ಭವಿಷ್ಯದ ಜಾಹೀರಾತು ಪ್ರಪಂಚವನ್ನು ಅಂತರ್ಜಾಲ ಸೌಲಭ್ಯವಿರುವ ಮೊಬೈಲ್ಗಳು ಆಳಲಿವೆ.
2013ರ ಮೊಬೈಲ್ ಜಾಹೀರಾತು ಆದಾಯ 60 ಸಾವಿರ ಕೋಟಿ ಗಡಿ ದಾಟುವ ಸಾಧ್ಯತೆಯಿದೆ. ಕಳೆದ ವರ್ಷಕ್ಕಿಂತ ಶೇ.19ರಷ್ಟು ಜಾಹೀರಾತು ಆದಾಯ ಹೆಚ್ಚುವ ಸಾಧ್ಯತೆಯಿದೆ. 2016ರ ವೇಳೆಗೆ ಇದು 1.50 ಲಕ್ಷ ಕೋಟಿ ದಾಟಲಿದೆ ಎಂದು ಅಮೆರಿಕದ ಜಾಹೀರಾತು ಸಂಸ್ಥೆಗಳು ಭವಿಷ್ಯ ನುಡಿದಿವೆ.
ಆ್ಯಂಡ್ರಾಯ್ಡ್, ಆ್ಯಪಲ್, ವಿಂಡೋಸ್ ಅಥವಾ ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್ಗಳ ಯಾವುದೇ ಅಪ್ಲಿಕೇಷನ್ ಪುಟ ತೆರೆದರೆ ಸಾಮಾನ್ಯವಾಗಿ ಜಾಹೀರಾತು ಪುಟಗಳು ಕೂಡ ತೆರೆದುಕೊಳ್ಳುತ್ತವೆ. ಇಂತಹ ಪ್ರತಿಯೊಂದು ಹಿಟ್ಗಳು ಕೂಡ ಮೊಬೈಲ್ ಕಂಪನಿಗಳಿಗೆ ಆದಾಯ ನೀಡುತ್ತವೆ.
ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ಗಳ ಬಳಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮತ್ತೊಂದೆಡೆ ಸ್ಮಾರ್ಟ್ಫೋನ್ಗಳ ಬೆಲೆಯೂ ಸಾಮಾನ್ಯ ಜನಕ್ಕೆ ಎಟಕುವಂತಾಗುತ್ತಿದೆ. ಮೊಬೈಲ್ಗಳಲ್ಲಿನ ಅಪ್ಲಿಕೇಷನ್ಗಳು ಯುವಕರ ನಿದ್ದೆಗೆಡಿಸುತ್ತಿವೆ. ಇದೇ ಕಾರಣದಿಂದ ದೊಡ್ಡ ಸಂಖ್ಯೆಯ ಜಾಹೀರಾತುದಾರರು ಮೊಬೈಲ್ನತ್ತ ವಾಲುತ್ತಿದ್ದಾರೆ.