ಮ್ಯಾಲ್ವೇರ್
ಮ್ಯಾಲ್ವೇರ್ಗಳನ್ನು ಕಂಪ್ಯೂಟರ್ಗಳಿಗೆ ಹಾನಿ ಮಾಡಲೆಂದೇ ಸೃಷ್ಟಿಸಲಾಗಿರುತ್ತದೆ. ಇಂಥ ಕೇಡು ಬುದ್ಧಿಯ ಸಾಫ್ಟ್ವೇರ್ಗಳು ಇಂಟರ್ನೆಟ್ ಬ್ಯಾಂಡ್ವಿಡ್ತ್ಗಳಲ್ಲಿ ಸಮಸ್ಯೆ ಸೃಷ್ಟಿಸುವ ಮೂಲಕ ಡೌನ್ಲೋಡ್ ವೇಗವನ್ನು ತಗ್ಗಿಸುತ್ತವೆ. ಇದರಿಂದ ಪರಿಹಾರ ಬೇಕಾದರೆ ಆ್ಯಂಟಿ ಮ್ಯಾಲ್ವೇರ್ ಪ್ರೋಗ್ರಾಮ್ಗಳ ಸಹಾಯದಿಂದ ಪಿಸಿ ಅಥವಾ ಲ್ಯಾಪ್ಟಾಪ್ಗಳಲ್ಲಿ ಬಂದು ಕೂತಿರುವ ಮ್ಯಾಲ್ವೇರ್ಗಳನ್ನು ಡಿಲೀಟ್ ಮಾಡಿ. ಮ್ಯಾಲ್ವೇರ್ಗಳನ್ನು ತೆಗೆದುಹಾಕುವ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಇವುಗಳನ್ನು ಕೊಳ್ಳುವ ಮುನ್ನ ಅವುಗಳ ಕುರಿತ ವಿಮರ್ಶೆಗಳಿಗೆ ಗಮನ ಹರಿಸುವುದು ಒಳಿತು. ಇಂಥ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್ ಅನ್ನು ನಿಯಮಿತವಾಗಿ ಸ್ಕ್ಯಾನ್ ಮಾಡುತ್ತಿರಿ.
ವಿಶ್ವಾಸಾರ್ಹ ಆ್ಯಂಟಿವೈರಸ್
ವೈರಸ್ಗಳು ಡೌನ್ಲೋಡ್ನ ವೇಗವನ್ನು ಕುಂಠಿತಗೊಳಿಸುವುದಷ್ಟೇ ಅಲ್ಲದೆ ಅಂತರ್ಜಾಲ ಸಂಪರ್ಕದ ಸಾಮರ್ಥ್ಯವನ್ನೂ ಕುಂಠಿತಗೊಳಿಸುತ್ತದೆ. ವೈರಸ್ಗಳು ಬ್ಯಾಂಡ್ವಿಡ್ತ್ಗಳನ್ನು ಮಾರುವೇಷದಲ್ಲಿ ವಶಕ್ಕೆ ತೆಗೆದುಕೊಂಡು ಹೊರಹೋಗುವ ಡಾಟಾಗಳ ಜತೆ ಸಂಪರ್ಕ ಸಾಧಿಸುತ್ತವೆ. ಇದರಿಂದ ಡೌನ್ಲೋಡ್ ಕಾರ್ಯ ನಿಧಾನವಾಗುವುದರ ಜತೆಗೆ ಸಾಕಷ್ಟು ಕಿರಿಕಿರಿಯನ್ನೂ ನೀಡುತ್ತದೆ. ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಮಾರುಕಟ್ಟೆಯಲ್ಲಿ ದೊರಕುವ ವಿಶ್ವಾಸಾರ್ಹ ಆ್ಯಂಟಿವೈರಸ್ಗಳನ್ನು ಬಳಕೆ ಮಾಡಿ. ಈ ಮೂಲಕ ಸಲೀಸಾದ ಡೌನ್ಲೋಡ್ ಅನುಭವ ಪಡೆಯಬಹುದು.
ಸೇವಾದಾರನ್ನು ಸಂಪರ್ಕಿಸಿ
ಔಟ್ಡೇಟೆಡ್ ಇಂಟರ್ನೆಟ್ ಸೇವೆಯನ್ನು ಬಳಸುತ್ತಿದ್ದೀರಾ? ಈ ಸಂಪರ್ಕಕ್ಕಾಗಿ ಕೊಡುವ ಹಣದಲ್ಲೇ ಅಪ್ಗ್ರೇಡೆಡ್ ಸಂಪರ್ಕ ಸಿಗುತ್ತಿದೆಯೇ? ಕೆಲವೊಮ್ಮೆ ಮಾಹಿತಿ ಕೊರತೆಯಿಂದ ಈ ರೀತಿ ಆಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಕೂಡಲೇ ನಿಮ್ಮ ಸೇವಾದಾರರಿಗೆ ಕರೆ ಮಾಡಿ. ನೀವೀಗ ಪಾವತಿಸುತ್ತಿರುವ ದರದಲ್ಲೇ ಅಪ್ಗ್ರೇಡೆಡ್ ಸೇವೆ ಲಭ್ಯವಿದೆಯೇ ಎಂದು ಪರಿಶೀಲಿಸಿ. ಇದ್ದರೆ ತಕ್ಷಣ ಹಳೆಯದರಿಂದ ಹೊಸತಕ್ಕೆ ಬದಲಾವಣೆ ಮಾಡಿಕೊಳ್ಳಿ.