ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬೆಳವಣಿಗೆ: ಸಂಪುಟ ಪುನಾರಚನೆ ವೇಳೆ ನಮಗೂ ಸಚಿವ ಸ್ಥಾನ ಕೊಡಿ; 24 MLC ಗಳ ಪತ್ರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾದ ಪರಿಷತ್‌ ಸದಸ್ಯರು, ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ 24 ಎಂಎಲ್‌ಸಿಗಳು ಸಹಿ ಮಾಡಿದ ಪತ್ರವನ್ನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ.
Mallikarjuna Kharge
ಮಲ್ಲಿಕಾರ್ಜುನ ಖರ್ಗೆ
Updated on

ಬೆಂಗಳೂರು: ಇತ್ತೀಚೆಗಷ್ಟೇ ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರು ಒತ್ತಾಯ ಮಾಡಿ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನ 24 ಮಂದಿ ವಿಧಾನ ಪರಿಷತ್‌ ಸದಸ್ಯರೂ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾದ ಪರಿಷತ್‌ ಸದಸ್ಯರು, ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ 24 ಎಂಎಲ್‌ಸಿಗಳು ಸಹಿ ಮಾಡಿದ ಪತ್ರವನ್ನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ.

ಸಂಪುಟದಲ್ಲಿ ಎಂಎಲ್‌ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ, ನಿರುತ್ಸಾಹ ಭಾವನೆ ಉಂಟುಮಾಡುತ್ತೆ. ಇದು ಎಂಎಲ್‌ಸಿಗಳಿಗೆ ರಾಜಕೀಯ ನಿರೀಕ್ಷೆಗಳಿಲ್ಲ ಎಂಬ ಗ್ರಹಿಕೆಗೆ ಕಾರಣವಾಗುತ್ತದೆ. ಸಮರ್ಥ ನಾಯಕರು ಎಂಎಲ್‌ಸಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್‌ಗಳನ್ನ ಪಡೆಯಲು ಮುಂದಾಗುತ್ತಾರೆ.

ನಂತರ ಇದು ಗುಂಪುಗಾರಿಕೆಗೆ ಕಾರಣವಾಗುತ್ತದೆ. ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸುತ್ತದೆ. ಎಲ್ಲಾ ಎಂಎಲ್‌ಸಿಗಳು ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಆಳವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ವಿಧಾನ ಪರಿಷತ್ತಿನ ಕನಿಷ್ಠ 5 ಸದಸ್ಯರನ್ನ ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Mallikarjuna Kharge
ನಾಯಕತ್ವ ಬದಲಾವಣೆ ಗದ್ದಲ ನಡುವೆ ಹೈಕಮಾಂಡ್ ಗೆ 31 ಮಂದಿ 'ಕೈ' ಶಾಸಕರು ಪತ್ರ; ಬೇಡಿಕೆ ಏನು ಗೊತ್ತಾ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com