ಲ್ಯಾಪ್ ಟಾಪ್ 5

ಲ್ಯಾಪ್ ಟಾಪ್ 5
Updated on: 

1. ಸೋನಿ ವಯೊ ಡ್ಯುಯೊ
ಇದು ಬಹುಶಃ ಮಾರುಕಟ್ಟೆಯಲ್ಲಿರುವ ಉತ್ತಮ ಲಭ್ಯವಿರುವ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್. 13.3 ಎಚ್‌ಡಿ ಟಚ್‌ಸ್ಕ್ರೀನ್ ಹೊಂದಿದ್ದು, ಜತೆಗೆ ಕೀಬೋರ್ಡ್ ಕೂಡ ಹೊಂದಿದೆ. ಇದರ ಜತೆಗೆ ಸ್ಟೈಲ್ಸ್ ನೀಡಲಾಗಿದ್ದು, ಕೇವಲ 1.3 ಕೆಜಿ ಭಾರವಿದೆ. ಇದರಿಂದಾಗಿ ಟ್ಯಾಬ್ಲೆಟ್ ರೀತಿಯಲ್ಲಿ ಬಳಸಲು ಅನುಕೂಲವಾಗಿದೆ. ಬ್ಯಾಟರಿ ಲೈಫ್ ಕೂಡ ಚೆನ್ನಾಗಿದೆ. ಮಡಚಿದ ತಕ್ಷಣ ಕೀಬೋರ್ಡ್ ಹಿಂದೆ ಹೋಗಿ, ಸ್ಕ್ರೀನ್ ಮುಂದೆ ಬರುತ್ತದೆ. ಆಗ ಅದನ್ನು ನೀವು ಟ್ಯಾಬ್ಲೆಟ್ ರೂಪದಲ್ಲಿ ಬಳಸಬಹುದು. ಕೀಬೋರ್ಡ್ ಬೇಕು ಎಂದಾದರೆ ಸ್ಕ್ರ್ಯೂ ತೆರೆದು ಲ್ಯಾಪ್‌ಟಾಪ್ ಮಾದರಿಯಲ್ಲಿ ಬಳಸಬಹುದು. ದರ ಹೆಚ್ಚಿರುವುದರಿಂದ ಮತ್ತು ಸ್ಕ್ರೀನ್ ನೋಡುವ ಕೋನಗಳು ಸೀಮಿತವಾಗಿರುವುದರಿಂದ ಅತ್ಯುತ್ತಮ ಲ್ಯಾಪ್‌ಟಾಪ್ ಎನ್ನಲಾಗದು. ಆದರೆ ಉತ್ತಮ ಮತ್ತು ನವೀನ ವಿನ್ಯಾಸಕ್ಕಾಗಿ ಮೊದಲ ಸ್ಥಾನದಲ್ಲಿದೆ.

2. ಆಸಸ್ ಟೈಚಿ
ಇದೊಂಥರಾ ವಿಚಿತ್ರ ವಿನ್ಯಾಸ. ನಿಜಕ್ಕೂ ಒಂದು ಲ್ಯಾಪ್‌ಟಾಪ್‌ಗೆ ಎರಡು ಸ್ಕ್ರೀನ್ ಬೇಕೆ? ಅದರಿಂದ ಉಪಯೋಗವೇನು ಸುಮ್ಮನೆ ಬ್ಯಾಟರಿ ಬೇಗ ಖರ್ಚು ಆಗಬಹುದಲ್ಲವೇ ಇನ್ನೊಬ್ಬರಿಗೆ ತೋರಿಸಬೇಕು ಎಂದರೆ ಲ್ಯಾಪ್‌ಟಾಪ್ ಅನ್ನು ತಿರುಗಿಸಿ ತೋರಿಸಬಹುದಲ್ಲ ಎಂಬೆಲ್ಲ ಪ್ರಶ್ನೆಗಳು ಮೂಡಬಹುದು. ಆದರೆ ಆಸಸ್ ಕಂಪನಿ ಎಂಜಿನಿಯರ್‌ಗಳಿಗೆ ಹಾಗೇನೂ ಅನ್ನಿಸಿಲ್ಲವಂತೆ. ಅವರು ಎರಡು ಟಚ್ ಸ್ಕ್ರೀನ್ ಹೊಂದಿರುವ ಟೈಚಿ ಸಿದ್ಧಪಡಿಸಿದ್ದಾರೆ. ಎರಡು ಸ್ಕ್ರೀನ್‌ನಿಂದಾಗಿ ಇದು ಅನಗತ್ಯವಾಗಿ ದುಬಾರಿಯಾಗುವಂತಾಗಿದೆ. ಇದರ ಉಪಯೋಗವೆಂದರೆ ನೀವು ಲ್ಯಾಪ್‌ಟಾಪ್‌ನಂತೆ ಎದುರು ಬದಿ ಸ್ಕ್ರೀನ್ ಬಳಸುವಾಗ ಆಚೆ ಕುಳಿತ ನಿಮ್ಮ ಮನೆಯವರು ಅಥವಾ ಗೆಳೆಯರು ಹಿಂಬದಿ ಸ್ಕ್ರೀನ್‌ನಲ್ಲಿ ಸಿನಿಮಾವನ್ನೋ ಅಥವಾ ಇನ್ನೇನನ್ನೋ ನೋಡಬಹುದು. ಅಥವಾ ನೀವು ನೋಡಿದ್ದನ್ನೇ ಅವರೂ ನೋಡುವ ಅವಕಾಶವೂ ಇದೆ. ಇದನ್ನು ಮಡಚಿದಾಗ ಹಿಂಬದಿ ಸ್ಕ್ರೀನ್ ಎದುರಿಗೆ ಬಂದು ಇದನ್ನು ಟ್ಯಾಬ್ಲೆಟ್‌ನಂತೆ ಬಳಸಲು ಸಾಧ್ಯವಾಗುತ್ತದೆ.

