ತಮ್ಮ ಪಕ್ಷ ಸಂಘಟನೆ ನಿಮಿತ್ತ ನಟನೆಯಿಂದ ನಟ ಉಪೇಂದ್ರ ಅವರು ಕೊಂಚ ಬ್ರೇಕ್ ಪಡೆದಿದ್ದು, ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಉಪೇಂದ್ರ "ಕೆಪಿಜೆಪಿ' ಪಕ್ಷದ ಮೂಲಕ ರಾಜ್ಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಬಳಿಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದು "ಯುಪಿಪಿ' (ಉತ್ತಮ ಪ್ರಜಾಕೀಯ ಪಾರ್ಟಿ) ಪಕ್ಷ ಸ್ಥಾಪಿಸಿದ್ದು, ಈಗ ಪಕ್ಷ ಸಂಘಟನೆಗಾಗಿ ಪ್ರಣಾಳಿಕೆಯನ್ನು ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.