ದಶ ಸಾಧನೆ

Updated on: 

ಎಲ್ಲ ವೈಜ್ಞಾನಿಕ ಆವಿಷ್ಕಾರಗಳ ಉದ್ದೇಶ ಮಾನವ ಕಲ್ಯಾಣ. ಅದು  ಚಿಕ್ಕದಿರಲಿ, ದೊಡ್ಡದಿರಲಿ, ನಿರ್ದಿಷ್ಟ ಉದ್ದೇಶವನ್ನು ಪೂರೈಸುವುದಲ್ಲದೇ ಜನ ಜೀವನದ ದಿನಂಪ್ರತಿಯ ಬದುಕನ್ನು ಸರಾಗಗೊಳಿಸಿ ನಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಅಂಥ ಉಪಯುಕ್ತವಾದ 10 ವೈಜ್ಞಾನಿಕ ಆವಿಷ್ಕಾರಗಳು ಇಲ್ಲಿವೆ. ಈ ಆವಿಷ್ಕಾರಗಳಿಗೆ '2012ರ ಸಾಧನೆ' ಎಂದು ಪರಿಗಣಿಸಿ ಜಾಗತಿಕ ಪುರಸ್ಕಾರಗಳನ್ನೂ ನೀಡಿ ಗೌರವಿಸಲಾಗಿದೆ.

ಐ ಆಪ್ಟಿಕ್(ಪರಿಷ್ಕೃತ - ರಿಯಾಲಿಟಿ ಕಾಂಟ್ಯಾಕ್ಟ್ ಲೆನ್ಸಸ್)
ಪರಿಷ್ಕೃತ ಐ ಆಪ್ಟಿಕ್ ಕಾಂಟ್ಯಾಕ್ಟ್ ಲೆನ್ಸ್‌ನಲ್ಲಿ ನ್ಯಾನೊ ಫಿಲ್ಟರ್‌ಗಳಿರುತ್ತವೆ. ಒಂದು ಹೊರಗಿನಿಂದ ಬೆಳಕನ್ನು ಹರಿಯಬಿಟ್ಟರೆ, ಇನ್ನೊಂದು ಆಂತರಿಕ ಫಿಲ್ಟರ್‌ಗ್ಲಾಸ್‌ನಲ್ಲಿ ಅಳವಡಿಸಲಾಗಿರುವ ಪ್ರೊಜೆಕ್ಟರ್‌ನಿಂದ ಚಿತ್ರಗಳನ್ನು ಕಾಣುವಂತೆ ಮಾಡಲಾಗಿರುತ್ತದೆ. ಇದರಿಂದ ನೋಡುಗರು ತಮ್ಮ ಕಾಂಟ್ಯಾಕ್ಟ್ ಲೆನ್ಸ್‌ನೊಳಗಿನ ನೋಟದಲ್ಲಿ ವಿಶೇಷ ಅನುಭೂತಿ ಹೊಂದಲು ಸಾಧ್ಯವಿದೆ. 'ಇನೊವೇಗಾ' ಕಂಪನಿ ಸ್ಥಾಪಿಸಿ ತನ್ನ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸುತ್ತಿರುವ ರಾಂಡಿ ಸ್ಪಾರಾಗ್‌ಗೆ ಕೇವಲ 18 ತಿಂಗಳುಗಳಲ್ಲೇ ನ್ಯಾಷನಲ್ ಫೌಂಡೇಶನ್ ಗ್ರಾಂಡ್ ಪ್ರಶಸ್ತಿ ಲಭಿಸಿದೆ. ಇದನ್ನು ಧರಿಸಿರುವಾತನಿಗೆ ಒಂದು ಪರಿಷ್ಕೃತ ನೈಜ ಚಿತ್ರದಣ ಅನುಭವ ದೊರಕುತ್ತದೆಂಬುದು ಸ್ಪಾರಾಗ್ ಹೇಳಿಕೆ.

