ರಾಜಕೀಯ

ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ: ಕಾಂಗ್ರೆಸ್

ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ: ಕಾಂಗ್ರೆಸ್
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ, ಅವರ ಮಾತುಗಳಿಗೆ, ತೀರ್ಮಾನಗಳಿಗೆ ಅವರದ್ದೇ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಟೀಕೆ ಮಾಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಸತ್ಯ ಏನೆಂದರೆ ಮೈತ್ರಿ ಇರುವುದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಹೊರತು ಬಿಜೆಪಿ- ಜೆಡಿಎಸ್ ನಡುವೆ ಅಲ್ಲ. ಇತ್ತ ಬಿಜೆಪಿ ನಾಯಕರಿಗೂ ಮೈತ್ರಿ ಬಗ್ಗೆ ಅಸಮಧಾನ, ಅತ್ತ ಒರಿಜಿನಲ್ ಜೆಡಿಎಸ್ ನವರಿಗೂ ಅಸಮಧಾನ. ಇಂತಹದ್ದನ್ನು ಮೈತ್ರಿ ಎನ್ನಲಾದೀತೆ? ಎಂದು ವ್ಯಂಗ್ಯವಾಡಿದೆ.

ಕುಮಾರಸ್ವಾಮಿಯವರು ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ,

ಅಪ್ಪನ ಹೆಸರಿನಲ್ಲಿ ನಡೆಸುವ ದರ್ಬಾರು, ಪ್ರಶ್ನೆ ಮಾಡಿದವರನ್ನ ಹೊರ ದಬ್ಬುವ ಚಾಳಿ,  ರಾಜ್ಯ ರಾಜಕೀಯ ವ್ಯಾಪಾರದ ದಲ್ಲಾಳಿ. ಕುಮಾರಸ್ವಾಮಿಯವರ ಮಾತುಗಳಿಗೆ, ತೀರ್ಮಾನಗಳಿಗೆ ಅವರದ್ದೇ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವೇ? ಎಂದು ಹೇಳಿದೆ.

ಮತ್ತೊಂದು ಟ್ವೀಟ್ ನಲ್ಲಿ ಅಧಿಕಾರವಿಲ್ಲದ, ಲೂಟಿಯ ಅವಕಾಶ ವಂಚಿತ ಬಿಜೆಪಿ ಜೆಡಿಎಸ್ ನಾಯಕರು ಮತಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವೇ ಇಲ್ಲದ ಗುತ್ತಿಗೆದಾರನ ಮನೆಯಲ್ಲಿ ಹಣವಿದ್ದರೆ ಕಾಂಗ್ರೆಸ್ ಗೆ ಸಂಬಂಧ ಕಟ್ಟುವ ಬಿಜೆಪಿಗರು ಚಿಲುಮೆ ಪ್ರಕರಣದಲ್ಲಿ ಆಗಿನ ಹಾಲಿ ಸಚಿವರೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ನೇರಾನೇರಾ ಸಾಕ್ಷಿಯಾಗಿ ಸಿಕ್ಕಿದ್ದವು. ಚಿಲುಮೆ ಹಗರಣದಲ್ಲಿ ಇಡೀ ಬಿಜೆಪಿ ಕೈವಾಡವಿರುವುದನ್ನು ಬಿಜೆಪಿ ಬಹಿರಂಗವಾಗಿ ಒಪ್ಪಿಕೊಳ್ಳುವುದೇ?? ಎಂದು ಪ್ರಶ್ನಿಸಿದೆ.

ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದವರು ಬಿಜೆಪಿಗರು, ಕಮಿಷನ್ ಕಲೆಕ್ಷನ್ ನಲ್ಲಿ ರಾಜೀನಾಮೆ ಕೊಟ್ಟವರೂ ಬಿಜೆಪಿಗರು. ಕಮಿಷನ್, ಭ್ರಷ್ಟಾಚಾರಗಳ ಬಗ್ಗೆ ಸ್ವಪಕ್ಷದವರಿಂದಲೇ ಟೀಕೆಗೆ ಒಳಗಾಗಿದ್ದು ಬಿಜೆಪಿ. ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ. ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದೂ ಬಿಜೆಪಿ. ಇಂತಹ ಭ್ರಷ್ಟ ಜನತಾ ಪಾರ್ಟಿ ಕಾಂಗ್ರೆಸ್ ಕಡೆ ಕೈ ತೋರಿಸುವುದು ಕೋತಿ ಮೊಸರು ತಿಂದು ಮೇಕೆಯತ್ತ ಕೈ ತೋರಿಸಿದಂತೆಯೇ ಸರಿ ಎಂದು ವ್ಯಂಗ್ಯವಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.