

ಔರಾದ್ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ಮೇಲೆ ವೈಯಕ್ತಿಕವಾಗಿ ದಾಳಿಯಿಂದ ಹಿಂದೆ ಸರಿದಿದ್ದಾರೆ.ಅತ್ಯುನ್ನತ ಸ್ಥಾನದಲ್ಲಿರುವವರ ಮೇಲೆ ದಾಳಿ ಮಾಡುವುದು ಉತ್ತಮ ನಡತೆ ಅಲ್ಲ ಎಂದಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ನಲ್ಲಿಂದು ಕಾಂಗ್ರೆಸ್ ಚುನಾವಣಾಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಫೆಲ್ ಯುದ್ಧ ವಿಮಾನ, ನೀರವ್ ಮೋದಿ ಹಗರಣ, ಮತ್ತಿತರ ವಿವಾದಗಳಿಗೆ ನರೇಂದ್ರಮೋದಿ ಉತ್ತರ ನೀಡುತ್ತಿಲ್ಲ. ಆದ್ದರಿಂದ ವೈಯಕ್ತಿಕವಾಗಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.
ಮೋದಿ ವೈಯಕ್ತಿಕವಾಗಿ ದಾಳಿ ನಡೆಸುವುದು ಜಾಸ್ತಿ. ಅನಾರೋಗ್ಯಕ್ಕೀಡಾದವರಂತೆ ಮಾತನಾಡುತ್ತಾರೆ. ತಪ್ಪಾಗಿ ಮಾತನಾಡುತ್ತಾರೆ, ಅವರಿಗೂ ತಮ್ಮಗೂ ಇರುವ ವ್ಯತ್ಯಾಸ ಇದೆ ಎಂದರು.
ಕರ್ನಾಟಕದಲ್ಲಿನ ಮೋದಿ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ನನ್ನ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ , ಅದು ತಪ್ಪು ಇರಬಹುದು ಅಥವಾ ಸರಿ ಇರಬಹುದು, ಆದರೆ,ಇದು ಯಾವುದೇ ಭಿನ್ನಾಭಿಪ್ರಾಯ ಮೂಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಅವರ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದ ರೆಡ್ಡಿ ಸಹೋದರನಿಗೆ ಬಿಜೆಪಿ ಟಿಕೆಟ್ ನೀಡಿದೆ. ಗಬ್ಬರ್ ಸಿಂಗ್ ಟ್ಯಾಕ್ಸ್ ಜಾರಿಗೊಸಿರುವ ಬಿಜೆಪಿ ಗಬ್ಬರ್ ಸಿಂಗ್ ಗ್ಯಾಂಗ್ ಆಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಗಬ್ಬರ್, ಸಾಂಬಾ, ಕಾಲಿಯಾ ಎಲ್ಲರೂ ಇದ್ದಾರೆ. ರೆಡ್ಡಿ ಸಹೋದರರು ಜೈಲಿಗೆ ಹೋಗಿ ಬಂದಿದ್ದಾರೆ. ಅವರನ್ನು ಚುನಾವಣೆಗೆ ನಿಲ್ಲಿಸಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ದೇಶದ ಜನತೆ ಮುಂದೆ ಹೇಳಿ ಎಂದು ಅವರು ಹೇಳಿದ್ದಾರೆ.