ರಿಲಯನ್ಸ್ ಐಫೋನ್

ರಿಲಯನ್ಸ್ ಐಫೋನ್
Updated on: 

ಐಫೋನ್ ಪ್ರಿಯರಿಗೆ ಇದು ಸಂತಸದ ಸುದ್ದಿ. ಮೊಬೈಲ್ ನೆಟ್‌ವರ್ಕ್ ಕಂಪನಿಗಳ ಮೂಲಕವೇ ಐಫೋನ್ ಖರೀದಿಸುವ ಭಾಗ್ಯ ಭಾರತೀಯರಿಗೂ ಒದಗಿಬಂದಿದೆ. ಮೊದಲ ಹಂತದಲ್ಲಿ ರಿಲಯನ್ಸ್ ಕಂಪನಿಯು ಐಫೋನ್ 5ಸಿ ಮತ್ತು 5ಎಸ್ ಅನ್ನು 24 ತಿಂಗಳ ಇಎಂಐ ಮೂಲಕ ಕೊಡಲು ಮುಂದಾಗಿದೆ. ನವೆಂಬರ್ 2ರಿಂದಲೇ ಈ ಯೋಜನೆ ಜಾರಿಗೆ ಬರುತ್ತಿದ್ದು, ಮುಂಗಡ ಬುಕಿಂಗ್ ಅವಕಾಶ ನೀಡಲಾಗಿದೆ. ಐಫೋನ್ ಸಿಗೆ ರು. 2499 ಹಾಗೂ ಎಸ್‌ಗೆ ರು. 2999 ತಿಂಗಳ ಇಎಂಐ ನೀಡಲಾಗುತ್ತಿದೆ. ಯಾವುದೇ ಡೌನ್ ಪೇಮೆಂಟ್ ಮಾಡುವ ಅಗತ್ಯವಿಲ್ಲ. ಆದರೆ 2 ವರ್ಷ ನೆಟ್‌ವರ್ಕ್ ಬದಲಿಸುವ ಹಾಗಿಲ್ಲ. ಗ್ರಾಹಕರು ಕಟ್ಟುವ ಇಎಂಐನಲ್ಲಿ ನೆಟ್‌ವರ್ಕ್ ದರವು ಸೇರಿರಲಿದೆ. ಅನಿಯಮಿತ ಸ್ಥಳೀಯ, ರಾಷ್ಟ್ರೀಯ ಕರೆ ಹಾಗೂ ಸಂದೇಶಗಳು ಉಚಿತವಾಗಿ 2 ವರ್ಷದ ಮಟ್ಟಿಗೆ ದೊರೆಯುತ್ತವೆ. ಇದರ ಜತೆಗೆ 3ಜಿ ಡಾಟಾವೂ ಉಚಿತವಾಗಿ ದೊರೆಯಲಿದೆ. ಇದರರ್ಥ ಮುಂದಿನ 24 ತಿಂಗಳಿಗೆ ಗ್ರಾಹಕರು ತಾವು ಬಳಸಿದ ಕರೆ, ಸಂದೇಶ ಹಾಗೂ ಡಾಟಾ ಯುಸೇಜ್‌ಗೆ ಯಾವುದೇ ಬಿಲ್ ಸ್ವೀಕರಿಸುವುದಿಲ್ಲ. ಆದರೆ, ಈ ಯೋಜನೆಯು ಕೇವಲ 16 ಜಿಬಿ ಮಾಡೆಲ್‌ಗೆ ಲಭ್ಯವಿದೆ. ಇದಲ್ಲದೇ ಕ್ರೆಡಿಟ್ ಕಾರ್ಡ್ ಹೊಂದಿದ ಗ್ರಾಹಕರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಗ್ರಾಹಕರು ರಿಲಯನ್ಸ್ ಕಂಪನಿಯೊಂದಿಗೆ 2 ವರ್ಷದವರೆಗೆ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. ವೊಡಾಫೋನ್, ಏರ್‌ಟೆಲ್ ನೆಟ್‌ವರ್ಕ್‌ನಿಂದಲೂ ಸದ್ಯದಲ್ಲೇ ಇಂಥ ಆಫರ್‌ಗಳನ್ನು ನೀಡುವ ಸಾಧ್ಯತೆಯಿದೆ. ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ಇಂಥದ್ದೇ ಯೋಜನೆಗಳಿಂದ ಆ್ಯಪಲ್ ಯಶಸ್ವಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com