ರಾಜಕೀಯ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಕೊಟ್ಟ ಮಾತಿನಂತೆ ನಡೆದಿದ್ದೇವೆ- ರಾಹುಲ್ ಗಾಂಧಿ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಕೊಟ್ಟ ಮಾತಿನಂತೆ ನಡೆದಿದ್ದೇವೆ- ರಾಹುಲ್ ಗಾಂಧಿ
ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್
Published On :
ಮಂಗಳೂರು: ಕಳೆದ ಬಾರಿ ಚುನಾವಣೆಯಲ್ಲಿ ಕರ್ನಾಟಕದ ಜನತೆಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದು, ಕಳೆದ ಬಾರಿ ಘೋಷಣೆ ಮಾಡಲಾಗಿದ್ದ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇ.95ರಷ್ಚು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಂಗಳೂರಿನ ಟಿಎಂಪೈ ಹಾಲ್​​ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಇದು ಪ್ರಣಾಳಿಕೆ ಅಲ್ಲ, ಕನ್ನಡಿಗರ ಮನ್ ಕೀ ಬಾತ್ ಇದು. ಕಳೆದ ಬಾರಿಯಂತೆ ಈ ಬಾರಿ ಆಶ್ವಾಸನೆಗಳನ್ನೂ ಕೂಡ ಶೇ.100ರಷ್ಟು ಈಡೇರಿಸುತ್ತೇವೆ ಎಂದು ಹೇಳಿದರು. 
'ಕಳೆದ ಬಾರಿ ನಾವು ಕರ್ನಾಟಕದ ಜನತೆಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದು, ಶೇ.100ರಷ್ಟು ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಕನ್ನಡಿಗರ ಮನ್ ಕಿ ಬಾತ್ ಇದ್ದು, ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ. ಪ್ರಣಾಳಿಕೆಯಲ್ಲಿರುವ ಪ್ರತಿಯೊಂದು ಅಂಶವೂ ಖಂಡಿತಾ ಜಾರಿಗೆ ಬರಲಿದೆ. ಕಳೆದ ಬಾರಿಯ ಚುನಾವಣೆ ವೇಳೆ ನಾವು ಘೋಷಣೆ ಮಾಡಿದ್ದ ಭರವಸೆಗಳನ್ನು ಶೇ.95ರಷ್ಟು ಈಡೇರಿಸಿದ್ದೇವೆ. ಕರ್ನಾಟಕದ ಸಿದ್ಧಾಂತಗಳಲ್ಲಿ ನನಗೆ ನಂಬಿಕೆ ಇದ್ದು, ಕರ್ನಾಟಕದ ಪ್ರತಿಯೊಂದು ವಿಭಾಗ, ಸಮುದಾಯ, ಧರ್ಮ, ಜಿಲ್ಲೆಗಳನ್ನು ಪ್ರಮುಖವಾಗಿ ಪರಿಗಣಿಸಿ ಪ್ರಣಾಳಿಕೆ ತಯಾರಿಸಲಾಗಿದೆ. ಕರ್ನಾಟರದ ಮೂಲೆ ಮೂಲೆಯಲ್ಲಿರುವ ಕಾರ್ಯಕರ್ತನನ್ನು ಸಂಪರ್ಕಿಸಿ ಪ್ರಣಾಳಿಕೆಯನ್ನು ತನಗೇನು ಬೇಕು ಎಂಬುದನ್ನು ಅರಿತು ಅವುಗಳನ್ನೇ ಪ್ರಣಾಳಿಕೆಯಲ್ಲಿ ಕ್ರೋಡೀಕರಿಸಲಾಗಿದೆ ಎಂದು ರಾಹುಲ್ ಗಾಂಧಿ  ಹೇಳಿದರು,
ನಾಲ್ವರಿಂದ ಬಿಜೆಪಿ ಪ್ರಣಾಳಿಕೆ ನಿರ್ಧಾರ
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಬಿಜೆಪಿ ಪಕ್ಷದ ಪ್ರಣಾಳಿಕೆ ಆ ಪಕ್ಷದ ನಾಲ್ವರಿಂದ ಸಿದ್ಧವಾಗುತ್ತದೆ. ಅದರಲ್ಲಿ ಸಾಕಷ್ಚು ಪ್ರಮಾಣದ ಭ್ರಷ್ಟಾಚಾರ ಒಳಗೊಂಡಿರುತ್ತದೆ. ಪ್ರಣಾಳಿಕೆ ಹಿಂದೆ ರೆಡ್ಡಿ ಸಹೋದರರ ರಹಸ್ಯ ಕಾರ್ಯಸೂಚಿ (ಹಿಡನ್ ಅಜೆಂಡಾ) ಇರುತ್ತದೆ ಎಂದು ರಾಹುಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.