ಮಂಗಳನ ಮೇಲ್ಮೈಯಲ್ಲಿ ಖನಿಜ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ

ಮಂಗಳ ಗ್ರಹದ ಅಧ್ಯಯನಕ್ಕಾಗಿ ಅಂಗಾರಕನ ಅಂಗಳಕ್ಕಿಳಿದಿರುವ ನಾಸಾದ ಮಾರ್ಸ್ ರೋವರ್ ಕ್ಯೂರಿಯಾಸಿಟಿ ಅಲ್ಲಿನ...
ಮಂಗಳನ ಮೇಲ್ಮೈಯಲ್ಲಿ ಖನಿಜ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ
Updated on: 

ವಾಷಿಂಗ್ಟನ್: ಮಂಗಳ ಗ್ರಹದ ಅಧ್ಯಯನಕ್ಕಾಗಿ ಅಂಗಾರಕನ ಅಂಗಳಕ್ಕಿಳಿದಿರುವ ನಾಸಾದ ಮಾರ್ಸ್ ರೋವರ್ ಕ್ಯೂರಿಯಾಸಿಟಿ ಅಲ್ಲಿನ ಖನಿಜಗಳನ್ನು ಪತ್ತೆ ಹಚ್ಚಿದೆ.
ಕ್ಯೂರಿಯಾಸಿಟಿಯ ಈ ಕೆಲಸಗಳಿಗೆ ಕಾನ್ಫಿಡೆನ್ಸ್ ಹಿಲ್ಸ್ ಎಂದು ಹೆಸರಿಟ್ಟಿದ್ದು, ಅಂಗಾರಕ ಮೇಲ್ಮೈನಲ್ಲಿ ಕಲ್ಲು ಮತ್ತು ಮಣ್ಣಿನ ಅಂಶವಿರುವುದಾಗಿ ಕ್ಯೂರಿಯಾಸಿಟಿ ತಿಳಿಸಿದೆ.

ಈ ಮಾರ್ಸ್ ರೋವರ್ ತಿಂಗಳುಗಳ ಹಿಂದೆ ಮಂಗಳನಲ್ಲಿರುವ ಮೌಂಟ್ಶಾರ್ಪ್ ಪರ್ವತ ಪ್ರದೇಶದಲ್ಲಿ ರಂಧ್ರ ಕೊರೆದಿತ್ತು. ರಂಧ್ರ ಕೊರೆದ ನಂತರ ಅಲ್ಲಿರುವ ಖನಿಜಗಳ ಬಗ್ಗೆ ಪತ್ತೆ  ಹಚ್ಚಿದ್ದು, ಇದು ಮುಂದಿನ ಅನ್ವೇಷಣೆಗಳಿಗೆ ಸಹಕಾರಿಯಾಗಲಿದೆ ಎಂದು ಕ್ಯೂರಿಯಾಸಿಟಿ ಪ್ರಾಜೆಕ್ಟ್ ವಿಜ್ಞಾನಿ ಜಾನ್ ಗ್ರೋಟ್ಜಿಂಜರ್ ಹೇಳಿದ್ದಾರೆ.

ಕ್ಯೂರಿಯಾಸಿಟಿ ಕೊರೆದಿರುವ ರಂಧ್ರದ ಪ್ರಧಾನ ಭಾಗಕ್ಕೆ ನಾವೀಗ ತಲುಪಿದ್ದು, ಇಲ್ಲಿ ಸಿಗುವ ಖನಿಜಗಳ ಮಾಹಿತಿ ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದಿದೆ ಎಂದು ಬ್ರೌನ್ ಯುನಿವರ್ಸಿಟಿಯ ಡಾ. ರಾಲ್ಫ್ ಮಿಲ್ಲಿಕೇನ್ ಹೇಳಿದ್ದಾರೆ.

ಏತನ್ಮಧ್ಯೆ ಇಲ್ಲಿ ಸಿಕ್ಕಿರುವ ಖನಿಜಗಳ ಗುಣಗಳನ್ನು ಆಧರಿಸಿ ಇನ್ನು ಬೇರೆ ಯಾವ ಸ್ಥಳಗಳಲ್ಲಿ ರಂಧ್ರ ಕೊರೆಯಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ ಡಾ. ರಾಲ್ಫ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com