ಬಿಜೆಪಿ ಮುಖಂಡ ರಾಜಾರಾಂ ಭಟ್ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಕರ್ ಭಟ್ ಅವರು, ಉಲ್ಲಾಳ್ ಕ್ಷೇತ್ರದಲ್ಲಿನ ಗೋವುಗಳ ಕಳ್ಳತನವನ್ನು ಖಂಡಿಸಿದ್ದರು. ಆ ಕ್ಷೇತ್ರವನ್ನು ಯು. ಟಿ. ಖಾದರ್ ಪ್ರತಿನಿಧಿಸುತ್ತಿದ್ದು, ಖಾದರ್ ಕೂಡಾ ಗೋವುಗಳ ಕಳ್ಳ ಎಂದು ಆರೋಪಿಸಿದರು. ಅವರು ಗೋವುಗಳ ಭಕ್ಷಕರಾಗಿದ್ದು, ದೇವಸ್ಥಾನಗಳಿಗೆ ಅವಕಾಶ ನೀಡದಂತೆ ಕರೆ ನೀಡಿದ್ದರು.