ಕಾಂಗ್ರೆಸ್ ಮುಖಂಡ ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಸಂಬಂಧ ಮಾತುಕತೆ ನಡೆಸಿಲ್ಲ: ಎಚ್.ಡಿಕೆ

ಕಾಂಗ್ರೆಸ್ ಹಿರಿಯ ನಾಯಕ ಎಚ್. ವಿಶ್ವನಾಥ್ ಪಕ್ಷ ಸೇರುವ ಸಂಬಂಧ ಇದುವರೆಗೂ ಯಾವುದೇ ಮಾತುಕತೆ ನಡೆಸಿಲ್ಲ, ಆದರೆ ಅವರು ಪಕ್ಷಕ್ಕೆ ಬಂದರೆ ಗೌರವದಿಂದ ...
ಎಚ್ . ವಿಶ್ವನಾಥ್ ಮತ್ತು ಕುಮಾರಸ್ವಾಮಿ
ಎಚ್ . ವಿಶ್ವನಾಥ್ ಮತ್ತು ಕುಮಾರಸ್ವಾಮಿ
Updated on: 
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಎಚ್. ವಿಶ್ವನಾಥ್ ಪಕ್ಷ ಸೇರುವ ಸಂಬಂಧ ಇದುವರೆಗೂ ಯಾವುದೇ ಮಾತುಕತೆ ನಡೆಸಿಲ್ಲ, ಆದರೆ ಅವರು ಪಕ್ಷಕ್ಕೆ ಬಂದರೆ ಗೌರವದಿಂದ ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಶ್ವನಾಥ್ ಅವರಿಗೆ ರಾಜಕೀಯ ಜೀವನದಲ್ಲಿ ಅಪಾರ ಅನುಭವವಿದೆ, ಅವರ ರಾಜಕೀಯ ಅನುಭವವೇ ಅವರ ಆಸ್ತಿ , ಅವರ ಯಾವುದೇ ನಿರ್ಧಾರ ಕೈಗೊಂಡರು ಅದರಲ್ಲಿ ಸ್ಪಷ್ಟತೆ ಇರುತ್ತದೆ.ಅವರು ಯಾವುದೇ ಒತ್ತಡಕ್ಕೊಗಳಗಾಗುವವರಲ್ಲ ಏನಾಗುತ್ತದೆ ಎಂಬುದಕ್ಕೆ ಕಾದು ನೋಡೋಣ ಎಂದು ಅವರು ತಿಳಿಸಿದ್ದಾರೆ.
ವಿಶ್ವನಾಥ್ ಅವರು ಜೆಡಿಎಸ್ ಸೇರಿದರೇ ಅವರ ಸ್ವಕ್ಷೇತ್ರದಿಂದಲೇ ಸ್ಪರ್ದಿಸಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್ ಡಿಕೆ, ಅವರು ಸನ್ಯಾಸಿಯಾಗ ಬಯಸಿದರೇ ವಿಶ್ವನಾಥ್ ಪಕ್ಷ ಸೇರುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಪಕ್ಷಕ್ಕೆ ಬಂದರೆ ಗೌರವಯುತವಾಗಿ ಸ್ವಾಗತ ನೀಡುವುದಾಗಿ ಹೇಳಿದ ಅವರು, ಈ ಸಂಬಂದ ವಿಶ್ವನಾಥ್ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com