ಸ್ಮಾರ್ಟ್‌ಫೋನ್‌ಗೆ ಕಿಟ್‌ಕ್ಯಾಟ್ ತಿನ್ನಿಸಲು ರೆಡಿಯಾಗಿ!

ಸ್ಮಾರ್ಟ್‌ಫೋನ್‌ಗೆ ಕಿಟ್‌ಕ್ಯಾಟ್ ತಿನ್ನಿಸಲು ರೆಡಿಯಾಗಿ!
Updated on: 

ಬಹು ನಿರೀಕ್ಷಿತ ಕಿಟ್‌ಕ್ಯಾಟ್ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸಾಕಷ್ಟು ಹೊಸತನದೊಂದಿಗೆ ಬಿಡುಗಡೆಯಾಗಿದೆ. ಗೂಗಲ್ ನೆಕ್ಸಸ್-5 ಹೊರತಾಗಿ 22ಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ಯದಲ್ಲಿಯೇ ಅಪ್‌ಡೇಟ್ ಕೂಡ ಸಿಗಲಿದೆ. ಈಗಾಗಲೇ ನಾವು ತಿಳಿಸಿರುವ ಕೆಲ ಫೀಚರ್‌ಗಳನ್ನು ಸೇರಿಸಿ 10ಕ್ಕೂ ಅಧಿಕ ವಿಶೇಷತೆಯೊಂದಿಗೆ ಕಿಟ್‌ಕ್ಯಾಟ್ ಅನ್ನು ಸವಿಯಬಹುದು.
ಗೂಗಲ್ ಸಂಸ್ಥೆಯು ಈಗಾಗಲೇ ಹೇಳಿರುವಂತೆ ನೆಕ್ಸಸ್-5ನಲ್ಲಿರುವ ಎಲ್ಲ ಅಂಶಗಳು ಇತರೆ ಸ್ಮಾರ್ಟ್‌ಫೋನ್‌ಗೂ ಲಭ್ಯವಾಗುವುದಿಲ್ಲ. ಗೂಗಲ್ ಸಂಸ್ಥೆಯ ಮೂಲಗಳ ಪ್ರಕಾರ, ನವೆಂಬರ್ ಅಂತ್ಯದೊಳಗೆ ಸುಮಾರು 22 ದುಬಾರಿ ಸ್ಮಾರ್ಟ್‌ಫೋನ್‌ಗಳಿಗೆ ಕಿಟ್‌ಕ್ಯಾಟ್ ಅಪ್‌ಡೇಟ್ ದೊರೆಯಲಿದೆ.

ಸ್ಮಾರ್ಟ್, ಸಿಂಪಲ್, ಟ್ರ್ಯೂಲಿ ಯುವರ್ಸ್
ಈ ಮೇಲಿನ ಘೋಷ ವಾಕ್ಯದೊಂದಿಗೆ ಕಿಟ್‌ಕ್ಯಾಟ್ ಓಎಸ್ ಮಾರುಕಟ್ಟೆಗೆ ಬಂದಿದೆ. ಕಂಪನಿ ಹೇಳಿಕೊಂಡಿರುವಂತೆ ಸ್ಮಾರ್ಟ್‌ಫೋನ್ ಸ್ಮಾರ್ಟ್ ಹಾಗೂ ಸಿಂಪಲ್ ಆಗಿ ಪರಿವರ್ತನೆಯಾಗಿದೆ. ಓಎಸ್‌ನ್ನು ಮತ್ತಷ್ಟು ಸರಳವಾಗಿರಿಸಿರುವುದರಿಂದ ಯೂಸರ್ ಫ್ರೆಂಡ್ಲಿ ಎನಿಸುತ್ತದೆ.

