ಜ್ಯೋನಿ ಬೆಲ್ಲ

ಅತ್ಯಂತ ಲೇಟೆಸ್ಟ್ ಮತ್ತು ಫಾಸ್ಟೆಸ್ಟ್ ಪ್ರೊಸೆಸರ್. ಇತ್ತೀಚಿನ ತಂತ್ರಜ್ಞಾನವಾದ ಲಿ- ಪಾಲಿಮರ್ ಬ್ಯಾಟರಿ...
ಜ್ಯೋನಿ ಬೆಲ್ಲ
Updated on: 

ಅತ್ಯಂತ ಲೇಟೆಸ್ಟ್ ಮತ್ತು ಫಾಸ್ಟೆಸ್ಟ್ ಪ್ರೊಸೆಸರ್. ಇತ್ತೀಚಿನ ತಂತ್ರಜ್ಞಾನವಾದ ಲಿ- ಪಾಲಿಮರ್ ಬ್ಯಾಟರಿ. ಸ್ಯಾಮ್‌ಸಂಗ್ ಎಸ್5 ಬಿಟ್ಟರೆ ಬೇರಾವ ಮೊಬೈಲ್‌ನಲ್ಲೂ ಇದರಷ್ಟು ಹೆಚ್ಚು ಪಿಕ್ಸೆಲ್ ಡೆನ್ಸಿಟಿಯ ಸ್ಕ್ರೀನ್ ಹೊಂದಿರುವ ಮೊಬೈಲ್ ಬೇರಿಲ್ಲ. ಹೊಸತನ ನೀಡುವ ಸಾಫ್ಟ್‌ವೇರ್. 16 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ. ಕ್ಯಾಮೆರಾದಲ್ಲಿ ಅಪಾರವಾದ ಆಯ್ಕೆ. ಆ್ಯಂಡ್ರಾಯ್ಡ್ ಸಾಫ್ಟ್‌ವೇರ್ ಆದರೂ ಸಾಮಾನ್ಯ ಆ್ಯಂಡ್ರಾಯ್ಡ್‌ಗಿಂತ ಭಿನ್ನ.
ಇದು ಜ್ಯೋನಿ ಇ7ನ ವೈಶಿಷ್ಟ್ಯ!
ಬ್ರಾಂಡ್‌ಗೆ ಹೆಸರಿಲ್ಲ. ಬಹುತೇಕರಿಗೆ ಗೊತ್ತೇ ಇಲ್ಲ. ಆದರೆ, ಕೈನಲ್ಲಿ ನೋಡಿದ ತಕ್ಷಣ ಯಾವುದಿದು ಮೊಬೈಲ್? ನೋಡೇ ಇಲ್ಲ ಎಂದು ಕೇಳುವಷ್ಟು ಅಂದವಾಗಿದೆ. ಅಂದವಷ್ಟೇ ಅಲ್ಲ ಮೊಬೈಲ್‌ಗೆ ಬಳಸಲಾದ ಪ್ಲಾಸ್ಟಿಕ್ ಕೂಡ ಅಷ್ಟೇ ಅತ್ಯುತ್ತಮ ಗುಣಮಟ್ಟದ್ದು. ನಿರ್ಮಾಣ ಗುಣಮಟ್ಟ ಕೂಡ ಅಷ್ಟೇ ಉತ್ತಮವಾಗಿದೆ. ಜ್ಯೋನಿ ಇ7 ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು 'ಕನ್ನಡಪ್ರಭ'ಕ್ಕೆ ಅವಕಾಶ ಲಭಿಸಿತ್ತು. ಹಾಗೆಯೇ ಜ್ಯೋನಿ ಇ7 ಮೊಬೈಲನ್ನು ಪರೀಕ್ಷೆಗೊಳಪಡಿಸಲೂ ನಮಗೆ ಅವಕಾಶ ಲಭ್ಯವಾಗಿತ್ತು.

