ಅಂತೆಯೇ ನೀವು ನನ್ನಲ್ಲಿ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಇದೇ ವೇಳೆ ನಮ್ಮ ನಡವಳಿಕೆಯಿಂದ ಯಾರಿಗೂ ಬೇಸರವಾಗದಂತೆ ಕೆಲಸ ಮಾಡೋಣ ಎಂದು ಹೇಳಿದರು. ಇದೇ ವೇಳೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಶ್ಲಾಘಿಸಿದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಅಭಿನಂದನೆಗೆ ನಾನೆಷ್ಟು ಅರ್ಹ ಗೊತ್ತಿಲ್ಲ. ಸದನದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ರಾಜಕೀಯ ಜನ್ಮ ನೀಡದ್ದು ದಿ.ಶ್ರೀಮತಿ ಇಂದಿರಾ ಗಾಂಧಿ , ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಅಪಾರ ಗೌರವವಿದೆ. ಶಾಸಕಾಂಗದ ಶಿಸ್ತನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಲಿತೆ. ಎಂದು ಹೇಳಿದರು.