ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ ಹಾಗೂ ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮವಲ್ಲ. ಇದನ್ನು ನಂಬಿ ಮೈತ್ರಿ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಬಾರದು, ನಿರ್ಲಕ್ಷಿಬೇಕು. ನನ್ನ ಖಾಸಗಿ ಸಂಭಾಷಣೆಯ ಎಡಿಟೆಡ್ ವಿಡಿಯೋ ಬಗ್ಗೆ ಶುಕ್ರವಾರದವರೆಗೂ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಿರುವಾಗ ಯು-ಟರ್ನ್, ಹಿ-ಟರ್ನ್ ಪ್ರಶ್ನೆ ಎಲ್ಲಿದೆ? ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೋ. ಅದರ ಹಿಂದೆ ಯಾರಿದ್ದರು ಎನ್ನುವುದನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.