ಸ್ನ್ಯಾಪ್‌ಚಾಟ್ ಮೂಲಕ ಹಣವನ್ನೂ ಕಳುಹಿಸಿ!

ಸ್ನ್ಯಾಪ್‌ಚಾಟ್ ಮೂಲಕ ಗೆಳೆಯರೊಂದಿಗೆ...
ಸ್ನ್ಯಾಪ್ ಚಾಟ್
ಸ್ನ್ಯಾಪ್ ಚಾಟ್

ಸ್ಯಾನ್ ಫ್ರಾನ್ಸಿಸ್ಕೋ: ಸ್ನ್ಯಾಪ್‌ಚಾಟ್ ಮೂಲಕ ಗೆಳೆಯರೊಂದಿಗೆ ಹರಟುತ್ತಿರುವವರಿಗೆ ಸಿಹಿಸುದ್ದಿ. ಇನ್ನು ನಿಮ್ಮ ನಡುವೆ ಸಂದೇಶಗಳು ಮಾತ್ರವಲ್ಲ, ಹಣವೂ ರವಾನೆಯಾಗುತ್ತದೆ!

ಅಚ್ಚರಿಯಾಯಿತೆ? ಮೊಬೈಲ್ ಮೆಸೇಜಿಂಗ್ ಆ್ಯಪ್  ಆಗಿರುವ ಸ್ನ್ಯಾಪ್ ಚಾಟ್ ಈಗ 'ಸ್ನ್ಯಾಪ್ ಕ್ಯಾಶ್‌' ಎಂಬ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ. ಇದರ ಮೂಲಕ ನೀವು ಪರಸ್ಪರ ಹಣವನ್ನೂ ವಿನಿಮಯ ಮಾಡಿಕೊಳ್ಳಬಹುದು. ಇಲ್ಲಿ ಸ್ವೈಪ್ ಮಾಡಲು ಕಾರ್ಡ್ ಬೇಕಾಗಿಲ್ಲ, ಕೇವಲ ಬೆರಳಿದ್ದರೆ ಸಾಕು. ಅಂದ ಹಾಗೆ, ಇಷ್ಟೆಲ್ಲ ಕಸರತ್ತು ಮಾಡಬೇಕೆಂದರೆ ನಿಮಗೆ ಕನಿಷ್ಠ 18 ವಯಸ್ಸಾದರೂ ಆಗಿರಲೇಬೇಕು.

ಟ್ವಿಟರ್ ಸಹಸ್ಥಾಪಕ ಜ್ಯಾಕ್ ಡೋರ್ಸೆ ಅವರ ಮೊಬೈಲ್ ಪಾವತಿ ಕಂಪನಿಯಾದ ಸ್ಕ್ವೇರ್ ಮತ್ತು ಸ್ನ್ಯಾಪ್ ಚಾಟ್ ಸಹಯೋಗದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ  ಬಂದಿದೆ. ಮೊದಲು ನೀವು ನಿಮ್ಮ ಡೆಬಿಟ್ ಕಾರ್ಡ್ ಖಾತೆಯನ್ನು ಸ್ನ್ಯಾಪ್ ಚಾಟ್‌ನೊಂದಿಗೆ ಲಿಂಕ್ ಮಾಡಿಕೊಳ್ಳಬೇಕು. ನಂತರ ಈ ಆ್ಯಪ್ ಮೂಲಕ ಉಚಿತವಾಗಿ ಹಣವನ್ನು ರವಾನಿಸಬಹುದು. ಜ್ಯಾಕ್ ಅವರು ತಮ್ಮ ಕಂಪನಿ. ಸ್ಕ್ವೇರ್ ಕ್ಯಾಷ್ ಟೂಲ್ ಉಪಯೋಗಿಸಿ ಇ-ಮೇಲ್ ಮೂಲಕತ ಹಣ ರವಾನಿಸುತ್ತಿದ್ದರು. ಅದನ್ನು ನೋಡಿ ನಾನು  ಆಶ್ಚರ್ಯ ಚಕಿತನಾದೆ. ಈ ಐಡಿಯಾ ಬಳಸಿ ಸ್ನ್ಯಾಪ್ ಚಾಟ್ ಮೂಲಕವೂ ಹಣದ ವಹಿವಾಟು ನಡೆಸುವಂತೆ ಮಾಡಬಹುದಲ್ಲವೇ ಎಂಬ ಆಲೋಚನೆ ಹೊಳೆಯಿತು ಎಂದಿದ್ದಾರೆ ಸ್ನ್ಯಾಪ್ ಚಾಟ್‌ನ ಸಿಇಒ ಇವಾನ್ ಸ್ಪೀಗಲ್. ಅಮೆರಿಕದಲ್ಲಿ ಈಗಾಗಲೇ ಸ್ನ್ಯಾಪ್ ಕ್ಯಾಷ್ ವ್ಯವಸ್ಥೆ ಕಾರ್ಯಾರಂಭಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com