ಭಾರತ್‌ ಜೋಡೊ ಯಾತ್ರೆಯಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಪದ್ಮಾವತಿ

ಭಾರತ್‌ ಜೋಡೋ ಯಾತ್ರೆಯಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಶನಿವಾರ ಪ್ರತ್ಯಕ್ಷರಾಗಿದ್ದು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದರು.
ಭಾರತ್‌ ಜೋಡೊ ಯಾತ್ರೆಯಲ್ಲಿ ನಟಿ ರಮ್ಯಾ
ಭಾರತ್‌ ಜೋಡೊ ಯಾತ್ರೆಯಲ್ಲಿ ನಟಿ ರಮ್ಯಾ

ರಾಯಚೂರು: ಭಾರತ್‌ ಜೋಡೋ ಯಾತ್ರೆಯಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಶನಿವಾರ ಪ್ರತ್ಯಕ್ಷರಾಗಿದ್ದು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದರು.

ರಾಜ್ಯದಲ್ಲಿ ಭಾರತ್‌ ಜೋಡೊ ಯಾತ್ರೆಯ ಕೊನೆಯ ದಿನವಾದ ಇಂದು ರಾಯಚೂರು ನಗರದಲ್ಲಿ ರಮ್ಯಾ ಭಾಗವಹಿಸಿದ್ದರು. ಮಂತ್ರಾಲಯ ಮಾರ್ಗದ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆ ಆಯೋಜಿಸಿದ್ದ ವಾಲ್ಕಟ್‌ ಮೈದಾನದವರೆಗೂ ರಾಹುಲ್‌ಗಾಂಧಿ ಅವರೊಂದಿಗೆ ಮಾತನಾಡುತ್ತಲೇ ಪಾದಯಾತ್ರೆ ಮಾಡಿದರು.

ಪಾದಯಾತ್ರೆಯಲ್ಲಿ ರಮ್ಯಾ ಅವರು ಸೇರಿಕೊಳ್ಳುತ್ತಿದ್ದಂತೆ ಜನರು ಗುಂಪಾಗುವುದು ಹೆಚ್ಚಳವಾಯಿತು. ಎಂದಿನಂತೆ ರಾಹುಲ್‌ಗಾಂಧಿ ಅವರು ರಸ್ತೆ ಎರಡು ಅಂಚಿನಲ್ಲಿ ನಿಂತಿದ್ದ ಜನರತ್ತ ಕೈಬೀಸಿಕೊಂಡು ಮುನ್ನಡೆದರು.

ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದರು.  ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಅವರು ಕಳೆದ ಮೂರು ವಾರಗಳಿಂದ ಕರ್ನಾಟಕದಲ್ಲಿ ಯಾತ್ರೆ ನಡೆಸಿದ್ದಾರೆ. ಕರ್ನಾಟಕದಿಂದ ಇನ್ನೂ ಕಾಶ್ಮೀರದವರೆಗೂ ಈ ಯಾತ್ರೆ ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com