ರಮ್ಯಾ ಫೇಕ್ ಅಕೌಂಟ್ ವಿವಾದ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಅವರ ಫೇಕ್ ಅಕೌಂಟ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ಪಕ್ಷದ ಫೇಕ್ ಮುಖ ಈಗ ಬಯಲಾಗಿದೆ ಎಂದು ಜರಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಅವರ ಫೇಕ್ ಅಕೌಂಟ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ಪಕ್ಷದ ಫೇಕ್ ಮುಖ ಈಗ ಬಯಲಾಗಿದೆ ಎಂದು ಜರಿದಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದು, "ಪಡೆದ ಸ್ಟಾರ್ ಗಿರಿ ? ಪಡೆದ ರಾಜಕೀಯ ಸ್ಥಾನ ಮಾನ ? ನಾವು ಮಾಡಿದ ಪೋಸ್ಟಿಂಗ್ ಗಳಿಗೆ ಅಡ್ರೆಸ್ ಇಲ್ಲದ ಕಾಂಗ್ರೆಸ್ ಸಂಸ್ಕೃತಿಯ ಉತ್ತರ ಬರುವಾಗಲೇ ಅಂದುಕೊಂಡೆ ಇದರ ಹಿಂದೆ ಓರ್ವ ಫೇಕ್ ವ್ಯಕ್ತಿ ಇದ್ದಾರೆ ಎಂದು . ಛೆ !! ಈಗ ಈ ವಿಡಿಯೋ ನೋಡಿ ಈ ಕುಕೃತ್ಯದ ಹಿಂದಿನ ಫೇಕ್ ವ್ಯಕ್ತಿ ಯಾರೆಂದು ತಿಳಿಯುತ್ತೆ ಎಂದು ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ನಟ ಜಗ್ಗೇಶ್, "ಕೆಲವರಿಗೆ ಮರ್ಮ ಕಲೆಯ ಹೆಣ್ಣಿನ ಮುಖವಾಡ ಮಗಳು ಬೇಕಂತೆ. ಏನ್‌ ಕರ್ಮರೀ ಈ ದೇಶ !! ಕ್ಯಾಚ್‌ ಆಫೀಸರ್‌. ಇದು ಫೇಕ್‌ಗಳನ್ನು ತಯಾರಿಸಿ ವೈರಲ್‌ ಮಾಡೋ ಫೇಕ್‌ಗಳು ಇನ್ನು ಮುಂದೆ ನಿಮ್ಮ ಆಟ ಬಂದ್‌,'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಅವರಿಗೆ ಸತತ ಟಾಂಗ್ ನೀಡುವ ಮೂಲಕ ಸುದ್ದಿಯಾಗುತ್ತಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಟ್ವೀಟ್ ಮಾಡಿ, ''ಸುಳ್ಳಿಗೂ, ಕಾಂಗ್ರೆಸ್‌ ಗೂ ಅವಿನಾಭಾವ ಸಂಬಂಧ. ಯಾವಾಗಲೂ ಬೇರೆಯವರ ತಪ್ಪು ಹುಡುಕುವ ಕಾಂಗ್ರೆಸ್‌ ಸಾಮಾಜಿಕ ಜಾಲ ತಾಣದ ಅಧ್ಯಕ್ಷೆ 'ರಮ್‌'ರವರ ನಿಜ ಬಣ್ಣ ಇದು. ಸಾಮಾಜಿಕ ಜಾಲ ತಾಣದಲ್ಲಿ ತಾವೇ ನಕಲಿ ಖಾತೆ ಹೊಂದಿರುವ ಜತೆಗೆ ತಮ್ಮ ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿ ಬಗ್ಗೆ ತಪ್ಪು ಮಾಹಿತಿ ರವಾನಿಸಲು ಹೇಳುತ್ತಿರುವ ವಿಡಿಯೊ,'' ಎಂದು ಟ್ವೀಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com