ಆಸ್ಪಿರೇಷನಲ್ ಎ3

ಆಸ್ಪಿರೇಷನಲ್ ಎ3
Updated on: 

ಲೆಮನ್ ಮೊಬೈಲ್ ಹ್ಯಾಂಡ್‌ಸೆಟ್ 3ಡಿ ಲೋಕಕ್ಕೆ ಕಾಲಿಟ್ಟಿದೆ. ಆಕರ್ಷಕ 'ಆಸ್ಪಿರೇಷನಲ್ ಎ 3' ಹೆಸರಿನ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಲೆಮನ್ 3ಡಿ ಲೋಕದಲ್ಲಿ ಹೊಸ ಮುನ್ನುಡಿ ಬರೆಯಲು ಹೊರಟಿದೆ. 3ಡಿ ಗ್ಲಾಸ್ ಸಹಾಯವಿಲ್ಲದೇ 3ಡಿ ಅನುಭವ ನೀಡುವುದು ಈ ಮೊಬೈಲಿನ ವಿಶೇಷ.
ಈ ಮೊಬೈಲ್ ಕ್ಯಾಮೆರಾದಿಂದ ತೆಗೆದ ಚಿತ್ರಗಳು ನೈಜತೆಯ ಬಿಂಬವಾಗಿರುತ್ತವೆ ಎಂಬುದು ಕಂಪನಿಯ ಹೇಳಿಕೆ. 3ಡಿ ಸ್ಲೀಕ್, ಸ್ಮಾರ್ಟ್ ತಂತ್ರಜ್ಞಾನಗಳನ್ನು ಹೊಂದಿರುವ ಮೊಬೈಲ್ ಅನೇಕ ಗುಣ ವಿಶೇಷತೆಗಳನ್ನು ಹೊಂದಿದೆ.
1 ಜಿಎಚ್‌ಝಡ್ ಡ್ಯುಯೆಲ್ ಕೊರ್ಟೆಕ್ಸ್- ಎ9 ಪ್ರೊಸೆಸರ್ ಜತೆಗೆ 3ಡಿ ಸೌಲಭ್ಯವೂ ಇರುವುದರಿಂದ ತಾಂತ್ರಿಕ ದೃಷ್ಟಿಯಿಂದ ಇದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ಲಾಸ್ ಫ್ರೀ 3ಡಿ ಸೌಲಭ್ಯದೊಂದಿಗೆ ವಿಡಿಯೋ ಕಾಲಿಂಗ್ ಅವಕಾಶ ಇರುವ ಕಾರಣ ಆಧುನಿಕ ಕಾಲದಲ್ಲಿನ ಅಗತ್ಯ ಸಾಧನಗಳ ಪಟ್ಟಿಗೆ ಇದನ್ನು ಸೇರಿಸಬಹುದು.
ಮೊಬೈಲಿನ ಪ್ರಮುಖ ಆಕರ್ಷಣೆಯೆಂದರೆ, ಸ್ಟೀರಿಯೋಸ್ಕೋಪಿಕ್ 3ಡಿ ವಿಡಿಯೋ ಮತ್ತು ನೈಜವಾಗಿ ಕಾಣುವ ಚಿತ್ರಗಳು. 'ಆಸ್ಪಿರೇಷನಲ್ ಎ 3' ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಫಾಸ್ಟ್‌ಟ್ರ್ಯಾಕ್ ಕಮ್ಯುನಿಕೇಷನ್ ಪ್ರೈ.ಲಿನ ಸಂದೀಪ್ ಮುಶ್ರಾನ್, 'ಹೊಸ ರೂಪದ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಂತೋಷಪಡುತ್ತೇನೆ. ನೂತನ ಮೊಬೈಲ್ ಮಾರುಕಟ್ಟೆಯಲ್ಲಿ ಕ್ರಾಂತಿಕಾರಕ ಅನ್ವೇಷಣೆ ಎನ್ನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಆಸ್ಪಿರೇಷನಲ್ ಎ3 3ಡಿ ಮೊಬೈಲ್ ಮೂವಿ ಜತೆಗೆ ಆಕರ್ಷಕ ಗೇಮ್‌ನೊಂದಿಗೆ ನಿಮ್ಮ ಅಂಗೈಗೆ ಬಂದಿದೆ. ನಿಮ್ಮ ಪಾಕೆಟ್‌ನಲ್ಲಿ ಅವಶ್ಯ ಸಾಧನವಾಗಿ ಆಶ್ರಯ ಪಡೆಯಲು ಸಿದ್ಧವಾಗಿದೆ' ಎಂದರು.