3.ಡೆಲ್ ಎಕ್ಸ್‌ಪಿಎಸ್ 12
ಇದನ್ನು ಡೆಲ್ ಕಂಪನಿ 2012ರಲ್ಲೇ ಬಿಡುಗಡೆ ಮಾಡಿತ್ತು. 2013ರಲ್ಲಿ ಹೊಸ ಪ್ರೊಸೆಸರ್ ಅಳವಡಿಸಿದೆ. ಆದರೂ ಇದನ್ನು ಇಲ್ಲಿ ಸೇರಿಸಲು ಕಾರಣ ಡೆಲ್ ಕಂಪನಿಯ ಈ ಮಾದರಿಯಿಂದಾಗಿ ಲ್ಯಾಪ್‌ಟಾಪ್‌ಗಳಲ್ಲಿ ಹೊಸ ವಿನ್ಯಾಸದ ಶಖೆ ಆರಂಭವಾಯಿತು. ಇದರ ಸ್ಕ್ರೀನ್ ಅಲ್ಯೂಮಿನಿಯಂ ಫ್ರೇಮ್ ಹೊಂದಿದ್ದು, ಸ್ಕ್ರೀನ್ ತಿರುಗುತ್ತದೆ. ನಿಮಗೆ ಬೇಕು ಅಂದಾಗ ಅದನ್ನು ತಿರುಗಿಸಿ ಟ್ಯಾಬ್ಲೆಟ್ ರೀತಿಯಲ್ಲಿ ಬಳಸಲು ಅನುಕೂಲವಾಗುವಂತೆ ಮಾಡಿಕೊಳ್ಳಬಹುದು.

4. ಆಸ್ ಟ್ರಾನ್ಸ್‌ಫಾರ್ಮರ್ ಬುಕ್
ಹೊಸತನಗಳು ತುಂಬಿರುವ ಗ್ಯಾಜೆಟ್ ಇದು. ಇದು ನಿಜಾರ್ಥದಲ್ಲಿ ಒಂದರಲ್ಲಿ ಎರಡು ಗ್ಯಾಜೆಟ್. ಆದರೆ ಆಸಸ್ ಇದನ್ನು ಟ್ರಯೋ ಅಂದರೆ ಒಂದರಲ್ಲಿ 3 ಗ್ಯಾಜೆಟ್ ಎಂದು ಕರೆಯುತ್ತಿದೆ. ಸ್ಕ್ರೀನನ್ನು ನೀವು ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿ ಬಳಸಬಹುದು. ಹಾಗೆಯೇ ಅದನ್ನು ಕೀಬೋರ್ಡ್ ಡಾಕ್‌ಗೆ ಅಳವಡಿಸಿದರೆ ವಿಂಡೋಸ್ 8 ಟಚ್ ಸ್ಕ್ರೀನ್ ಲ್ಯಾಪ್‌ಟಾಪ್ ಆಗಿ ಕೆಲಸ ಮಾಡುತ್ತದೆ. ಇದು ಡಾಕ್‌ನಲ್ಲಿ ಒಂದು ಹಾಗೂ ಸ್ಕ್ರೀನ್‌ನಲ್ಲಿ ಒಂದು ಹೀಗೆ ಎರಡು ಯಂತ್ರಗಳನ್ನು ಹೊಂದಿದೆ. ನೀವು ಸ್ಕ್ರೀನನಲ್ಲಿ ಆ್ಯಂಡ್ರಾಯಿಡ್ ಟ್ಯಾಬ್ಲೆಟ್ ಬಳಸುತ್ತಿರುವಾಗ ಕೀಬೋರ್ಡ್ ಡಾಕನ್ನು ಇನ್ನೊಂದು ಸ್ಕ್ರೀನಿಗೆ ಅಳವಡಿಸಿ ಅದನ್ನು ವಿಂಡೋಸ್ ಕಂಪ್ಯೂಟರ್ ಆಗಿ ಬಳಸಬಹುದು.

5. ಏಸರ್ ಆಸ್ಪಾಯರ್ ಆರ್ 7
ಇದು ಲ್ಯಾಪ್‌ಟಾಪ್. ಟ್ಯಾಬ್ಲೆಟ್ ರೀತಿಯಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ ಇದರ ಸ್ಕ್ರೀನನ್ನು ನಿಮಗೆ ಬೇಕಾದ ಹಾಗೆ ಇರಿಸಿಕೊಳ್ಳುವ ಅವಕಾಶವಿದೆ. ಕೀಬೋರ್ಡ್ ಜತೆಗಿರುವ ಟಚ್‌ಪ್ಯಾಡ್ ಅನ್ನು ಕೀಬೋರ್ಡ್‌ನ ಹಿಂದೆ ಅಳವಡಿಸಲಾಗಿದೆ. ಸ್ಕ್ರೀನ್‌ನ ಹಿಂದೆ ಹಿಂಜ್ ಅಥವಾ ಇಜೆಲ್ ಅಳವಡಿಸಲಾಗಿದೆ. ಇದು ಸ್ಕ್ರೀನನ್ನು ಆಧರಿಸಿಕೊಂಡಿದ್ದು, ನಿಮಗೆ ಬೇಕಾದ ಹಾಗೆ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಟಚ್ ಸ್ಕ್ರೀನ್ ಆಗಿರುವುದರಿಂದ ನಿಮಗೆ ಬೇಕಾದ ಹಾಗೆ ಸ್ಕ್ರೀನ್ ಅಳವಡಿಸಿಕೊಳ್ಳುವ ಅವಕಾಶ ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com