ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ದೇಶದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶಕ್ಕೆ ತೆರಳಿ ವಿದೇಶಿ ಪ್ರಜೆಗಳ ಕೈಕುಲುಕುತ್ತಿರುವುದರ ವಿರುದ್ಧ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಕುಮಾರಸ್ವಾಮಿ
ಕುಮಾರಸ್ವಾಮಿ
Updated on: 

ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶಕ್ಕೆ ತೆರಳಿ ವಿದೇಶಿ ಪ್ರಜೆಗಳ ಕೈಕುಲುಕುತ್ತಿರುವುದರ ವಿರುದ್ಧ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ನಡೆಸಿದ ವೇಳೆ ಮಾತನಾಡಿರುವ ಅವರು, ದೇಶದ ಇಂದು ಪರಿಸ್ತಿತಿಯನ್ನು ಎದುರಿಸುತ್ತಿದೆ. ದೇಶದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿದೆ. ನಿರುದ್ಯೋಗದಿಂದ ಯುವಕರು ನರಳುತ್ತಿದ್ದಾರೆ. ಯುವತಿಯರಿಗೆ ಕೆಲಸ ನೀಡುತ್ತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಮುಚ್ಚಿತ್ತಿವೆ. ದೇಶದ ಯುವಕರು ಉದ್ಯೋಗವಿಲ್ಲದೆ ಬಳಲುತ್ತಿದ್ದಾರೆ. ಪ್ರಧಾನಿ ಮೋದಿ ಮಾತ್ರ ದೇಶಕ್ಕೆ ಪ್ರವಾಸಿಗರಂತೆ ಬರುತ್ತಿದ್ದಾರೆ. ವಿದೇಶಗಳಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ವಿದೇಶಿ ಪ್ರಜೆಗಳೊಂದಿಗೆ ಕೈಕುಲುಕುತ್ತಿದ್ದಾರೆ. ವಿದೇಶದಲ್ಲಿಯೇ ಕುಳಿತು ದೇಶವನ್ನು ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಇದೇ ವೇಳೆ ರೂ.500 ಹಾಗೂ ರೂ.1,000 ನೋಟಿಗಳನ್ನು ನಿಷೇಧಿಸಿದ್ದಾದರೂ ಏಕೆ ಎಂದು ಇದೇ ವೇಳೆ ಪ್ರಶ್ನೆ ಕೇಳಿದ್ದಾರೆ. 

ರೂ.1,000 ನಿಷೇಧಿಸಿದ್ದಕ್ಕೆ ಕಾರಣ ರೂ.2,000 ತರುವ ಸಲುವಾಗಿದೆ. ಇದರಿಂದ ದೇಶಕ್ಕೆ ಏನಾದರೂ ಒಳಿತಾಗಿದೆಯೇ? ಆದರೂ, ಜನರು ಬಿಜೆಪಿಗೇ ಏಕೆ ಮತನೀಡುತ್ತಿದ್ದಾರೆ. ಪ್ರವಾಹ ಪೀಡಿದ ಪ್ರದೇಶಕ್ಕೂ ಮೋದಿ ಭೇಟಿ ನೀಡಲಿಲ್ಲ. ಸಂತ್ರಸ್ತ ಜನರನ್ನು ವಿಚಾರಿಸಲಿಲ್ಲ. ಆದರೂ ಏನಾದರೂ ಮಾಡುತ್ತಾರೆಂಬ ನಂಬಿಕೆಯಿಂದಲೇ ಈಗಲೂ ಜನರು ಮೋದಿಗೆ ಮತ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com