

ಇದು ಫೋನಿಗಿಂತ ಕೊಂಚ ದೊಡ್ಡದು. ಟ್ಯಾಬ್ಲೆಟ್‌ಗಿಂತ ಚಿಕ್ಕದು. ಫೋನಾ? ಅಂದರೆ ಫೋನಲ್ಲ. ಟ್ಯಾಬ್ಲೆಟ್ಟಾ? ಎಂದರೆ ಅದೂ ಅಲ್ಲ. ಇದು ಗ್ಯಾಜೆಟ್ ಲೋಕದ ಹೊಸ ಕೂಸು ಫ್ಯಾಬ್ಲೆಟ್!
ವೀಡಿಯೋ, ಫೋಟೊ ನೋಡಲು, ಆಟವಾಡಲು ಮೊಬೈಲ್ ಸ್ಕ್ರೀನ್ ಚಿಕ್ಕದಾಯಿತು. ರೆಸಲ್ಯೂಶನ್ ಕೂಡ ಚೆನ್ನಾಗಿರೊಲ್ಲ. ಇದಕ್ಕೆಲ್ಲ ಟ್ಯಾಬ್ಲೆಟ್ಟೇ ಒಳ್ಳೇದು. ಆದರೆ ಟ್ಯಾಬ್ಲೆಟ್ ದೊಡ್ಡದು. ಮಾತನಾಡಲು ಅನನುಕೂಲ. ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಹೀಗೆ ಅತ್ತ ಅಕ್ಕಿ ಮೇಲೂ ಆಸೆ, ನೆಂಟರ ಮೇಲೂ ಪ್ರೀತಿ ಎಂಬವರಿಗಾಗಿಯೇ ಫ್ಯಾಬ್ಲೆಟ್ ಹುಟ್ಟಿಕೊಂಡಿದೆ.
ಇದು ಮೊಬೈಲ್ ಮಾಡುವ ಕೆಲಸಗಳನ್ನೂ ಮಾಡುತ್ತದೆ. ಜತೆಗೆ 5-6 ಇಂಚು ಸ್ಕೀನ್. ಗಾತ್ರದ ಕಾರಣದಿಂದ ಮಾತನಾಡಲು ಅನನುಕೂಲಗಳಿಲ್ಲ. ಸ್ಕ್ರೀನ್ ಸಾಕಷ್ಟು ದೊಡ್ಡದಿರುವುದರಿಂದ ವೀಡಿಯೋ, ಫೋಟೊ ಹಾಗೂ ಗೇಮ್‌ಗಳಿಗೆ ಸಹಕಾರಿ.
ಟ್ಯಾಬ್ಲೆಟ್‌ಗಳ ಕಾಲ ಆರಂಭವಾದಾಗಲೇ ಡೆಲ್ ಕಂಪನಿ 'ಸ್ಟ್ರೀಕ್' ಎಂಬ 5 ಇಂಚು ಸ್ಕೀನ್‌ನ ಮೊಬೈಲ್ ಬಿಡುಗಡೆ ಮಾಡಿತ್ತು. ಆಗಿನ್ನೂ ಫ್ಯಾಬ್ಲೆಟ್‌ಗಳ ಜಮಾನಾ ಆರಂಭವಾಗಿರಲಿಲ್ಲ. ಆದ್ದರಿಂದ ಅದು ಗ್ರಾಹಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ. ಹೀಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 2 ಮೊದಲ ಜನಪ್ರಿಯ ಫ್ಯಾಬ್ಲೆಟ್ ಎನಿಸಿಕೊಳ್ಳುತ್ತದೆ. ಮಾರುಕಟ್ಟೆಗೆ ಇದಕ್ಕಿಂತ ಮೊದಲು ಫ್ಯಾಬ್ಲೆಟ್‌ಗಳು ಕಾಲಿರಿಸಿದ್ದರೂ ಅವು ಜನಪ್ರಿಯವಾಗಿರಲಿಲ್ಲ ಮತ್ತು ಫ್ಯಾಬ್ಲೆಟ್ ಎಂಬ ಹೆಸರನ್ನೂ ಹೊಂದಿರಲಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 2 ಯಾವಾಗ ಜನಪ್ರಿಯವಾಯಿತೋ ಮಾರುಕಟ್ಟೆಯಲ್ಲಿ ಒಂದರ ಹಿಂದೊಂದು ಫ್ಯಾಬ್ಲೆಟ್‌ಗಳು ದಾಳಿ ಇಡಲಾರಂಭಿಸಿವೆ. ಮೈಕ್ರೋಮ್ಯಾಕ್ಸ್ ಕಂಪನಿ ಫ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಭರ್ಜರಿ ಪೈಪೋಟಿ ನೀಡಲು ತೋಳುಮಡಚಿ ನಿಂತಿದೆ.