ಲಾಂಚ್ ಸ್ಕೇಟ್ಸ್
ಕಾಲಿಗೆ ಚಕ್ರ ಕಟ್ಟಿಕೊಂಡು ರೊಯ್ಯನೆ ಒಮ್ಮೆ ಹೀಗೆ ಬಗ್ಗಿ ಹಾಗೆ ಸರ್ರನೆ ಮುನ್ನುಗ್ಗುವ ಸ್ಕೇಟಿಂಗ್ ನೋಡಲೆಷ್ಟು ಆಕರ್ಷಕವೋ ಆಟಗಾರರಿಗೆ ಅಷ್ಟೇ ಅಪಾಯ ಕೂಡ. ಅದರಲ್ಲೂ ಉತ್ತಮ ಪ್ರದರ್ಶನ ನೀಡಲು ಅತ್ಯುತ್ತಮ ಸಾಧನ ಬೇಕೇಬೇಕು. ಟೊರೆಂಟೋನ ಡೇವಿಡ್ ಬ್ಲೋಯಿಸ್‌ನ ಈ ಆವಿಷ್ಕಾರದಲ್ಲಿ ಒಮ್ಮೆ ಸ್ಕೇಟರ್ ತನ್ನ ಸ್ಕೇಟಿಂಗ್ ಸವಾರಿ ಆರಂಭಿಸಿದರೆ ಸ್ಟ್ರಿಂಗ್ ಕಂಪ್ರೆಸ್ ಆಗುತ್ತದೆ. ಬ್ಲೇಡ್ ಸ್ಲೇಡರ್‌ಗಳು ಕೆಲವು ಮಿಲಿಮೀಟರ್‌ಗಳಷ್ಟು ಎತ್ತರಕ್ಕೆ ಕೊಂಡೊಯ್ಯುವುದು ವಿಶೇಷ. ಸ್ಕೇಟರ್ ತನ್ನ ಪಾದಗಳನ್ನು ಎತ್ತಿದಾಗ ಸ್ಟ್ರಿಂಗ್‌ತನ್ನ ಸಂಗ್ರಹಿತ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಇದರಿಂದ ಇನ್ನಿತರೆ ಸ್ಕೇಟರ್‌ಗಳಿಗಿಂತ ಹೆಚ್ಚು ಆಕರ್ಷಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸಾಧ್ಯ. ಈ ನವೀನ ತಂತ್ರಜ್ಞಾನದಿಂದ ಸ್ಕೇಟಿಂಗ್‌ನಲ್ಲಿ ಸಂಭವಿಸಬಹುದಾದ ಪೆಟ್ಟುಗಳು ಬಹುತೇಕ ಕಡಿಮೆಯಾಗುತ್ತವೆಂಬುದು ಡೇವಿಡ್ ಹೇಳಿಕೆ. ಈ ಆವಿಷ್ಕಾರಕ್ಕೆ ತಗುಲಿದ ಒಟ್ಟು ವೆಚ್ಚ 20 ಸಾವಿರ ಡಾಲರ್.

ಅಸಿಸ್ಟೆಡ್ ವಾಕಿಂಗ್ ಡಿವೈಸ್
ಜಾನ್ ಕ್ರಿಶ್ಟಿಯನ್‌ಸೆನ್, ರಿಚರ್ಡ್ ಹೆಸಲ್ ಹುರ್ಸ್ಟ್, ಸ್ಟೀವ್ ವಿಲಿಯನ್ಸ್ ಜಂಟಿಯಾಗಿ ಆವಿಷ್ಕರಿಸಿದ ಈ 'ವಾಕಿಂಗ್ ಡಿವೈಸ್‌' ನಿಮ್ಮ ಹೆಜ್ಜೆಯ ಸಂವೇದನೆಯನ್ನು ಅರಿಯುತ್ತದೆ. ಇದರಲ್ಲಿ ರೋಗಿಯ ಹೆಬ್ಬೆರಳು ಮತ್ತುಹಿಮ್ಮಡಿಯ ನಡೆದಾಟವನ್ನು ದಾಖಲಿಸುವ ಒಂದು ಇನ್ಸೋಲ್ ರಿಜಿಸ್ಟರ್ ಇರುತ್ತದೆ. ಇದು ತನ್ನಲ್ಲಿರುವ ಮಾಹಿತಿಯನ್ನು ಕಾಲಿನಲ್ಲಿರುವ ಟ್ರಾನ್ಸಿಸ್ಟರ್‌ಗೆ ರವಾನಿಸುತ್ತದೆ. ಅದು ತನ್ನಲ್ಲಿನ ಡೇಟಾವನ್ನು ಕಿವಿಯ ರಿಸೀವರ್‌ಗೆ ತಲುಪಿಸುತ್ತದೆ. ಇದರಿಂದಾಗಿ ಮೆದುಳಿನಲ್ಲಿ ನೋಂದಣಿಯಾದ ಸಿಗ್ನಲ್‌ಗಳು ಕಿವಿಯ ನರ ವ್ಯವಸ್ಥೆಗೆ ರವಾನಿಸಲ್ಪಟ್ಟು ನಡಿಗೆ ಸಲೀಸಾಗುತ್ತದೆ. ಪಾರ್ಕಿನ್‌ಸನ್ ರೋಗ, ಸ್ಟ್ರೋಕ್ ಅಥವಾ ಇನ್ನಿತರೆ ಗಾಯಗಳಿಂದದೇಹದ ಸಮತೋಲನ ಕಳೆದುಕೊಂಡವರಿಗೆ ಇದು ಉಪಯುಕ್ತ. ಯಾವುದೇ ಶೂ ಒಳಗೆ ಹೊಂದಿಕೊಳ್ಳುವುದಲ್ಲದೇ ಫೋನ್‌ನಂತೆ ಜಾರ್ಜ್ ಮಾಡಬಹುದಾಗಿದೆ. ಇದನ್ನು ಅಭಿವೃದ್ಧಿಪಡಿಸಲು ತಗುಲಿದ ವೆಚ್ಚ 2 ಲಕ್ಷ ಡಾಲರ್.

