ಬ್ರಹ್ಮಾಂಡದ ನಿಗೂಢಗಳನ್ನು ಪತ್ತೆ ಹಚ್ಚಲು ಸರ್ನ್ ಕೈಜೋಡಿಸಿದ ಐ ಐ ಟಿ ಮದ್ರಾಸ್

ಸರ್ನ್(ಸಿ ಇ ಆರ್ ಎನ್) ನಲ್ಲಿ ಹಿಗ್ಸ್ ಬಾಸನ್ ಕಣ ಕಂಡು ಹಿಡಿಯಲು ಸಹಕರಿಸಿದ ಅಟ್ಲಾಸ್ ಪ್ರಯೋಗದಲ್ಲಿ ಭಾಗಿಯಾಗಿದ್ದವರೊಬ್ಬರ...
ಐ ಐ ಟಿ ಮದ್ರಾಸ್ - ಸಂಗ್ರಹ ಚಿತ್ರ
ಐ ಐ ಟಿ ಮದ್ರಾಸ್ - ಸಂಗ್ರಹ ಚಿತ್ರ
Updated on: 

ಚೆನ್ನೈ: ಸರ್ನ್(ಸಿ ಇ ಆರ್ ಎನ್) ನಲ್ಲಿ ಹಿಗ್ಸ್ ಬಾಸನ್ ಕಣ(ದೇವ ಕಣ) ಕಂಡು ಹಿಡಿಯಲು ಸಹಕರಿಸಿದ ಅಟ್ಲಾಸ್ ಪ್ರಯೋಗದಲ್ಲಿ ಭಾಗಿಯಾಗಿದ್ದವರೊಬ್ಬರ ಮುಖಂಡತ್ವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಈಗ ಜಿನೀವಾದ ಸಂಸ್ಥೆ ಸರ್ನ್ ಜೊತೆ ಬ್ರಹ್ಮಾಂಡದ ನಿಗೂಢಗಳನ್ನು ಪತ್ತೆ ಹಚ್ಚಲು ಪೂರ್ಣಾವಧಿ ಸಹಭಾಗಿತ್ವದಲ್ಲಿ ಕೆಲಸ ಮಾಡಲಿದೆ.

ಈಗಾಗಲೇ ಭಾರತದ ಗೌರವಾನ್ವಿತ ಸಂಸ್ಥೆಗಳಾದ ಟಿ ಐ ಎಫ್ ಆರ್, ಬಿ ಎ ಆರ್ ಸಿ ಮತ್ತು ಇನ್ನಿತರ ಕೆಲವು ಸಂಸ್ಥೆಗಳು ಈಗಾಗಲೇ ಸರ್ನ್ ಜೊತೆಗೂಡಿದ್ದರೂ, ಐ ಐ ಟಿ ಮದ್ರಾಸ್ ಈ ಯೋಜನೆಯಲ್ಲಿ ಭಾಗಿಯಾಗುತ್ತಿರುವಮೊದಲ ಐ ಐ ಟಿ.

ಭೌತಶಾಸ್ತ್ರದ ವಿಭಾಗದ ಉಪ ಪ್ರಾಧ್ಯಾಪಕ ಪ್ರಫುಲ್ಲ ಲುಮಾರ್ ಬೆಹೆರಾ ಅವರ ಪ್ರಕಾರ ಈ ನಡೆ ಮೂಲ ವಿಜ್ಞಾನ ಸಂಶೋಧನಾ ಕ್ಷೇತ್ರದ ಸಾಧ್ಯತೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ. "ವರ್ಲ್ಡ್ ವೈಡ್ ವೆಬ್ ಅನ್ನೂ ಒಳಗೊಂಡಂತೆ ಸರ್ನ್ ಹಲವಾರು ಸಂಶೋಧನೆಗಳ ತವರು. ಈ ನಮ್ಮ ಸಹಭಾಗಿತ್ವದ ಈ ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗೆ ನಮ್ಮ ಪ್ರತಿಭೆ ಮತ್ತು ಪಾಂಡಿತ್ಯವನ್ನು ಸಮರ್ಪಿಸುತ್ತೇವೆ" ಎಂದಿದ್ದಾರೆ.

ಬೆಹೆರಾ ಅವರು ಹಿಗ್ಸ್ ಬಾಸನ್ ಕಣವನನ್ನು ಕಂಡು ಹಿಡಿಯಲು ಸಹಕರಿಸಿದ ಅಟ್ಲಾಸ್ (ಎ ಟಿ ಎಲ್ ಎ ಎಸ್) ತಂಡದ ಸದಸ್ಯರಾಗಿದ್ದರು ನಂತರ ಐ ಐ ಟಿ ಮದ್ರಾಸಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿ ಭಾರತಕ್ಕೆ ಹಿಂದಿರುಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com