ಮೈಕ್ರೋಮ್ಯಾಕ್ಸ್ ಸಂಸ್ಥೆ ಕ್ಯಾನ್ವಾಸ್ 2 (ಎ110) ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಇದು ಸ್ಯಾಮ್‌ಸಂಗ್‌ನ ನೋಟ್ 2ಗೆ ಯಾವ ರೀತಿಯಲ್ಲೂ ಸರಿಸಾಟಿಯಲ್ಲದಿದ್ದರೂ, 10 ಸಾವಿರದಲ್ಲಿ ಡ್ಯುಯಲ್ ಸಿಮ್ ಫ್ಯಾಬ್ಲೆಟ್ ದೊರಕಿಸುವ ಮೂಲಕ ಸಾಮಾನ್ಯ ಗ್ರಾಹಕರನ್ನು ಆಕರ್ಷಿಸಿದೆ.
ಇದಕ್ಕೆ ಪ್ರತಿಯಾಗಿ ಸ್ಯಾಮ್‌ಸಂಗ್ ಸಂಸ್ಥೆ ಸದ್ಯದಲ್ಲಿಯೇ ಗ್ಯಾಲಕ್ಸಿ ಗ್ರ್ಯಾಂಡ್ ಡ್ಯುಯೋಸ್ ಬಿಡುಗಡೆ ಮಾಡಲಿದೆ. ಇದು 5 ಇಂಚು ಸ್ಕ್ರೀನ್ ಹೊಂದಿರಲಿದ್ದು, ಡ್ಯುಯಲ್ ಸಿಮ್ ಸೌಲಭ್ಯವೂ ಇದೆ. ಇದಕ್ಕೆ 21,500 ದರ ಇರಿಸಲಾಗಿದೆ. ಗ್ಯಾಲಕ್ಸಿ ಗ್ರ್ಯಾಂಡ್‌ಗೆ ಪೈಪೋಟಿ ನೀಡಲು ಮೈಕ್ರೋಮ್ಯಾಕ್ಸ್ ಸಂಸ್ಥೆ 15,000ಕ್ಕಿಂತ ಕಡಿಮೆ ದರಕ್ಕೆ ಕ್ಯಾನ್ವಾಸ್ ಎಚ್‌ಡಿ ಎಂಬ ಫ್ಯಾಬ್ಲೆಟ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇವೆರಡೂ ಫ್ಯಾಬ್ಲೆಟ್‌ಗಳು ಫೆಬ್ರವರಿ ಮೊದಲ ವಾರದಲ್ಲಿ ಮಾರುಕಟ್ಟೆಗೆ ಪದಾರ್ಪಣೆ ಮಾಡಲಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಡ್ಯುಯೋಸ್ ಫ್ಯಾಬ್ಲೆಟ್ಟನ್ನು ಈಗಲೇ ಬುಕ್ ಮಾಡಲು ಫ್ಲಿಪ್‌ಕಾರ್ಟ್‌ನಲ್ಲಿ ಅವಕಾಶವಿದೆ.
ಇವಲ್ಲದೇ ಮಾರುಕಟ್ಟೆಯಲ್ಲಿ ಹಲವು ಫ್ಯಾಬ್ಲೆಟ್‌ಗಳು ಲಭ್ಯವಿದೆ. ಆದರೆ ಅವೆಲ್ಲ ಅಷ್ಟೇನೂ ಪ್ರಸಿದ್ಧವಲ್ಲದ ಮತ್ತು ಗ್ರಾಹಕರ ನಂಬಿಕೆ ಗಳಿಸದ ಕಂಪನಿಗಳದ್ದು. ಆದರೂ ಒಂದು ಕೈ ನೋಡೋಣ ಎಂಬ ಆಸೆಯಿದ್ದರೆ ಟ್ರೈ ಮಾಡಬಹುದು.
ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 2
5 ಇಂಚು ಟಚ್‌ಸ್ಕ್ರೀನ್
1 ಗಿಗಾಹರ್ಟ್ಸ್ ಡ್ಯುಯಲ್‌ಕೋರ್ ಪ್ರೊಸೆಸರ್
512 ಎಂಬಿ ರ್ಯಾಮ್
854 x800 ರೆಸಲ್ಯೂಷನ್ ಸ್ಕ್ರೀನ್
ಆ್ಯಂಡ್ರಾಯ್ಡ್ ಐಸ್‌ಕ್ರೀಂಸ್ಯಾಂಡ್‌ವಿಚ್ ಆಪರೇಟಿಂಗ್ ಸಿಸ್ಟಂ
8 ಮೆಗಾಪಿಕ್ಸೆಲ್ ಮತ್ತು 0.3 ಮೆಗಾಪಿಕ್ಸೆಲ್ ಕ್ಯಾಮರಾ
ದರ- 10,000
ಲಾವಾ ಐರಿಸ್
5 ಇಂಚು ಟಚ್‌ಸ್ಕ್ರೀನ್, 512 ಎಂಬಿ ರ್ಯಾಮ್
1 WVಹರ್ಟ್ಸ್ ಡ್ಯುಯಲ್‌ಕೋರ್ ಪ್ರೊಸೆಸರ್
800 x 480 ರೆಸಲ್ಯೂಷನ್ ಸ್ಕ್ರೀನ್
ಆ್ಯಂಡ್ರಾಯ್ಡ್ ಐಸ್‌ಕ್ರೀಂಸ್ಯಾಂಡ್‌ವಿಚ್ ಆಪರೇಟಿಂಗ್ ಸಿಸ್ಟಂ
5 ಮೆಗಾಪಿಕ್ಸೆಲ್ ಆಟೋಫೋಕಸ್ ಮತ್ತು 0.3 ಮೆಗಾಪಿಕ್ಸೆಲ್ ಕ್ಯಾಮರಾ, ದರ 9,999
ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್
5 ಇಂಚಿನ ಟಚ್‌ಸ್ಕ್ರೀನ್
1.2 WVಹರ್ಟ್ಸ್ ಡ್ಯುಯಲ್‌ಕೋರ್ ಪ್ರೊಸೆಸರ್
1 ಜಿಬಿ ರ್ಯಾಮ್
800 x 480 ರೆಸಲ್ಯೂಶನ್ ಸ್ಕ್ರೀನ್
ಆ್ಯಂಡ್ರಾಯ್ಡ್ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ
8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಎಚ್‌ಡಿ ಕ್ಯಾಮೆರಾ
ದರ 21,5000
ನೀವು ಫೋನ್ ಕಿವಿ ಬಳಿ ಹಿಡಿದರೆ ಸಾಕು, ನೇರವಾಗಿ ಕರೆ ಹೋಗುತ್ತದೆ. ಫ್ಯಾಬ್ಲೆಟ್ ಕೈಗೆತ್ತಿಕೊಳ್ಳುತ್ತಿದ್ದಂತೆ ಮಿಸ್‌ಕಾಲ್ ಅಥವಾ ಎಸ್‌ಎಂಎಸ್‌ಗಳನ್ನು ತೋರಿಸುವ 'ಸ್ಮಾರ್ಟ್ ಅಲರ್ಟ್' ವ್ಯವಸ್ಥೆಯಿದೆ. ನಿಮ್ಮ ಮುಖ ಮತ್ತು ಧ್ವನಿ ಆಧಾರಿತವಾಗಿ ಫೋನ್ ಅನ್‌ಲಾಕ್ ಮಾಡುವ ಸೌಲಭ್ಯವಿದೆ.
ಕಾರ್ಬನ್ ಎ30
5.9 ಇಂಚು ಟಚ್‌ಸ್ಕ್ರೀನ್
1 WVಹರ್ಟ್ಸ್ ಡ್ಯುಯಲ್‌ಕೋರ್ ಪ್ರೊಸೆಸರ್
512 ಎಂಬಿ ರ್ಯಾಮ್
480 x 800 ರೆಸಲ್ಯೂಶನ್ ಸ್ಕ್ರೀನ್
ಆ್ಯಂಡ್ರಾಯ್ಡ್ ಐಸ್‌ಕ್ರೀಂಸ್ಯಾಂಡ್‌ವಿಚ್ ಆಪರೇಟಿಂಗ್ ಸಿಸ್ಟಂ
8 ಮೆಗಾಪಿಕ್ಸೆಲ್ ಮತ್ತು 1.3 ಮೆಗಾಪಿಕ್ಸೆಲ್ ಕ್ಯಾಮರಾ
ದರ 11,500
ಇದರ ಸ್ಕ್ರೀನ್ ಸ್ಯಾಮ್‌ಸಂಗ್ ನೋಟ್ 2ಗಿಂತ ದೊಡ್ಡದು. ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯಂತ ದೊಡ್ಡ ಸ್ಕ್ರೀನ್ ಫ್ಯಾಬ್ಲೆಟ್.
