ಅಂತರ್ಜಾಲ ಮಾರಾಟ ಮಳಿಗೆಗಳಲ್ಲಿ ಹೆಸರುವಾಸಿಯಾಗಿರುವ ಮತ್ತು ತನ್ನ ಸೇವೆಗೆ ಪ್ರಸಿದ್ಧಿ ಪಡೆದಿರುವ ಫ್ಲಿಪ್ಕಾರ್ಟ್ ಸಂಸ್ಥೆ, ಫ್ಲೈಟ್ ಎಂಬ ಡಿಜಿಟಲ್ ಸ್ಟೋರ್ ಆರಂಭಿಸಿತ್ತು. ಇಲ್ಲಿ ಸಿನಿಮಾ ಹಾಡುಗಳನ್ನು ಅಥವಾ ನಿಮಿಗಿಷ್ಟವಾದ ಒಂದೇ ಹಾಡನ್ನು ಕೂಡ ಹಣ ಕಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿತ್ತು. ಕಂಪನಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಇದನ್ನು ಆರಂಭಿಸಿತ್ತಾದರೂ, ಫ್ಲೈಟ್ ಯಾಕೋ ಹಾರಲೇ ಇಲ್ಲ!
ಹಾಡುಗಳನ್ನು ಡೌನ್ಲೋಡ್ ಮಾಡಲು ಅಂತರ್ಜಾಲದಲ್ಲಿ ಸಾಕಷ್ಟು ತಾಣಗಳಿವೆ. ಅವುಗಳಿಂದ ಪುಕ್ಕಟೆಯಾಗಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿರುವಾಗ ದುಡ್ಡುಕೊಟ್ಟು ಡೌನ್ಲೋಡ್ ಮಾಡುವವರಾರು? ಅಲ್ಲದೇ ಭಾರತದಲ್ಲಿನ್ನೂ ಡಿಜಿಟಲ್ ಸ್ಟೋರ್ಗಳಲ್ಲಿ ಖರೀದಿ ಮಾಡುವಷ್ಟು ಜನ ಮುಂದುವರಿದಿಲ್ಲ. ಅಂಥ ಕಲ್ಪನೆಗಳೇ ನಮ್ಮವರಿಗೆ ಹೊಸದು. ಹೀಗಾಗಿ ಫ್ಲಿಪ್ಕಾರ್ಟ್ನ ಫ್ಲೈಟ್ ಹಾರಲೇ ಇಲ್ಲ!
ಫ್ಲೈಟ್ ಮ್ಯೂಸಿಕ್ ಸ್ಟೋರ್ನಲ್ಲಿ ಹಾಡುಗಳನ್ನು ಖರೀದಿ ಮಾಡಿದವರು ಆ.18ರೊಳಗೆ ಆ ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ.