ರಾಹುಲ್ ಸ್ಥಿತಿ, ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ- ಬಿಜೆಪಿ

ರಾಹುಲ್ ಗಾಂಧಿಯ ಭಾರತ್ ತೋಡೋ ಯಾತ್ರೆ ರಾಜ್ಯದಲ್ಲಿ ಕಾಮಿಡಿ ಯಾತ್ರೆಯಾಗಿ ಜನತೆ ಭರಪೂರ ಮನರಂಜನೆ ನೀಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ರಾಹುಲ್ ಚಿತ್ರ
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ರಾಹುಲ್ ಚಿತ್ರ

ಬೆಂಗಳೂರು: ರಾಹುಲ್ ಗಾಂಧಿಯ ಭಾರತ್ ತೋಡೋ ಯಾತ್ರೆ ರಾಜ್ಯದಲ್ಲಿ ಕಾಮಿಡಿ ಯಾತ್ರೆಯಾಗಿ ಜನತೆ ಭರಪೂರ ಮನರಂಜನೆ ನೀಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಸಂಬಂಧ ವಿಡಿಯೋವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ, ಭಾರತವನ್ನು ಜೋಡಿಸುತ್ತೇನೆ ಅಂತ ಕರ್ನಾಟಕಕ್ಕೆ ಬಂದ ರಾಹುಲ್ ಗಾಂಧಿ, ಇಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು  ಒಂದು ಮಾಡಲು ಹೆಣಗಾಡಿದರು ಎಂದು ವಿವರಿಸಿದೆ. 

ಕರ್ನಾಟಕವನ್ನು ಹೇಗಿತ್ತೋ ಹಾಗೆಯೇ ಬಿಟ್ಟು ಹೋಗಲು‌ ಸಿದ್ಧವಾದ ರಾಹುಲ್ ಸ್ಥಿತಿ, ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ ಎಂದು ಬಿಜೆಪಿ ಭಾರತ್ ಜೋಡೋ ಯಾತ್ರೆಯನ್ನು ಅಣಕಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com