ಹೀಟ್ ಸೀಕರ್
ಬೇಸಿಗೆ ಬಂದಾಗ ಹಳ್ಳಿಗಳ ಕಡೆ ಹೈಕಳು ಮೈ ತಂಪಾಗಿಸಿಕೊಳ್ಳಲು ಬಾವಿಗೆ ಧುಮುಕಿದರೆ ಪಟ್ಟಣದ ಕಡೆ ಸ್ವಿಮ್ಮಿಂಗ್ ಪೂಲ್ ಇದ್ದೆಡೆ ಜನ ಜಮಾಯಿಸುವುದು ಸಹಜ. ಆದರೆ ಈ ಯಾವ ಸೌಲಭ್ಯವೂ ಇಲ್ಲದ ಕಡೆ? ಅದಕ್ಕೆಂದೇ ಮೈಕಲ್ ರಾಬಿನ್‌ಸನ್ ಹೀಟ್‌ಸೀಕರ್ ಅನ್ನು ಆವಿಷ್ಕರಿಸಿದ್ದಾರೆ. ಅದು ನೀರನ್ನು ಒಂದು ಫೈಯರ್ ಟ್ರಕ್‌ನ ವಾಟರ್ ಟ್ಯಾಂಕ್‌ನಿಂದ ತಂತಾನೆ ವೇಗವಾಗಿ ಸ್ಪ್ರೇ ಮಾಡುವ ತಂತ್ರಜ್ಞಾನ ಹೊಂದಿದೆ. ವಿಶೇಷವಾಗಿ ಮಕ್ಕಳನ್ನು ತಣ್ಣಗೆ ಇರಿಸಲು ಫೈರ್ ಹೈಡ್ರೆಂಟ್ಸ್ ಇರುವಂಥ ಒಂದು ಕ್ಯಾಂಪ್ ಸಹ ಇದಕ್ಕಿದೆ. ಇದನ್ನು ಅಭಿವೃದ್ಧಿಪಡಿಸಲು ತಗುಲಿದ ವೆಚ್ಚ 50 ಡಾಲರ್.

ರಿ ಸೈಕ್ಲಿಂಗ್ ಶವರ್
ಸ್ನಾನ ಮಾಡುತ್ತೇವೆ ನಿಜ. ಆದರೆ ಬಳಸುವ ನೀರು ಹೈಜನಿಕ್ ಆಗಿರದಿದ್ದರೆ ಹೇಗೆ? ಅದಕ್ಕೆಂದೇ ಪೀಟರ್ ಬ್ರೆವಿನ್ 'ರೀ ಸೈಕ್ಲಿಂಗ್ ಶವರ್‌' ಅನ್ನು ಆವಿಷ್ಕರಿಸಿದ್ದಾರೆ. ಇದು ನೀರಿನಲ್ಲಿ ಕರಗದ ಅಂಶಗಳನ್ನು ಪ್ರತ್ಯೇಕಿಸುತ್ತದೆ. ನೀರು ಒಂದು ಫಿಲ್ಟರ್‌ನಿಂದ ಹೊರಬರುತ್ತದೆ ಮತ್ತು ಉಳಿದ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಉಷ್ಣತಾ ಸಂವಹಕದಲ್ಲಿ ಮತ್ತೊಮ್ಮೆ ಚಲಿಸುತ್ತದೆ. ನಂತರ ತಣ್ಣೀರನ್ನು ಶವರ್‌ಹೆಡ್‌ಗೆ ಬರುವ ಮುನ್ನವೇ ಮಿಶ್ರಣ ಮಾಡುತ್ತದೆ. ಇದನ್ನು ಅಭಿವೃದ್ಧಿ ಪಡಿಸಲು ತಗುಲಿದ ವೆಚ್ಚ 1.75 ಮಿಲಿಯನ್ ಡಾಲರ್.

