ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆಂದು ಭಾನುವಾರ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ನಗರದ ಅಶೋಕಪುರಕ್ಕೆ ಆಗಮಿಸಿದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎರಡು ಕಡೆ ಮುಖಭಂಗ ಅನುಭವಿಸಿದರು. ತೆರೆದ ಜೀಪಿನಲ್ಲಿ ಖರ್ಗೆ ರೋಡ್ಶೋ ನಡೆಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳು, ಖರ್ಗೆ ಅವರನ್ನು ಉದ್ದೇಶಿಸಿ, 'ಈ ಬಾರಿಯಾದರೂ ದಲಿತರು ಸಿಎಂ ಆಗುತ್ತಾರಾ? ನೀವು ಮುಖ್ಯಮಂತ್ರಿ ಆಗುತ್ತೀರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಹೇಳಿದರು.