ಮೈತ್ರಿಗಾಗಿ ಡ್ಯಾನಿಷ್ ಅಲಿ ಬಿಎಸ್‍ಪಿ ಸೇರ್ಪಡೆ -ಎಚ್‍ಡಿಕೆ
ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಡ್ಯಾನಿಷ್ ಅಲಿ ತಮ್ಮ ಹಾಗೂ ಪಕ್ಷದ ವರಿಷ್ಠ ದೇವೇಗೌಡ ಅವರ ಒಪ್ಪಿಗೆಯ ಮೇರೆಗೆ ಬಿಎಸ್‍ಪಿ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಡ್ಯಾನಿಷ್ ಅಲಿ ಜೆಡಿಎಸ್ ತೊರೆದು ಬಿಎಸ್‍ಪಿ ಸೇರ್ಪಡೆಗೊಂಡಿರುವ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಲೋಕಸಭಾ ಚುನಾವಣೆಗೆ ಬಿಎಸ್‍ಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಮೈತ್ರಿ ಪಕ್ಷಗಳು ಗೆಲ್ಲಬೇಕಿದೆ. ರಾಜಕೀಯ ಒಪ್ಪಂದದಂತೆ ಡ್ಯಾನಿಷ್ ಅಲಿ ಅವರು ಬಿಎಸ್‍ಪಿ ಸೇರಿದ್ದಾರೆ ಎಂದಿದ್ದಾರೆ.