

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಸಂಸ್ಥೆಯು 'ಭಾರತ್ ಫೋನ್'ನ್ನು ಮಾರುಕಟ್ಟೆಗೆ ಬಿಟ್ಟಿದೆ. ಆಕಾಶ್ ಟ್ಯಾಬ್ಲೆಟ್ ಮಾದರಿಯಲ್ಲಿ ಅಗ್ಗದ ದರದಲ್ಲಿ ಮಿನಿ ಸ್ಮಾರ್ಟ್‌ಫೋನ್‌ನ್ನು ಬಿಎಸ್‌ಎನ್‌ಎಲ್ ರೂಪಿಸಿದೆ. 3 ಇಂಚಿನ ಸ್ಕ್ರೀನ್ ಹೊಂದಿರುವ ಈ ಮೊಬೈಲ್‌ನ ದರ ಕೇವಲ 1799. ಡ್ಯೂಯಲ್ ಸಿಮ್, 3ಜಿ ನೆಟವರ್ಕ್ ಹೊಂದಿರುವ ಈ ಫೋನ್‌ನಲ್ಲಿ ಇಮೇಲ್, ಫೇಸ್‌ಬುಕ್ ಸೌಲಭ್ಯವೂ ಇದೆ. 1800 ಎಂಎಎಚ್ ಬ್ಯಾಟರಿ ಸೌಲಭ್ಯ ಹೊಂದಿರುವ ಈ ಫೋನ್‌ನ್ನು ಬಿಎಸ್‌ಎನ್‌ಎಲ್ ಜತೆ ಪ್ಯಾಂಟೆಲ್ ಟೆಕ್ ಎಂಬ ಸಂಸ್ಥೆ ಸೇರಿ ಹೊರತಂದಿದೆ.