ಸಮರ್ಥ ಅಭ್ಯರ್ಥಿಗಾಗಿ 'ಕೈ' ಪರದಾಟ: ಯುದ್ದಕ್ಕೂ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ!?

ರಾಜ್ಯ ಲೋಕಸಭಾ ಉಪಚುನಾವಣೆಯಾದ ಬಳಿಕ ಮೊದಲು ಅಭ್ಯರ್ಥಿ ಘೋಷಿಸಿದ್ದ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದ್ದರೆ, ಇತ್ತ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ...
ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ ಮತ್ತು ಜೆ,ಶಾಂತ
ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ ಮತ್ತು ಜೆ,ಶಾಂತ
Updated on: 
ಬೆಂಗಳೂರು: ರಾಜ್ಯ ಲೋಕಸಭಾ ಉಪಚುನಾವಣೆಯಾದ ಬಳಿಕ ಮೊದಲು ಅಭ್ಯರ್ಥಿ ಘೋಷಿಸಿದ್ದ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದ್ದರೆ, ಇತ್ತ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಪಕ್ಷದಿಂದ ಸ್ಪರ್ದಿಸಲು ಸಮರ್ಥ ಅಭ್ಯರ್ಥಿ ಸಿಗದ ಕಾರಣ ನವೆಂಬರ್ 3 ರಂದು ನಡೆಯುವ ಉಪಚುನಾವಣೆಯಿಂದ ಹಿಂದೆ ಸರಿಯಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.
ಉಪ ಚುನಾವಣೆ ನಡೆಯಬೇಕಿರುವ ಐದು ಕ್ಷೇತ್ರಗಳ ಮೇಲೂ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಂಡಿದೆ. ಬಳ್ಳಾರಿ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಹುಡುಕಾಟದಲ್ಲೇ ನಿರತವಾಗಿದೆ, ಮಂಡ್ಯ ಮತ್ತು ರಾಮನಗರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ. ಜಮಖಂಡಿ ವಿಧಾನಸಭೆಗೆ ಆನಂದ ನ್ಯಾಮಗೌಡ ಅವರ ಹೆಸರನ್ನು ಫೈನಲ್ ಮಾಡಿದೆ. 
ಅಶಿಶ್ತು ಮತ್ತು ಕೊನೆಯ ಕ್ಷಣದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಗೆ ಹೊಸತಲ್ಲ, ಆದರೆ ಸದ್ಯದ ಬೆಳವಣಿಗೆಗಳು ಪಕ್ಷದೊಳಗಿನ ಗುಂಪುಗಾರಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ರಾಜಕೀಯ ವಿಶ್ಲೇಷಕ ರಾಮ್ ಮೋಹನ್ ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಸ್ಪರ್ಧಿಸುವ ಆಸೆಯೇ ಇಲ್ಲವಾಗಿದೆ, ಹೋರಾಟದ ಮನೋಭಾವ ಕಡಿಮೆಯಾಗಿದೆ. ಮತ್ತೆ ವಾಪಸ್ ಪಡೆಯಲು ದೀರ್ಘಕಾಲ ಸಮಯ ಹಿಡಿಯತ್ತದೆ, ಬಳ್ಳಾರಿ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳು ಸಿಗದೇ ಇರುವುದೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಶಾಸಕರನ್ನು ಒಗ್ಗೂಡಿಸಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ, ಶಿವಮೊಗ್ಗದಲ್ಲಿ ಜೆಡಿಎಸ್ ಮುಂದೆ ಕಾಂಗ್ರೆಸ್ ಶರಣಾಗಿ ಮಲಗಿದೆ, ಯಡಿಯಬರಪ್ಪ ಪುತ್ರ ರಾಘವೇಂದ್ರ ವಿರುದ್ಧ ಕಣಕ್ಕಿಳಿಯು ಸೂಕ್ತ ಅಭ್ಯರ್ಥಿ ಸಿಗದ ಕಾರಣ ಜೆಡಿಎಸ್ ಗೆ  ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ, ಒಂದು ವೇಳೆ ಶಿವಮೊಗ್ಗದಿಂದ ಸ್ಫರ್ಧಿಸಲು ಮಧು ಬಂಗಾರಪ್ಪ ಒಪ್ಪಿದರೇ ಮಾಜಿ ಸಿಎಂಗಳ ಪುತ್ರರ ಸಮರಕ್ಕೆ ಶಿವಮೊಗ್ಗ ಸಾಕ್ಷಿಯಾಗುತ್ತದೆ.
ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ, ಆದರೆ ಈ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಕಾರ್ಯಕರ್ತರ ವಿರೋಧ ಎದುರಿಸುತ್ತಿದೆ. ಸ್ಥಳೀಯ ಕಾರ್ಯಕರ್ತರು ಕಾಂಗ್ರೆಸ್ ಹೈ ಕಮಾಡ್ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡದೇ ಜೆಡಿಎಸ್ ಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದಾರೆ,  ರಾಮನಗರದಲ್ಲಿ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆ ಒಡ್ಡಿದ್ದಾರೆ, ಇದು ಪಕ್ಷಕ್ಕೆ ದೊಡ್ಡ ಮುಜುಗರವಾಗಿದೆ, 
ಕಳೆದ ಒಂದು ವಾರದಿಂದ ಕಾಂಗ್ರೆಸ್ ಪಾಳೇಯದಲ್ಲಿ ನಡೆಯತ್ತಿರುವ ಹಲವು ಬೆಳವಣಿಗೆಗಳು ಹಾಗೂ ಚುನಾವಣಾ ತಂತ್ರಗಳು ಹಲವು ಪ್ರಶ್ನೆಗಳನ್ನು ಮೂಡಿಸಿವೆ, ಸಿದ್ದರಾಮಯ್ಯ ಸಿಎಲ್ ಪಿ ನಾಯಕ, ಪರಮೇಶ್ವರ್ ಉಪಮುಖ್ಯಮಂತ್ರಿ, ದಿನೇಶ್ ಗುಂಡುರಾವ್ ಕೆಪಿಸಿಸಿ ಅಧ್ಯಕ್ಷ, ಹೀಗಾಗಿ ರಾಜ್ಯ ಕಾಂಗ್ರೆಸ್ ಮೇಲೆ ಯಾರಿಗೆ ಸಂಪೂರ್ಣ ಹಿಡಿತವಿದೆ, ಯಾರು ಕರ್ನಾಟಕದ ಉಸ್ತುವಾರಿ ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆ.
ಪ್ರತಿ ಬಾರಿಯೂ ಪಕ್ಷದಲ್ಲಿ ಗೊಂದಲ ಮೂಡುತ್ತದೆ, ಅದನ್ನು ಸರಿಪಡಿಸಲು ಹೈಕಮಾಂಡ್ ಮೊರೆ ಹೋಗುತ್ತಾರೆ, ಉಪಚುನಾವಣೆಯ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಲು ರಾಜ್ಯ ನಾಯಕರು ಹೈಕಮಾಂಡ್ ಮನೆ ಬಾಗಿಲು ತಟ್ಟುತ್ತಿದೆ. ಕಾಂಗ್ರೆಸ್ ಅಸಮರ್ಥತೆ ಒಂದು ರೀತಿಯಲ್ಲಿ ಜೆಡಿಎಸ್ ಗೆ ಲಾಭವಾಗಿ ಪರಿಣಮಿಸುತ್ತಿದೆ, 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸೀಟುಗಳಿಗಾಗಿ ಚೌಕಾಶಿ ಮಾಡಲು ಇದು ನೆರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com