ಮೈಕ್ರೋಮ್ಯಾಕ್ಸ್
ಕ್ಯಾನ್ವಾಸ್ ಎಚ್‌ಡಿ
5 ಇಂಚಿನ ಟಚ್‌ಸ್ಕ್ರೀನ್
1.2 WVಹರ್ಟ್ಸ್ ಕ್ವಾಡ್‌ಕೋರ್ ಪ್ರೊಸೆಸರ್
1 ಜಿಬಿ ರ್ಯಾಮ್
1280 x 720 ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್
ಆ್ಯಂಡ್ರಾಯ್ಡ್ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ
8 ಮೆಗಾಪಿಕ್ಸೆಲ್ ಮತ್ತು 0.3 ಮೆಗಾಪಿಕ್ಸೆಲ್ ಕ್ಯಾಮರಾ
ದರ 15,000
ಸ್ಕ್ರೀನ್ ರೆಸಲ್ಯೂಷನ್ ಉತ್ತಮವಾಗಿದೆ. ಗ್ಯಾಲಕ್ಸಿ ಗ್ರ್ಯಾಂಡ್‌ಗಿಂತ ತುಂಬ ಕಡಿಮೆ ದರ. ಉತ್ತಮವಾದ ಪ್ರೊಸೆಸರ್. ಇದರಲ್ಲಿರುವ ಪ್ರೊಸೆಸರ್ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಗ್ರ್ಯಾಂಡ್‌ಗೆ ಸಖತ್ ಪೈಪೋಟಿ ನೀಡಬಲ್ಲದು. ನೋಡಲೂ ಸುಂದರವಾಗಿದೆ.
ಬರಲಿವೆ, ನಿರೀಕ್ಷಿಸಿ
ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಲೆನೊವೊ ಸೇರಿದಂತೆ ಮೊಬೈಲ್ ಕ್ಷೇತ್ರದ ಪ್ರಮುಖ ಕಂಪನಿಗಳು ಫ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತುದಿಗಾಲಲ್ಲಿ ನಿಂತಿವೆ. ಲೆನೊವೊ ಸಂಸ್ಥೆ ಇತ್ತೀಚೆಗೆ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮುಂದಿನ ಬಿಡುಗಡೆ ಬಹುಶಃ ಫ್ಯಾಬ್ಲೆಟ್. ಲೆನೊವೊ ಕೆ900 ಫ್ಯಾಬ್ಲೆಟ್ ಅಟೋಮ್ ಡ್ಯುಯಲ್‌ಕೋರ್ ಪ್ರೊಸೆಸರ್ ಹೊಂದಿದ್ದು, 13 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದೆ. ಹುವೈ ಸಂಸ್ಥೆ ಕೂಡ ಫ್ಯಾಬ್ಲೆಟ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. 5 ಇಂಚು ಸ್ಕ್ರೀನ್, 13 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ 3000ಎಂಎಎಚ್ ಭರ್ಜರಿ ಬ್ಯಾಟರಿ ಹೊಂದಿದೆ. ಝೆಡ್‌ಟಿಇ, ಸೋನಿ ಕಂಪನಿಗಳು ಕೂಡ ಫ್ಯಾಬ್ಲೆಟ್‌ಗಳನ್ನು ಪ್ರದರ್ಶಿಸಿವೆ. ಬಿಡುಗಡೆ ದಿನಾಂಕ ಇನ್ನೂ ಗೊತ್ತಾಗಿಲ್ಲ. ಆದರೆ 2013ರಲ್ಲಿ ಮೊಬೈಲ್ ಮಾರುಕಟ್ಟೆಯ ಸಿಂಹಪಾಲನ್ನು ಫ್ಯಾಬ್ಲೆಟ್‌ಗಳೇ ಪಡೆಯುವ ಸ್ಪಷ್ಟ ಮುನ್ಸೂಚನೆ ದೊರೆಯುತ್ತಿದೆ.
- ವಕ್ರದಂತ