ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್: ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ನೋಡಿ ಕಲಿಯಿರಿ!
ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿ ಮುಂದುವರಿಸಿದೆ. ರಾಜ್ಯದ ಬಿಜೆಪಿ ಸಂಸದರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ
Published: 01st December 2021 08:47 AM | Last Updated: 01st December 2021 01:05 PM | A+A A-

ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವಿಟ್ಟರ್ ನಲ್ಲಿ ಹಾಕಿರುವ ಫೋಟೋ
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿ ಮುಂದುವರಿಸಿದೆ. ರಾಜ್ಯದ ಬಿಜೆಪಿ ಸಂಸದರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ‘ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುವುದಕ್ಕೂ ಪೈಪೋಟಿ ಇದೆ ಖಂಡ್ರೆಯವರೇ, ಏಕೋ ನಿಮ್ಮ ವೇಗ ಕಡಿಮೆಯಾಯ್ತು, ಹೀಗಾಗಿ ಇನ್ನೂ ಕಾರ್ಯಾಧ್ಯಕ್ಷ ಸ್ಥಾನದಲ್ಲೇ ಇದ್ದೀರಿ. ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ಅವರನ್ನು ನೋಡಿ ಕಲಿಯಿರಿ’ ಎಂದು ಲೇವಡಿ ಮಾಡಿದೆ.
ಖಂಡ್ರೆಯವರೇ,
— BJP Karnataka (@BJP4Karnataka) November 30, 2021
ಗುಲಾಮಗಿರಿಯ ಪ್ರದರ್ಶನಕ್ಕಾಗಿ ಡಿಕೆಶಿ ಮಾಡುತ್ತಿರುವ ಆತುರವನ್ನು ಒಮ್ಮೆ ಕಣ್ಣು ತುಂಬಿಸಿಕೊಳ್ಳಿ.
ಇದನ್ನು ಜನಸಾಮಾನ್ಯರು ಗುಲಾಮಗಿರಿ ಎಂದು ಕರೆಯುತ್ತಾರೆ.
ನಕಲಿ ಗಾಂಧಿ ಕುಟುಂಬದ ಕರೆ ಬಂದಕೂಡಲೇ ಡಿಕೆಶಿ ಅವರು ನಿಮ್ಮನ್ನು ಬದಿಗೆ ಸರಿಸಿದ ರೀತಿ ಇದೆಯಲ್ವಾ, ಆ ಕ್ಷಣವನ್ನು ಗುಲಾಮಿತನ ಎನ್ನುತ್ತಾರೆ.#ಕುಟುಂಬಭಜಕರು pic.twitter.com/IPPidxv7Nk
‘ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್. ನೆಹರು, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.
ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್. ನೆಹರು, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ? ಕುಟುಂಬ ಭಜಕರು ಎಂದು ಟ್ವೀಟ್ ಮಾಡಿದೆ.
ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುವುದಕ್ಕೂ ಪೈಪೋಟಿ ಇದೆ ಖಂಡ್ರೆಯವರೇ, ಏಕೋ ನಿಮ್ಮ ವೇಗ ಕಡಿಮೆಯಾಯ್ತು!
— BJP Karnataka (@BJP4Karnataka) November 30, 2021
ಹೀಗಾಗಿ ಇನ್ನೂ ಕಾರ್ಯಾಧ್ಯಕ್ಷ ಸ್ಥಾನದಲ್ಲೇ ಇದ್ದೀರಿ. ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ಅವರನ್ನು ನೋಡಿ ಕಲಿಯಿರಿ.#ಕುಟುಂಬಭಜಕರು pic.twitter.com/b4pzJd5773