ಜನಾರ್ಧನ ರೆಡ್ಡಿ ಅವರ ಈ ಮಾತಿಗೆ ಅವರದೇ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರೆಡ್ಡಿ ಮಾತಿಗೆ ಶಾಸಕ ಸುರೇಶ್ ಕುಮಾರ್ ತೀವ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, 'ವಿರೋಧಿ ಬಣದ ನಾಯಕನ ಮಗನ ಸಾವು ಸರಕಾಗಿದೆ. ಚುನಾವಣೆ ವೇಳೆ ಪ್ರಚಾರದ ಸರಕಾಗಿರುವುದು ಅಮಾನವೀಯ. ಮಗನನ್ನು ಕಳೆದುಕೊಂಡ ಸಂಕಟ ಯಾರಿಗೂ ಬರದಿರಲಿ. ಮನುಷ್ಯತ್ವ ಕಳೆದುಕೊಳ್ಳದಿರೋಣ ಎಂಬ ಕಿವಿ ಮಾತು ಹೇಳಿದ್ದಾರೆ.