ಪ್ರಮುಖ ವಿಶೇಷತೆಗಳು
-    ಓಕೆ ಗೂಗಲ್- ನಮ್ಮ ಸಿಂಪಲ್ ಇಂಗ್ಲಿಷ್ ಮೂಲಕ ಮಾತನಾಡಿ ಯಾವುದೇ ಅಕ್ಷರ ಟೈಪ್ ಮಾಡದೇ ದೂರವಾಣಿ ಕರೆ, ಸರ್ಚ್‌ಗಳನ್ನು ಮಾಡಬಹುದು.
-     ಮೊಬೈಲ್ ಸ್ಕ್ರೀನ್ ಲಾಕ್ ಆಗಿರುವಾಗ ಮ್ಯೂಸಿಕ್ ಪ್ಲೇ ಆಪ್ಷನ್ ಅನ್ನು ಫುಲ್ ಸ್ಕ್ರೀನ್‌ನಲ್ಲಿ ನೀಡಲಾಗಿದೆ.
-     ಗೇಮ್, ರೀಡರ್, ಮ್ಯೂಸಿಕ್, ವಿಡಿಯೋಗಳನ್ನು ಪ್ಲೇ ಮಾಡುತ್ತಿರುವಾಗ ನೇವಿಗೇಷನ್ ಬಾರ್ ಕೂಡ ಕಾಣಿಸುವುದಿಲ್ಲ. ಫುಲ್ ಸ್ಕ್ರೀನ್‌ನಲ್ಲಿ ಈ ಅಪ್ಲಿಕೇಶನ್‌ಗಳು ಚದುರಿಕೊಳ್ಳಲಿವೆ.
-     ಮೆಮೊರಿ ಆಪ್ಟಿಮೈಸೇಷನ್ ಹಾಗೂ ಟಚ್‌ಸ್ಕ್ರೀನ್ ಸಾಮರ್ಥ್ಯವನ್ನು ಹೆಚ್ಚಿಸಿರುವುದರಿಂದ ಮಲ್ಟಿಟಾಸ್ಕಿಂಗ್ ಇನ್ನಷ್ಟು ಉತ್ತಮವಾಗಿದೆ.
-     ನೀವು ಹೆಚ್ಚು ಸಂಪರ್ಕದಲ್ಲಿರುವ ನಂಬರ್‌ಗಳು ಫೋನ್ ಲಾಗ್‌ನಲ್ಲಿ ಪ್ರಾಮುಖ್ಯತೆ ಮೇಲೆ ಕಾಣಿಸಿಕೊಳ್ಳಲಿವೆ. ಈ ಹಿಂದಿನ ಫೇವರಿಟ್ ಲಿಸ್ಟ್‌ನ ಮುಂದುವರಿದ ರೂಪವಿದು.
-     ಅಪರಿಚಿತ ಸಂಖ್ಯೆಗಳಿಂದ ಬಂದ ಕರೆಗಳ ಪರಿಚಯ ತಿಳಿಯಲು ಬಳಸುತ್ತಿದ್ದ ಟ್ರ್ಯೂ ಕಾಲರ್ ಅಪ್ಲಿಕೇಷನ್‌ನಂತೆಯೇ ಇನ್ ಬಿಲ್ಟ್ ಆಗಿ ಸರ್ಚ್ ಆಪ್ಷನ್ ನೀಡಲಾಗಿದೆ. ಇದರಿಂದ ಅಪರಿಚಿತ ಕರೆಗಳ ಮಾಹಿತಿ ಸಿಗಲಿದೆ.
-     ಮೆಸೇಜಿಂಗ್‌ಗೆ ಬದಲಿಯಾಗಿ ಗೂಗಲ್ ಹ್ಯಾಂಗೌಟ್ ನೀಡಲಾಗಿದೆ. ಇನ್ನು ಮೆಸೇಜಿಂಗ್ ಹಾಗೂ ಹ್ಯಾಂಗೌಟ್ ಒಂದೇ ಆಗಿರಲಿದೆ.
- ಸ್ಮೈಲಿಗಳು ಇನ್ನು ಟೆಕ್ಸ್ಟ್ ಮೆಸೇಜ್ ಹಾಗೂ ಮೇಲಿಂಗ್‌ನಲ್ಲೂ ಲಭ್ಯವಿರಲಿದೆ.

ಅಪಡೇಟ್ ಲಭ್ಯವಿರುವ ಸ್ಮಾರ್ಟಿಗಳು

ಸ್ಯಾಮ್‌ಸಂಗ್
ಗ್ಯಾಲಕ್ಸಿ ಎಸ್ 4, ಗ್ಯಾಲಕ್ಸಿ ನೋಟ್ 3, ಗ್ಯಾಲಕ್ಸಿ ಮೆಗಾ, ಗ್ಯಾಲಕ್ಸಿ ಎಸ್ 3, ಗ್ಯಾಲಕ್ಸಿ ನೋಟ್ 2, ಗ್ಯಾಲಕ್ಸಿ ಎಸ್ 4 ಮಿನಿ, ಗ್ಯಾಲಕ್ಸಿ ಟ್ಯಾಬ್ 2 ಮತ್ತು ಟ್ಯಾಬ್ 3.
ಎಚ್‌ಟಿಸಿ
ಒನ್ ಮ್ಯಾಕ್ಸ್, ಒನ್, ಒನ್ ಎಕ್ಸ್, ಒನ್ ಎಕ್ಸ್ ಪ್ಲಸ್, ಡಿಸೈರ್ ನ್ಯೂ, ಬಟರ್‌ಫ್ಲೈ.
ಎಲ್‌ಜಿ
ಜಿ2, ನೆಕ್ಸಸ್4, ಆಪ್ಟಿಮಸ್ ಎಲ್7, ಎಲ್5, ಎಲ್3, ಆಪ್ಟಿಮಸ್ ಜಿ ಮತ್ತು ಜಿ ಪ್ರೊ, ಆಪ್ಟಿಮಸ್ ವಿಯು.
ಸೋನಿ
ಎಕ್ಸ್‌ಪೀರಿಯಾ ಝಡ್-1, ಝಡ್ ಅಲ್ಟ್ರಾ, ಝಡ್, ಝಡ್‌ಆರ್, ಝಡ್‌ಎಲ್, ಟ್ಯಾಬ್ಲೆಟ್ ಝಡ್, ಟ್ಯಾಬ್ಲೆಟ್ ಎಸ್, ಎಕ್ಸ್‌ಪೀರಿಯಾ ಎಸ್‌ಪಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com