ಐಪಿಎಸ್ 10.9 ಸೆ.ಮೀನ ಗ್ಲಾಸ್ ಫ್ರೀ 3ಡಿ ಸಾಮರ್ಥ್ಯದ ಟಚ್ ಸ್ಕ್ರೀನ್ ಸೌಲಭ್ಯವಿದೆ. ಉತ್ತಮ ಗುಣಮಟ್ಟದ ಚಿತ್ರಗಳ ಜತೆಗೆ, ಕಣ್ಣಿಗೆ ಯಾವುದೇ ರೀತಿಯ ಒತ್ತಡ ನೀಡದಂತೆ ಸ್ಕ್ರೀನ್ ರೂಪಿಸಲಾಗಿದೆ.
ಫಾಸ್ಟ್‌ಟ್ರ್ಯಾಕ್ ಕಮ್ಯುನಿಕೇಷನ್ ಪ್ರೈ.ಲಿನ ನಿರ್ದೇಶಕ ಗೋಪಾಲ್ ಕಾಲ್ರಾ ಮಾತನಾಡಿ, 'ಯಾವುದೇ ಸಮಸ್ಯೆಗಳಿಲ್ಲದೆ ಈ ಮೊಬೈಲ್ ಬಳಕೆ ಮಾಡಬಹುದು. ಆ್ಯಂಡ್ರಾಯ್ಡ್ 4.0 ಜತೆಗೆ ನೂತನ ಡ್ಯುಯಲ್ ಕೋರ್ ಪ್ರೊಸೆಸರ್ ಕೂಡ ಲಭ್ಯ. ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳು 3ಡಿಯ ಸಮಗ್ರತೆಯನ್ನು ಹಿಡಿದಿಡುವ ಜತೆಗೆ ಲ್ಯಾಂಡ್‌ಸ್ಕೇಪ್, ಕ್ಲೋಸಪ್ ಚಿತ್ರಗಳನ್ನು ತೆಗೆಯುವಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಮುಖ ಲಕ್ಷಣ
4 ಇಂಚಿನ ಟಚ್‌ಸ್ಕ್ರೀನ್, 960್ಢ540 ಪಿಕ್ಸೆಲ್ ಡಿಸ್‌ಪ್ಲೇ, 8ಎಂಪಿ, 2 ಎಂಪಿ ಸಾಮರ್ಥ್ಯದ ಕ್ಯಾಮೆರಾ, 2ಡಿ ಮತ್ತು 3ಡಿಯಲ್ಲಿ ಚಿತ್ರಣ, 1 ಜಿಬಿ ರ್ಯಾಮ್ ಮತ್ತು 4 ಜಿಬಿ ಮೆಮೋರಿ, 64 ಜಿಬಿ ಎಕ್ಸಾಪಾಂಡೆಬಲ್ ಮೆಮೊರಿ, ಉತ್ತಮ ಗುಣಮಟ್ಟದ 1640 ಸಾಮರ್ಥ್ಯದ ಲಿಥಿಯಂ ಬ್ಯಾಟರಿ, ಡ್ಯುಯಲ್ ಸಿಮ್ ಹೊಂದಿದೆ. ಆದರೆ ಕೇವಲ 1640 ಎಂಎಎಚ್ ಲೈ-ಆನ್ ಬ್ಯಾಟರಿ ಹೊಂದಿದೆ. ಇದರಿಂದ ಆಗಾಗ ಬ್ಯಾಟರಿ ಚಾರ್ಜ್ ಮಾಡುವ ಅನಿವಾರ್ಯ ಸೃಷ್ಟಿಯಾಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com