ನೂರ್ ಈಸ್ಟರ್
ವೈಮಾನಿಕ ಎಂಜಿನ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜೇಮ್ಸ್ ಓ ನೈಲ್ ಅವರು 'ನೂರ್ ಈಸ್ಟರ್‌' ಎಂಬ ನೂತನ ತಂತ್ರಜ್ಞಾನ ಹೊಂದಿದ ಎಂಜಿನ್ ತಯಾರಿಸಿದ್ದು ಅದು 2000 ಆರ್‌ಎಂಪಿ ವೇಗದಲ್ಲಿ ದಕ್ಷತೆಯಿಂದ ಓಡುತ್ತದೆಯಂತೆ. ಈ ತಂತ್ರಜ್ಞಾನ ಸಣ್ಣ (2000 ಪೌಂಡ್‌ಗಳವರೆಗೆ) ಮತ್ತು ಚಾಲಕ ರಹಿತ ಹೆಲಿಕಾಪ್ಟರ್‌ಗಳಿಗಂತೂ ತುಂಬಾ ಉಪಯುಕ್ತ. ಇದಕ್ಕಾಗಿ ಆತ ಖರ್ಚು ಮಾಡಿದ್ದು 10 ಸಾವಿರ ಡಾಲರ್.

ಟೌರ್ನಿ ಕ್ವಿಟ್
ಅಕಸ್ಮಾತ್ ದೇಹಕ್ಕೆ ಸಣ್ಣ ಗಾಯವಾಗಿ ರಕ್ತಸ್ರಾವವಾದರೆ ನಾವೆಲ್ಲ ಬ್ಯಾಂಡೇಜ್ ಮಾಡಿಕೊಂಡು ಬಚಾವಾಗುತ್ತೇವೆ. ಹೆಚ್ಚಿನ ರಕ್ತಸ್ರಾವವಾದರೆ ಆಸ್ಪತ್ರೆಗೆ ಓಡುತ್ತೇವೆ. ಆದರೆ ಯುದ್ಧಭೂಮಿಯಲ್ಲಿರುವ ಸೈನಿಕರ ಪಾಡೇನು ಹೇಳಿ? ಅದಕ್ಕೆಂದೇ ಜಾನ್‌ಕ್ರೌಶ್ ಒರ್ನ್, ರಿಚರ್ಡ್ ಶವಾಟ್ಜ್ 'ಟೌರ್ನಿಕ್ವಿಟ್‌' ಎಂಬ ಸಾಧನವನ್ನು ಆವಿಷ್ಕರಿಸಿದ್ದಾರೆ. ಇದನ್ನು ದೇಹಕ್ಕೆ ಅಳವಡಿಸಿದ ನಂತರ ವಿಂಡ್‌ಗ್ಲಾಸ್ ಟ್ವಿಸ್ಟ್ ಮಾಡುವ ಮುಖಾಂತರ ಅದನ್ನು ಸಡಿಲವಾಗದಂತೆ ಭದ್ರಪಡಿಸಲಾಗಿರುತ್ತದೆ. ಒಂದು ಹ್ಯಾಂಡ್ ಪಂಪ್ ಮೂಲಕ ರೋಗಿಯ ಅಯೋರ್ಟ(ಹೃದಯದ- ಮತ್ತು ದೇಹದ ಅತಿದೊಡ್ಡ ರಕ್ತನಾಳ) ಬೆನ್ನು ಮೂಳೆಗೆ ವಿರುದ್ಧವಾಗಿ ಒತ್ತಲಾಗುತ್ತದೆ. ಆಗ ರಕ್ತವುದೇಹದ ಕೆಳಭಾಗಕ್ಕೆ ಹರಿಯುವುದು ನಿಲ್ಲುತ್ತದೆ. ಈ ತೆರನಾಗಿ ರಕ್ತಸ್ರಾವವನ್ನು ತಕ್ಷಣ ನಿಲ್ಲಿಸಲು ಸಾಧ್ಯವಿದೆ ಅಂತಾರೆ ಅನ್ವೇಷಕರು. ಇದರ ಯಶಸ್ಸನ್ನು ಮನಗಂಡ ಅಮೆರಿಕಾ, ಫ್ರೆಂಚ್, ಜರ್ಮನ್ ದೇಶದ ರಕ್ಷಣಾ ಇಲಾಖೆಗಳು ಈ ತಂತ್ರಜ್ಞಾನದ ಆಸಕ್ತಿ ತೋರಿವೆ.

