲು ಹಳೆಯ ದಿನಗಳನ್ನಾದರೂ ಪ್ರಧಾನಿ ಮೋದಿ ನೀಡಲಿ ಎಂದು ನಿತೀಶ್ ಸಲಹೆ ನೀಡಿದ್ದಾರೆ.  
ಗುರುವಾರ ಬಿಡುಗಡೆಯಾದ ಅಧಿಕೃತ ಮಾಹಿತಿ ಪ್ರಕಾರ ಆಮದು ದರ ಸಹ ಶೇ.25 .4 ರಷ್ಟು ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com