ಬಿಸಿ ಆಗಲ್ಲ!
ಬಹುತೇಕ ಮೊಬೈಲ್‌ಗಳ ಬಗ್ಗೆ ಇರುವ ದೂರೆಂದರೆ ಅವು ಬಿಸಿ ಆಗುತ್ತವೆ. ತುಂಬಾ ಹೊತ್ತು ಮಾತಾಡಿದರೆ, ಗೇಮ್ಸ್ ಬಳಸಿದರೆ, ಚಾರ್ಜ್ ಹಾಕಿಕೊಂಡು ಮಾತನಾಡಿದರೆ ಸಾಮಾನ್ಯವಾಗಿ ಎಲ್ಲ ಮೊಬೈಲ್‌ಗಳೂ ಬಿಸಿಯಾಗುತ್ತವೆ. ಮೊಬೈಲನ್ನು ವೈಫೈ ಹಾಟ್‌ಸ್ಪಾಟ್ ಮಾಡಿದರಂತೂ ಮೊಬೈಲ್ ಸುಡುವಷ್ಟು ಬಿಸಿಯಾಗುತ್ತದೆ. ಆದರೆ ಜ್ಯೋನಿ ಇ7 ಬಿಸಿಯಾಗುವುದಿಲ್ಲ. ಇದನ್ನು ಪರೀಕ್ಷೆ ಮಾಡಲೆಂದೇ ಮೊಬೈಲನ್ನು ಚಾರ್ಜ್ ಹಾಕಿ, 3ಜಿ ಆನ್ ಇಟ್ಟು, ಮೊಬೈಲನ್ನು ವೈಫೈ ಹಾಟ್‌ಸ್ಪಾಟ್ ಆಗಿ ಮಾರ್ಪಡಿಸಿ ಟ್ಯಾಬ್ಲೆಟ್‌ನಲ್ಲಿ ಈ ವೈಫೈ ಸಂಪರ್ಕವನ್ನು ಬಳಸಿದೆ. ಇಷ್ಟು ಮಾಡಿದರೂ ಮೊಬೈಲ್ ಮಾತ್ರ ತಣ್ಣಗೆ ಕುಳಿತಿತ್ತು! ನೀವು ಪಠ ಹಿಡಿದು ಪ್ರಯತ್ನ ಮಾಡಿದರೆ ಒಂದ್ ಸ್ವಲ್ಪ ಬೆಚ್ಚಗಾಗಬಹುದು. ಅಷ್ಟೇ ಹೊರತು, ನಿಮ್ಮ ಕಿವಿಯ ಅನುಭವಕ್ಕೆ ಬರುವಷ್ಟು ಬಿಸಿಯಂತೂ ಆಗುವುದೇ ಇಲ್ಲ!

ಮೇಡ್ ಫಾರ್ ಶೂಟಿಂಗ್
ಒಂದೊಳ್ಳೆ ಪ್ರೊಫೆಷನಲ್ ಮೊಬೈಲ್ ಜತೆಗೆ ಒಳ್ಳೆಯ ಕ್ಯಾಮೆರಾ ಮೊಬೈಲ್ ಆಗಿಯೂ ಇದನ್ನು ರೂಪಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ. ಮೆಗಾಪಿಕ್ಸೆಲ್‌ಗಿಂತ ಮುಖ್ಯವಾಗಿ ಕ್ಯಾಮೆರಾದಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡಲಾಗಿದೆ. ಎಷ್ಟು ಆಯ್ಕೆಗಳಿವೆ ಎಂದರೆ ಬಹುಶಃ ಅಷ್ಟೂ ಆಯ್ಕೆಗಳನ್ನು ನೀವು ಬಳಸಲಾರಿರಿ ಅಷ್ಟು ಆಯ್ಕೆಗಳಿವೆ. ಒಂದು ಪ್ರೊಫೆಷನಲ್ ಕ್ಯಾಮೆರಾದಲ್ಲಿರುವಷ್ಟು ಮತ್ತು ಅಂಥ ಆಯ್ಕೆಗಳನ್ನು ನೀಡಲಾಗಿದೆ.  ಸೆಲ್ಫಿಗಳು (ನಾವೇ ನಮ್ಮ ಫೋಟೊ ತೆಗೆಯುವುದು) ಹೆಚ್ಚುತ್ತಿರುವ ಈ ಕಾಲದಲ್ಲಿ ಜ್ಯಾನಿ ಇ7 ಮುಂಬದಿ ಕ್ಯಾಮೆರಾ ಬಗ್ಗೆ ಹೇಳಲೇಬೇಕು. ಸಾಮಾನ್ಯವಾಗಿ ಮೊಬೈಲ್‌ನ ಮುಂಬದಿ ಕ್ಯಾಮೆರಾ ರೆಸಲ್ಯೂಷನ್ ಕಡಿಮೆ ಇರುತ್ತದೆ. ಜ್ಯೋನಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಿದೆ. ಸಾಮಾನ್ಯವಾಗಿ ಮೊಬೈಲ್‌ನ ಮುಂಬದಿ ಕ್ಯಾಮೆರಾದಲ್ಲಿ ತುಂಬಾ ಹತ್ತಿರದಿಂದ ಫೋಟೊ ತೆಗೆದರೆ ಅಷ್ಟು ಉತ್ತಮವಾದ ಫೊಟೋ ಬರುವುದಿಲ್ಲ. ಆದರೆ ಜ್ಯಾನಿ ಇ7ನ ಮುಂಬದಿ ಕ್ಯಾಮೆರಾದಿಂದ ಫೋಟೊ ತೆಗೆದರೆ ಬೇರಾವುದೋ ಮೊಬೈಲ್‌ನ ಹಿಂಬದಿ ಕ್ಯಾಮೆರಾದಲ್ಲಿ ಬಂದಷ್ಟು ಉತ್ತಮವಾದ ಫೋಟೊ ಬರುತ್ತದೆ.