ಮೊಡ್ಯುಲರ್ ಕಾಸ್ಟ್
ಕೈಗೆ ಒಂಚೂರು ದೊಡ್ಡ ಗಾಯ ಆಯಿತೆಂದರೆ ನಾವು ಇಡೀ ಕೈಯನ್ನೇ ದೊಡ್ಡ ಕೊಳವೆಯಂಥ ಬ್ಯಾಂಡೇಜ್ ಒಳಗೆ ತೂರಿಸಿ ಅದಕ್ಕೊಂದು ಬಿಳಿಪಟ್ಟಿ ಕಟ್ಟಿಕೊಂಡು ಕುತ್ತಿಗೆಗೆ ನೇತು ಹಾಕಿಕೊಳ್ಳುವುದು ಅನಿವಾರ್ಯ. ಆದರೆಈಗ ಕಾಲ ಬದಲಾಗಿದೆ. ವರ್ಜೀನಿಯಾ ವಿಶ್ವವಿದ್ಯಾಲಯದ ಡೇನಿಯಲ್ ಅಮಂಟೇ, ಕೆಲ್ಲಿ ಅಂಡರ್‌ಸನ್, ಅಮಾಂದಾ ಹಾರ್ಟೋನ್, ಕ್ಲಾರಾ ಟ್ರಾನ್ ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಅದೇ ಮಾಡ್ಯುಲರ್ ಕಾಸ್ಟ್. ನಿಮ್ಮ ಕೈಯನ್ನು ಸುತ್ತುವರೆಯುವ ಇದನ್ನು 6 ಸುಲಭ ಭಾಗಗಳನ್ನಾಗಿ ಮಾಡಲಾಗಿದ್ದು ಕಡಿಮೆ ದರ್ಜೆಯ ಬಗ್ಗಿಸುವಂಥ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಇದರಿಂದ ಗಾಯದ ಸಮಯದಲ್ಲಿಯೂ ರೋಗಿ ಕೈಯನ್ನು ಆರಾಮವಾಗಿ ಆಡಿಸಬಹುದು. ಇದನ್ನು ಅಭಿವೃದ್ಧಿಪಡಿಸಲು ತಗುಲಿದ ವೆಚ್ಚ 10 ಸಾವಿರ ಡಾಲರ್.

ಓವರ್ 7 ಸಿಸ್ಟಂ
ಗ್ಯಾಸ್ ಬಳಕೆಯನ್ನು ಕಡಿತಗೊಳಿಸಲು ಹಾಗೂ ಅನುಪಯುಕ್ತ ಉಷ್ಣತೆಯನ್ನು ಉಪಯೋಗಿಸಲು ಕಡಿಮೆ ಮಾಲಿನ್ಯದ ಇಂಜಿನ್‌ವೊಂದನ್ನು ಜರ್ಮನಿಯ ಪ್ರಾಂಕ್‌ವಿಲ್ ಕಂಡುಹಿಡಿದಿದ್ದಾನೆ. ಈ ಇಂಜಿನ್ ಬೈಪಾಸ್ ಹೀಟ್ ಎಕ್ಸ್‌ಚೇಂಜರ್ ಮುಖಾಂತರ ಕಾರ್ಯನಿರ್ವಹಿಸುತ್ತದೆ. ಆಯಿಲ್ ಯಾವಾಗ 300 ಡಿಗ್ರಿಗಿಂತ ಹೆಚ್ಚು ಬಿಸಿಯಾಗುತ್ತದೋ ಆಗ ಹೀಟ್ ಎಕ್ಸ್‌ಚೇಂಜರ್‌ನಲ್ಲಿನ ಪ್ಲಾಪ್ ವಾಲ್ಟ್ ಅದನ್ನು ಎಕ್ಸಾಸ್ಟ್ ಗ್ಯಾಸ್ ಬೈಪಾಲ್‌ಗೆ ಪ್ರವಹಿಸುವಂತೆ ಮಾಡುತ್ತದೆ. ಈ ತಂತ್ರಜ್ಞಾನ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡುವುದಲ್ಲದೇ ಗ್ಯಾಸ್ ಬಳಕೆಯನ್ನು ಕಡಿಮೆಗೊಳಿಸುತ್ತದೆ. ಇದನ್ನು ಅಭಿವೃದ್ಧಿಪಡಿಸಲು ತೆಗೆದುಕೊಂಡ ವೆಚ್ಚ 2 ಲಕ್ಷ ಡಾಲರ್.

-ನಳಿನಾ ಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com