ಸೂಪರ್ ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಹಳ ಹೊತ್ತು ಬರಲ್ಲ ಎಂಬುದು ಬಹುತೇಕರ ದೂರು. ಆದರೆ ಜ್ಯೋನಿ ಈ ಮಾತಿಗೆ ಕೂಡ ಅಪವಾದದಂತಿದೆ. ಜ್ಯೋನಿ ಇ7 5.5 ಇಂಚು ಎಚ್‌ಡಿ ಸ್ಕ್ರೀನ್ ಹೊಂದಿದೆ. ಆದರೆ ಬೇರೆ ಮೊಬೈಲ್‌ಗೆ ಹೋಲಿಸಿದರೆ ಕಡಿಮೆ ಸಾಮರ್ಥ್ಯದ ಅಂದರೆ 2500 ಎಂಎಎಚ್ ಬ್ಯಾಟರಿ ಹೊಂದಿದೆ. ಆದರೆ ಸ್ಯಾಮ್‌ಸಂಗ್ ಎಸ್4ಗೆ ಹೋಲಿಸಿದರೆ (ಎಸ್4ನಲ್ಲಿ 2600 ಎಂಎಎಚ್ ಬ್ಯಾಟರಿ ಇದೆ ಸ್ಕ್ರೀನ್ ಸೈಜ್ 5 ಇಂಚು) ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಬೆಳಗ್ಗೆ ಚಾರ್ಜ್ ಮಾಡಿದರೆ ಒಂದು ದಿನದ ಬಳಕೆಗೆ ಯಾವ ತೊಂದರೆಯೂ ಇಲ್ಲ. ಇದಕ್ಕೆ ಕಾರಣ ಲಿ-ಪಾಲಿಮರ್ ಬ್ಯಾಟರಿ. ಈ ಬ್ಯಾಟರಿ ಹೆಚ್ಚು ಸಾಮರ್ಥ್ಯದ ಲಿ-ಐಆನ್ ಬ್ಯಾಟರಿಗಳಿಗಿಂತ ಹೆಚ್ಚು ಸಮಯ ಬರುತ್ತದೆ. ಇದೇ ಕಾರಣಕ್ಕೆ ಮೊಬೈಲ್ ಬಿಸಿ ಕೂಡ ಆಗುವುದಿಲ್ಲ.
2 ಉತ್ತಮ ಗುಣಮಟ್ಟದ ಸ್ಪೀಕರ್ ಕೂಡ ಹೊಂದಿದೆ. ಹೇಳುತ್ತ ಹೋದರೆ ಇನ್ನೂ ಸಾಕಷ್ಟಿದೆ. ಈ ಮೊಬೈಲ್ ಯುನಿಬಾಡಿ ಡಿಸೈನ್ ಹೊಂದಿದೆ. ಅಂದರೆ ನೀವು ಬ್ಯಾಟರಿ ತೆಗೆಯಲು ಬರುವುದಿಲ್ಲ. ಮೆಮೋರಿ ಕಾರ್ಡ್ ಅಳವಡಿಸಲು ಸಾಧ್ಯವಿಲ್ಲ. ಈ ಮೊಬೈಲ್ 16 ಜಿಬಿ ಮತ್ತು 32 ಜಿಬಿ ಆಯ್ಕೆಯಲ್ಲಿ ಲಭ್ಯವಿದೆ. ಇಷ್ಟೆಲ್ಲ ಕೇವಲ 23,800 ರಿಂದ ರು. 29,500 ದರದಲ್ಲಿ ಲಭ್ಯವಿದೆ.


ಹ್ಯಾಂಗ್‌ನ ಮಾತಿಲ್ಲ
ಹ್ಯಾಂಗ್ ಆಗೋದು, ರೀಸ್ಟಾರ್ಟ್ ಮಾಡಬೇಕಾದ ಸ್ಥಿತಿ ಬರೋದೇ ಇಲ್ಲ. ಸ್ನ್ಯಾಪ್‌ಡ್ರ್ಯಾಗನ್ 800 ಪ್ರೊಸೆಸರ್ ಇರೋದು ಒಂದು ಕಾರಣ ಇರಬಹುದು. ಇನ್ನೊಂದು ಕಾರಣ ಬಹುಶಃ ಸಾಫ್ಟ್‌ವೇರ್. ಇದರಲ್ಲಿ ಇರೋದು ಆ್ಯಂಡ್ರಾಯ್ಡ್ ಸಾಫ್ಟ್‌ವೇರ್ ಆದರೂ ಅದನ್ನು ಸಾಕಷ್ಟು ಬದಲಾಯಿಸಲಾಗಿದೆ. ಅದಕ್ಕೇ ಕಂಪನಿ ಅದಕ್ಕೆ ಅಮಿಗೊ 2 ಎಂದು ಹೆಸರಿಟ್ಟಿದೆ. ಈ ಸಾಫ್ಟ್‌ವೇರ್ ಆ್ಯಂಡ್ರಾಯ್ಡ್‌ಗಿಂತ ತುಂಬಾ ಪ್ರತ್ಯೇಕವಾಗಿಯೂ ಇದೆ.


- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com